ಸರ್ಕಾರ ರಚಿಸಲು ನೆತನ್ಯಾಹುಗೆ ಬಹುಮತ: ರಾಷ್ಟ್ರಪತಿ


ಜೆರಸಲೆಮ್ , ಎ 17  ಇಸ್ರೆಲ್ ಪ್ರಧಾನಿ ನೆತನ್ಯಾಹು ಅವರಿಗೆ ಬಹುಮತ ಲಭಿಸಿದ್ದು, ಬೆಂಜಾಮಿನ್ ನೆತನ್ಯಾಹುಗೆ ಮತ್ತೊಮ್ಮೆ ಸರ್ಕಾರ ರಚಿಸಲು ಅವಕಾಶ ಕೊಡಬೇಕು ಎಂದು ಜನಪ್ರತಿನಿಧಿಗಳು ತಮಗೆ ಸಲಹೆ ನೀಡಿರುವುದಾಗಿ ರಾಷ್ಟ್ರಪತಿ ರೀವೆನ್ ರಿವ್ಲಿನ್ ಹೇಳಿದ್ದಾರೆ. ಸಂಸತ್ತಿನ ಅಥವಾ ನೆಸೆಟ್ ನ 120 ಸದಸ್ಯರ ಪೈಕಿ 65 ಮಂದಿ, ನೆತನ್ಯಾಹು ಅವರಗೆ ಸಕರ್ಾರ ರಚಿಸಲು ಅವಕಾಶ ನೀಡಿ ಮತ್ತೊಮ್ಮೆ ಪ್ರಧಾನಿ ಮಾಡಲು ಒಮ್ಮತದ ಸಲಹೆ ನೀಡಿದ್ದಾರೆ ಎಂದು ರಾಷ್ಟ್ರಪತಿ ರಿವ್ಲಿನ್ ತಿಳಿಸಿದ್ದಾರೆ. ಸರ್ಕಾರ ರಚಿಸಲು 120 ಸದಸ್ಯರ ಪೈಕಿ 61 ಸಂಖ್ಯಾಬಲದ ಅಗತ್ಯತೆ ಇದ್ದು, ನೆತನ್ಯಾಹು ಬಹುಮತ ಹೊಂದಿದ್ದಾರೆ. ಹೀಗಾಗಿ ಬುಧವಾರ ಸಕರ್ಾರ ರಚಿಸಲು ರಾಷ್ಟ್ರಪತಿಗಳು ನೆತನ್ಯಾಹು ಅವರನ್ನು ಅಧಿಕೃತವಾಗಿ ಆಹ್ವಾನಿಸಲಿದ್ದಾರೆ. ಕೇಂದ್ರ ಚುನಾವಣಾ ಸಮಿತಿಯು ಏಪ್ರಿಲ್ 9ರಂದು ನಡೆದ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಿದ್ದು, ನೆತನ್ಯಾಹು ಲಿಕುಡ್ ಅವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಆದರೆ, ಇನ್ನೊಂದೆಡೆ ಯುನೈಟೆಡ್ ತೊರಹ್ ಜುದೈಸಮ್ ನ ಅಲ್ಟ್ರ ಸಾಂಪ್ರದಾಯಿಕ ಪಕ್ಷಕ್ಕೆ ಒಂದು ಸ್ಥಾನ ಲಾಭವಾಗಿದೆ ಎಂದು ಸಮಿತಿಯ ವಕ್ತಾರರು ತಿಳಿಸಿದ್ದಾರೆ. ನೆತನ್ಯಾಹು ಹಾಗೂ ಬ್ಲ್ಯೂ ಮತ್ತು ವೈಟ್ ನಾಯಕ ಬೆನ್ನಿ ಗಂಟ್ಜ್ ಇಬ್ಬರು ಸಮಬಲ ಸಾಧಿಸಿದ್ದರೂ ಕೂಡ ಬಲಪಂಥಿಯ ಹಾಗೂ ಅಲ್ಟ್ರ ಓರ್ಥ್ಡಾಕ್ಸ್ ಪಕ್ಷದ ಸದಸ್ಯರು ನೆತನ್ಯಾಹು ಅವರನ್ನು  ಬೆಂಬಲಿಸಿದ್ದರಿಂದ ಅವರೇ ಸಕರ್ಾರ ರಚನೆ ಮಾಡಲಿದ್ದಾರೆ. ಹೀಗಾಗಿ ಐದನೇ ಬಾರಿಗೆ ನೆತನ್ಯಾಹು ಇಸ್ರೆಲ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.