ರಾಣೆಬೆನ್ನೂರಿನಲ್ಲಿ ಅದ್ದೂರಿಯಾಗಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ

ರಾಣೆಬೆನ್ನೂರಿನಲ್ಲಿ ಅದ್ದೂರಿಯಾಗಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ Nijasharan Ambigara Choudaiah's 906th birth anniversary celebrated with pomp and show in Ranebennur

ರಾಣೇಬೆನ್ನೂರು 31: 12ನೇ ಶತಮಾನದ ಬಸವಾದಿ ಶರಣರ ಕಾಲದ, ಸಮ ಕಾಲಿನವರಾದ ಮಹಾನ್ ಶರಣ, ವಚನಕಾರ ಅಂಬಿಗರ ಚೌಡಯ್ಯನವರು, ತಮ್ಮ ತಾತ್ವಿಕ ಚಿಂತನೆಯ ಮೂಲಕ ಶರಣ ಸಂಕುಲದಲ್ಲಿ ವಿಶೇಷತೆ ಕಂಡವರಾಗಿದ್ದಾರೆ. ಅಂಬಿಗರ ಚೌಡಯ್ಯನವರ ಪೀಠ ಸಮುದಾಯದ ಅಸ್ಮಿತೆ, ಪೀಠ ಅಭಿವೃದ್ಧಿ ಕಂಡರೆ ಸಮಾಜ ತನ್ನಿಂದ ತಾನೇ ಅಭಿವೃದ್ಧಿಯಾಗಲಿದೆ ಎಂದು ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ನುಡಿದರು. ಅವರು ಮಂಗಳವಾರ ಇಲ್ಲಿನ ಕಾಕಿ ಜನ ಸೇವಾ ಮಂಟಪದಲ್ಲಿ ತಾಲೂಕಾ ಗಂಗಾಮತಸ್ಥರ ( ಬೆಸ್ತರ ) ಸಂಘವು ಏರಿ​‍್ಡಸಿದ್ದ,  ನಿಜ ಶರಣ ಅಂಬಿಗರ ಚೌಡಯ್ಯನವರ  906 ಜಯಂತೋತ್ಸವ ಸಮಾರಂಭದ  ಸಾನಿಧ್ಯ ವಹಿಸಿ ಮಾತನಾಡಿದರು. 

 ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಸರಕಾರದ ಆಡಳಿತದಿಂದಲೇ, ಬೆಸ್ತ - ಕಬ್ಬಿಗ ಸಮುದಾಯಕ್ಕೆ ಎಸ್ಸಿ ಎಸ್ಟಿ ಮೀಸಲಾತಿ ನೀಡಬೇಕೆಂದು ನಿರ್ಧಾರವಾಗಿದೆ. ಆದರೆ ಇಲ್ಲಿಯವರೆಗೂ ಅದು ಜಾರಿಗೆ ಬಂದರೂ ಸಾಧ್ಯವಾಗಿಲ್ಲ ಅದಕ್ಕೆ ಕಾರಣ ಯಾರು? ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡರೆ, ನಮ್ಮೊಳಗಿನ ಅಸಮಾಧಾನ, ಆಸಂಘಟನೆ, ರಾಜಕೀಯ ಶಕ್ತಿ ಕೊರತೆ ಮುಖ್ಯ ಕಾರಣ ಎಂದು ವಿಷಾದಿಸಿದರು.       ಸಂಘಟನೆಯಲ್ಲಿ ಬಲವಿದೆ. ಒಗ್ಗಟ್ಟಿನಲ್ಲಿ ಎಲ್ಲವನ್ನು ಸಾಧಿಸಬಹುದು ಇಲ್ಲದೆ ಹೋದರೆ ಏನು ಸಾಧಿಸಲು ಸಾಧ್ಯವಾಗಲಾರದು ಎಂದು ವಿಶ್ಲೇಷಿಸಿ ಮಾತನಾಡಿದ ಶ್ರೀಗಳು, ಎಂದು ಅಭಿವೃದ್ಧಿಯ ಪರ್ವಕಾಲ ಕೂಡಿಬಂದಿದೆ ಒಂದಾಗಿ ಒಗ್ಗಟ್ಟಾಗಿ ಮುಂದಾಗಿ ಎನ್ನುವ ಘೋಷವಾಕ್ಯ ನಿಮ್ಮದಾಗಲಿ ಎಂದು ಕರೆ ನೀಡಿದರು.   

  ಶರಣ ಚೌಡಯ್ಯನವರು ಅಂದಿನ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ, ಜಾತಿ, ಭೇದ, ಭಾವ ಎಣಿಸದೆ ಸಮಾನತೆಗಾಗಿ ತ್ಯಾಗ ಮಾಡಿದ ಮಹಾನ್ ಶರಣ. ಬಸವಾದಿ ಶರಣರ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಈ ಸಮುದಾಯ ಮತ್ತು ಮಠ-ಪೀಠ ಅಭಿವೃದ್ಧಿಗೆ ಮುಂದಾಗಬೇಕು ಎಂದರು.     ಖಾಲಿ ಮಠದಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ, ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದರ ಹಿಂದೆ ಅನೇಕರು ತಮ್ಮ ತ್ಯಾಗದ ಮೂಲಕ ಮಠದ ಪರಂಪರೆ ಮತ್ತು ಅಭಿವೃದ್ಧಿಗೆ ಶ್ರಮಿಸಿದ್ದಾರೆ ದಿ. ರಾಮಚಂದ್ರ​‍್ಪ ಐರಣಿ ಅವರ ಸ್ಮರಣೆಯ ನುಡಿ ನಮನ ಸಮುದಾಯದ ಎಲ್ಲರಿಗೂ ಮಾದರಿ ಮತ್ತು  ಮಾರ್ಗದರ್ಶನವಾಗಕು ಎಂದರು. 

ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು, ತಮ್ಮ ರಾಜಕೀಯ ಭದ್ರತೆಗೆ ಅವಕಾಶಕೊಟ್ಟು, ಬೆಂಬಲಿಸಿದವರು ಗಂಗಾಮತ ಸಮಾಜ. ತಾವು ಎಂದಿಗೂ ಯಾವ ಕಾಲಕ್ಕೂ ಮರೆಯಲು ಸಾಧ್ಯವಿಲ್ಲ. ತಮ್ಮ ಅಧಿಕಾರದ, ಯಡಿಯೂರ​‍್ಪ ಮತ್ತು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಈ ಸಮುದಾಯಕ್ಕೆ ಏನು ಸಹಾಯ ಮಾಡಬೇಕಾಗಿತ್ತು ಮಾಡಿದ್ದೇವೆ, ಮುಂದೆಯೂ ಸಹ ಮಾಡುತ್ತೇವೆ ಎಂದು ಪೂಜಾರ  ಭರವಸೆ ನೀಡಿದರು.  ತಾಲೂಕ ಅಧ್ಯಕ್ಷ ರಾಜು ರ.ಜಡಮಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ,

ನಗರಸಭೆ ಸದಸ್ಯ ಫುಟ್ಟಪ್ಪ ಮರಿಯಮ್ಮನವರ,  ವರ್ತಕ ಹನುಮಂತಪ್ಪ ಕುರುವತ್ತಿ, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಭೋವಿ, ಹಾವೇರಿ ಅಧ್ಯಕ್ಷ ಬಸವರಾಜ ಕಳಸೂರು, ರಟ್ಟಿಹಳ್ಳಿ ಅಧ್ಯಕ್ಷ ಚಂದ್ರಶೇಖರ ಜಾಡರ, ರಮೇಶ್ ಬಿಸರಹಳ್ಳಿ  ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಮತ್ತು ನಗರದ ವಿವಿಧ ಸಮಾಜಗಳ  25ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಅಧ್ಯಕ್ಷ ಪದಾಧಿಕಾರಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.ವೇದಿಕೆಯಲ್ಲಿ ಉಪಾಧ್ಯಕ್ಷ ಎಮ್‌. ಬಿ. ಚಿನ್ನಪ್ಪನವರ, ಉಪಾಧ್ಯಕ್ಷ ಕೊಟ್ರೇಶಪ್ಪ ಕುದರಿಹಾಳ, ಎಂ.ಎಂ. ಸುಣಗಾರ,

ಹಾಲೇಶ ಜಾಡರ, ಕೊಟ್ರೇಶಪ್ಪ ಎಮ್ಮಿ,ಕಾಳಪ್ಪ ಅಂಬಿಗೇರ, ಹೊನ್ನಪ್ಪ  ಹರವಿ, ಲಕ್ಷ್ಮಣ್ ಸುಣಗಾರ, ಪ್ರದೀಪ್ ಶೇಷಗಿರಿ, ಮತ್ತಿತರ ತಾಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ನಗರದಲ್ಲಿ ಅಂಬಿಗರ ಚೌಡಯ್ಯನವರ ಭವ್ಯ ತೈಲ ಭಾವಚಿತ್ರದ ಬೃಹತ್ ಮೆರವಣಿಗೆ ನಡೆಯಿತು. ಸಮಾವೇಶದಲ್ಲಿ ಸಮಾಜದ ನೂರಾರು ಗಣ್ಯರು, ಮುಖಂಡರು ಉಪಸ್ಥಿತರಿದ್ದರು. ಸುನೀತಾ ರಾ. ಐರಣಿ ವಚನ ವಾಚಿಸಿ ಪ್ರಾರ್ಥಿಸಿದರು.  ಪ್ರೊ, ಡಾ. ಕಾಂತೇಶ ಅಂಬಿಗೇರ ನಿರೂಪಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೊಟ್ರೇಶಪ್ಪ ಕುದರಿಹಾಳ ಸ್ವಾಗತಿಸಿ, ಕರಬಸಪ್ಪ  ಬಾರ್ಕಿ ವಂದಿಸಿದರು.