ಆಧುನಿಕ ಶಸ್ತ್ರಚಿಕಿತ್ಸೆಯಿಂದ ಬೆನ್ನುಮೂಳೆ, ಮೊಣಕಾಲು ಚಿಕಿತ್ಸೆಗೆ ಹೊಸ ದಾರಿ

ಆಧುನಿಕ ಶಸ್ತ್ರಚಿಕಿತ್ಸೆಯಿಂದ ಬೆನ್ನುಮೂಳೆ, ಮೊಣಕಾಲು ಚಿಕಿತ್ಸೆಗೆ ಹೊಸ ದಾರಿ  New avenues for spine and knee treatment through modern surgery

ಲೋಕದರ್ಶನ ವರದಿ 

ಬಳ್ಳಾರಿ, ಆ. 22: ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಾರಾಯಣ ಹೆಲ್ತ್‌ ಸಂಸ್ಥೆ, ತನ್ನ ಆಸ್ಪತ್ರೆಗಳ ಜಾಲದ ಮೂಲಕ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಉತ್ತರ ಕರ್ನಾಟಕದ ರೋಗಿಗಳಿಗೂ ಸ್ಥಳೀಯವಾಗಿಯೇ ಲಭ್ಯವಾಗುವಂತೆ ಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ.  

ಸಂಸ್ಥೆಯ ಆಸ್ಪತ್ರೆಗಳಲ್ಲಿ ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಆರ್ಥೋಪೆಡಿಕ್ ಹಾಗೂ 1 ಸಾವಿರಕ್ಕೂ ಅಧಿಕ ರೋಬೋಟಿಕ್ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ನುರಿತ ತಜ್ಞರ ಸೇವೆಯಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ.  

ಆಸ್ಪತ್ರೆಯ ವೈದ್ಯ ವಿನು ರಾಜ್ ಮಾತನಾಡಿ, ಸೋಂಕು ಮತ್ತು ಕುಳಿತಕೊಳ್ಳುವಿಕೆಗೆ ಒಳಗಾದ ಬೆನ್ನುಮೂಳೆಯ ಚಿಕಿತ್ಸೆಯಲ್ಲಿ ಸಣ್ಣ ತಪ್ಪಿಗೂ ಅವಕಾಶವಿಲ್ಲ. ಓ-ಂಡಿಟ ಮತ್ತು 3ಆ ನ್ಯಾವಿಗೇಷನ್ ತಂತ್ರಜ್ಞಾನದಿಂದ ಮಿಲಿಮೀಟರಿ​‍್ಗಂತಲೂ ಸೂಕ್ಷ್ಮ ನಿಖರತೆ ಸಾಧಿಸಿ, ನರಗಳಿಗೆ ಹಾನಿಯಾಗದಂತೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿದೆ. ಇದರಿಂದ ಹಲವು ರೋಗಿಗಳು 48 ಗಂಟೆಗಳಲ್ಲೇ ಎದ್ದು ನಿಲ್ಲುವ ಸಾಧ್ಯತೆ ಇದೆ ಎಂದರು.  

ಆರ್ಥೋಪೆಡಿಕ್ ಆಂಕಾಲಜಿಸ್ಟ್‌ ಡಾ. ಸುಮನ್ ಎಂ. ಬೈರೆಗೌಡ ಮಾತನಾಡಿ, ಹಿಂದೆ ಮೂಳೆ ಕ್ಯಾನ್ಸರ್ ಬಂದಾಗ ಅಂಗಾಂಗ ಕತ್ತರಿಸುವುದು ಅನಿವಾರ್ಯವಾಗಿತ್ತು. ಆದರೆ ಸುಧಾರಿತ ಕೀಮೋಥೆರಪಿ ಮತ್ತು ಲಿಕ್ವಿಡ್ ನೈಟ್ರೋಜನ್ ಕ್ರಯೋಥೆರಪಿಯಂತಹ ತಂತ್ರಜ್ಞಾನಗಳಿಂದ ನೈಸರ್ಗಿಕ ಅಂಗಾಂಗವನ್ನು ಉಳಿಸಿಕೊಂಡೇ ಕ್ಯಾನ್ಸರ್ ನಿರ್ಮೂಲನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು.  

ಸುಧಾರಿತ ರೋಬೋಟಿಕ್ ತಂತ್ರಜ್ಞಾನ, ಬೆನ್ನುಮೂಳೆ, ಟ್ರಾಮಾ ಹಾಗೂ ಆರ್ಥೋಪೆಡಿಕ್ ಆಂಕಾಲಜಿ ವಿಭಾಗಗಳ ತಜ್ಞರ ಸೇವೆಯನ್ನು ಒಂದೇ ಕಡೆ ಒದಗಿಸುವ ಮೂಲಕ ದೂರದ ಊರುಗಳಿಗೆ ರೋಗಿಗಳು ತೆರಳುವ ಅಗತ್ಯವನ್ನು ತಪ್ಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅವರು ಹೇಳಿದರು.  

ಇದಲ್ಲದೆ, ಸಾಮಾಜಿಕ ಸೇವಕರ ಮೂಲಕ ಅಗತ್ಯವಿರುವ ರೋಗಿಗಳಿಗೆ ಫಂಡಿಂಗ್ ವ್ಯವಸ್ಥೆ ಹಾಗೂ ಸರ್ಕಾರದಿಂದ ಲಭ್ಯವಾಗುವ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಹಕಾರ ನೀಡಲಾಗುತ್ತಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ಪಿಆರ್‌ಒ ವಿನೋದ್ ಕುಮಾರ್ ಮತ್ತು ಜಯಪ್ರಕಾಶ್ ತಿಳಿಸಿದರು.