ರಾಷ್ಟ್ರಮಟ್ಟದ ಇನೋವೇಟಿವ್ ಎಜುಕೇಶನ್ ಕಾನ್ಫರೆನ್ಸ್‌; ಶಾಲೆಯ ಸಾಧನೆ

ರಾಷ್ಟ್ರಮಟ್ಟದ ಇನೋವೇಟಿವ್ ಎಜುಕೇಶನ್ ಕಾನ್ಫರೆನ್ಸ್‌; ಶಾಲೆಯ ಸಾಧನೆ  National level Innovative Education Conference; School achievement

ಲೋಕದರ್ಶನ ವರದಿ 

ಧಾರವಾಡ: ಇಲ್ಲಿನ ಪ್ರಜೆಂಟೇಶನ್ ಕಾನ್ವೆಂಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನುಷಾ ಎನ್‌. ರಾಜೂರ್ ಹಾಗೂ ಭೂಮಿ ಎಸ್‌.ಎಂ. ಅವರು ಕುಪ್ಪಂನಲ್ಲಿ ನಡೆದ ರಾಷ್ಟ್ರಮಟ್ಟದ ಇನೋವೇಟಿವ್ ಎಜುಕೇಶನ್ ಹಿ2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.  

ಈ ಸಾಧನೆಗೆ ಶಾಲೆಯ ಮುಖ್ಯಸ್ಥ ಸಿಸ್ಟರ್ ಸಿಲ್ವಿಯಾ ಹಾಗೂ ಸಿಬ್ಬಂದಿ ವರ್ಗದಿಂದ ಅಭಿನಂದನೆ ಸಲ್ಲಿಸಲಾಗಿದೆ. ಈ ವಿದ್ಯಾರ್ಥಿನಿಯರಿಗೆ ಸಿಸ್ಟರ್ ರುಫಿನಾ ಅವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ.  

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಶಿಕ್ಷಕರು ಹಾಗೂ ಸಿಬಿಎಸ್‌ಇ ಸಂಯೋಜಿತ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಆಧಾರಿತ ಕಲಿಕೆಯನ್ನು ಉತ್ತೇಜಿಸುವುದು ಹಾಗೂ ಕಲಿಕೆಯಲ್ಲಿ ನಿರಂತರ ಆಸಕ್ತಿಯನ್ನು ಬೆಳೆಸುವುದು ಮತ್ತು ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವುದಾಗಿದೆ.