ನವಜೀವನ ಸದಸ್ಯರ ಮಾಸಿಕ ಸಭೆ

ನವಜೀವನ ಸದಸ್ಯರ ಮಾಸಿಕ ಸಭೆ  Navajeevana Members' Monthly Meeting

ರಾಣೇಬೆನ್ನೂರು, ಆ.30: ನಗರದ ಮೆಡ್ಲೇರಿ ರಸ್ತೆ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಕಚೇರಿ-1ರಲ್ಲಿ ನವಜೀವನ ಸದಸ್ಯರ ಮಾಸಿಕ ಸಭೆ ಇತ್ತೀಚೆಗೆ ನಡೆಯಿತು.  ಮಧ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡ ಶಿವಣ್ಣನವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ದಯಾಶೀಲ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.  ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಹುಲ್ಲತ್ತಿ, ಸ್ವಾಕರವೇಕೆ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ಪುಷ್ಪಾ ಬಾದಾಮಿ, ಶಿವಕುಮಾರ ಸ್ವಾಮಿ, ಯೋಜನಾಧಿಕಾರಿಗಳಾದ ಮಂಜುನಾಥ ಗೌಡ, ಎಂ. ಭಾಸ್ಕರ್ ಸೇರಿದಂತೆ ಸಮಿತಿಯ ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.