ಎಬಿವಿ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಎಬಿವಿ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ  National Doctor's Day celebration at ABV School

ವಿಜಯಪುರ 2: ನಗರದ ಎಬಿವಿ ಶಾಲೆಯಲ್ಲಿ ಜುಲೈ 1 ಮಂಗಳವಾರದಂದು ರಾಷ್ಟ್ರೀಯ ವೈದ್ಯರ ದಿನವನ್ನು ಅತ್ಯಂತ ಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ವೈದ್ಯೋ ನಾರಾಯಣ ಹರಿ ಎಂಬಂತೆ ರಾಷ್ಟ್ರೀಯ ವೈದ್ಯರ ದಿನ, ವೈದ್ಯರ ಸೇವೆಯನ್ನು ಗೌರವಿಸುವ ದಿನ. ಭಾರತದಲ್ಲಿ ಖ್ಯಾತ ವೈದ್ಯ ಬಿದಾನ ಚಂದ್ರ ರಾಯ್ ರವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಎಬಿವಿ ಶಾಲೆಯ ಪ್ರಮುಖ  ಆಕರ್ಷಣೆ ಎಂದರೆ ಪುಟಾಣಿ ಮಕ್ಕಳು ವೈದ್ಯರ ಉಡುಪುಗಳೊಂದಿಗೆ ಅವರು ಸಮಾಜದಲ್ಲಿ ಸಲ್ಲಿಸುತ್ತಿರುವ ವಿಭಿನ್ನವೃತ್ತಿಗಳ ಪಾತ್ರವನ್ನು  ನಿರ್ವಹಿಸಿದ್ದು, ಹಾಗೂ ಅವರು ವೈದ್ಯರ ಕುರಿತು ಹೇಳಿದ ಮಾತುಗಳು ನಿಜಕ್ಕೂ ಆಕರ್ಷಣೀಯವಾಗಿತ್ತು. ಅವರನ್ನು ನೋಡಿದರೆ ಇವರೇ ಮುಂದಿನ ಭಾವಿ ವೈದ್ಯರು ಅನ್ನುವಂತೆ ತೋರುವಂತಿತ್ತು. ಎಬಿವಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ಸಂಗಮ್ ಅವರು ವೈದ್ಯರ ದಿನಾಚರಣೆ ಅಂಗವಾಗಿ, ವೈದ್ಯರ ಮಹತ್ವದ ಬಗ್ಗೆ ಮಾತನಾಡಿ ಆರೋಗ್ಯ ರಕ್ಷಕರಾದ ವೈದ್ಯರು ನಿರ್ವಹಿಸುವ ಅತ್ಯಗತ್ಯ ಪಾತ್ರವನ್ನು ಮಕ್ಕಳಿಗೆ ತಿಳಿಸಿದರು. ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ದೇವರ ಸ್ವರೂಪಿಯಾಗಿ ಕಾಣಿಸುತ್ತಾರೆ. ನಮ್ಮ ಆರೋಗ್ಯದಲ್ಲಿ ಏರುಪೇರಾದಾಗ ನಮ್ಮ ಬದುಕಿಗೆ ಭರವಸೆ ತುಂಬುವ ಹಾಗೂ ಸಂತೋಷಕ್ಕೆ ಕಾರಣರಾಗುವರೆ, ವೈದ್ಯರು ಎಂದು ತಿಳಿಸಿದರು. ಕೋವಿಡ್ 19 ಸಂಕ್ರಾಮಿಕ ಸಮಯದಲ್ಲಿ ತಮ್ಮ  ಪ್ರಾಣವನ್ನು ತಮ್ಮ ಕುಟುಂಬ ವನ್ನು ಲೆಕ್ಕಿಸದೆ ಜನರ ಪ್ರಾಣ ರಕ್ಷಣೆಗೆ ಮುಂದಾದವರೇ ವೈದ್ಯರು ಎಂದು ಭಾವನಾತ್ಮಕವಾಗಿ ನುಡಿದರು. ಹಾಗೆ ಮಕ್ಕಳನ್ನು ಉದ್ದೇಶಿಸಿ ತಮಗೂ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ  ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದಾಗ ತಾವು ಹೆದರದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ತೆಗೆದುಕೊಳ್ಳಬೇಕೆಂಬ ಸಲಹೆ ಯನ್ನು ನೀಡಿದರು. ಇದರ ಜೊತೆಗೆ ಎಬಿವಿ ಶಾಲೆಯು, ವಿದ್ಯಾರ್ಥಿಗಳಿಂದ  ಸ್ವರಚಿತ ಧನ್ಯವಾದ    ಕಾರ್ಡಗಳನ್ನು ವೈದ್ಯರಿಗೆ ನೀಡುವ ಮೂಲಕ ಗೌರವ ನಮನ ಸಲ್ಲಿಸಿತು. ಅದೇ ರೀತಿಯಾಗಿ ಏಳನೇ ತರಗತಿಯ ವಿದ್ಯಾರ್ಥಿನಿಯು ವೈದ್ಯರ ಸೇವೆ ಅವರ ತ್ಯಾಗ ಹಾಗೂ ಅವರು ಕಠಿಣ ಸಮಯದಲ್ಲಿ ತೋರುವ ಧೈರ್ಯವನ್ನು ಕುರಿತು ಆಡಿದ ಅವಳ ಮನದಾಳದ ಮಾತುಗಳು ಎಲ್ಲರ ಮನ ಮುಟ್ಟುವಂತಿತ್ತು.

ಈ ರೀತಿ ಎಬಿವಿ ಶಾಲೆಯಲ್ಲಿ ನಡೆದ ವೈದ್ಯರ ದಿನಾಚರಣೆ ಮಕ್ಕಳಲ್ಲಿ ವೈದ್ಯರ ಮೇಲಿನ ಗೌರವವನ್ನು ಮಾನವೀಯ ಮೌಲ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾಯಿಲೆಯಂಬ ರಾಕ್ಷಸ ನಕ್ಕಾಗ ಅದರ ಜೊತೆ ಹೋರಾಡಿ ಮತ್ತೆ ನಮ್ಮ ಬದುಕಿಗೆ ನಗು ತುಂಬಿದ  ಸಮಸ್ತ ವೈದ್ಯ ವೃಂದಕ್ಕೂ ಹಾಗೂ ಅವರ ಕುಟುಂಬಕ್ಕೂ ಆ ದೇವರು ಆಯುಷ್ಯ ಆರೋಗ್ಯ ಸಂಪತ್ತು  ಕರುಣಿಸಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.