ಗದಗ 23:- ರಾಜ್ಯದ ಸವಾಂರ್ಗೀಣ ಅಭಿವೃದ್ಧಿಯ ಕನಸು ಹೊತ್ತು ಶ್ರಮಿಸುತ್ತಿರುವ ಸರ್ಕಾರದ ಗುರಿ ಸಾಧನೆಗೆ ಕೆ.ಎಚ್. ಪಾಟೀಲರು ಬಿಟ್ಟುಹೋದ ಆದರ್ಶಗಳು ದಾರೀದೀಪವಾಗಿದೆ. ಈ ನಿಟ್ಟಿನಲ್ಲಿ ದಿವಂಗತ ಕೆ ಎಚ್ ಪಾಟೀಲರ ಜನ್ಮ ಶತಮಾನೋತ್ಸವದ ಸುಸಂಧರ್ಭದಲ್ಲಿ ಗದುಗಿನ ಮಲಸಮುದ್ರದಲ್ಲಿರುವ ಪ್ರತಿಷ್ಟಿತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಿವಂಗತ ಕೆ.ಎಚ್. ಪಾಟೀಲರ ಹೆಸರನ್ನು ನಾಮಕರಣ ಮಾಡಲು ಆಡಳಿತಾರೋಢ ಕಾಂಗ್ರೇಸ್ ಸರ್ಕಾರವು ಕ್ರಮವಹಿಸಲು ಮುಂದಾಗಿರುವದು ಸಮಸ್ತ ಗದಗ ಜಿಲ್ಲೆಯ ನಾಗರಿಕರಲ್ಲಿ ಸಂತಸವನ್ನುಂಟು ಮಾಡಿರುತ್ತದೆ.
ಸಮಸ್ತ ನಾಡಿನ ಜನಮೆಚ್ಚಿದ ನಾಯಕ. ಸಹಕಾರ ರಂಗಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ‘ಮಾಜಿ ಸಚಿವ, ದಿ. ಕೆ.ಎಚ್. ಪಾಟೀಲರು ನಿಷ್ಠುರವಾದಿ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದೇ ಜನಜನಿತರರಾಗಿದ್ದವರು.ಗದುಗಿನ ಹುಲಕೋಟಿಯ ಗ್ರಾಮೀಣ ಸೊಗಡಿನೊಂದಿಗೆ ಬೆಳೆದ ಪಾಟೀಲರು ಶಾಸಕರಾಗಿ, ಸಚಿವರಾಗಿ, ಸಹಕಾರ ಧುರೀಣರಾಗಿ ಬೆಳದ ಪರಿ ಅನನ್ಯ. ಅವರು ವ್ಯವಹಾರಿಕ ಅರ್ಥದ ರಾಜಕಾರಣಿಯಾಗಿರಲಿಲ್ಲ, ದಾರ್ಶನಿಕ ಧುರೀಣರಾಗಿದ್ದರು. ರಾಜಕಾರಣಿಗಳು ಮುಂದಿನ ಚುನಾವಣೆಯ ಬಗ್ಗೆ ಯೋಚಿಸಿದರೆ, ದಾರ್ಶನಿಕ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾರೆ. ಎಂಬುದನ್ನು ಸಮಸ್ತ ನಾಗರಿಕರುಕೆ.ಎಚ್. ಪಾಟೀಲರ ಮರೆಯಲಾಗದ ಮಾಣಿಕ್ಯರಾಗಿರುವರು. : ಕೆ ಎಚ್ ಪಾಟೀಲರು ಭವಿಷ್ಯವನ್ನು ಉತ್ತಮಗೊಳಿಸುವ ರೈತರ ಹಿತ ಕಾಪಾಡುವ, ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ಆಶಯವನ್ನು ಸದಾ ಹೊಂದಿದ್ದ ಮಹಾನ್ ನಾಯಕರಾಗಿದ್ದವರು. ತಮ್ಮ ಆದರ್ಶಗಳಿಂದಾಗಿ ಅವರು ಇತರರಿಗೆ ಮಾದರಿಯ ಅನುಕರಣೀಯರಾಗಿದ್ದರು.
ಸಹಕಾರಿ ರಂಗದ ಭೀಷ್ಮ ದಿವಂಗತ ಎಚ್ ಕೆ ಪಾಟೀಲ್ ರು 70 ರ ದಶಕದಲ್ಲಿ ‘ಸಚಿವರಾಗಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಅಖಂಡ ಕಾಂಗ್ರೇಸ್ ಪಕ್ಷದಲ್ಲಿಯೇ ಸಂಘಟನಾ ಚತುರರು ಹಾಗೂ ಆಡಳಿತ ನಿಪುಣರು ಜನಹಿತವನ್ನೇ ಕಾಯಕವಾಗಿಸಿಕೊಂಡಿದ್ದ ಕೆ.ಎಚ್. ಪಾಟೀಲರ ನೇತೃತ್ವದಲ್ಲಿ ರಾಜ್ಯದ ಸಹಕಾರ ಕ್ಷೇತ್ರ ಸದೃಢ ಬೆಳವಣಿಗೆಯನ್ನು ಕಾಣಲು ಕಾರಣೀಭೂತರಾಗಿದ್ದರು.ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಈ ಕ್ಷೇತ್ರಕ್ಕೆ ಗದುಗಿನ ಕಾಣಗಿನಹಾಳ ಗ್ರಾಮವೊಂದರಿಂದಲೇ ಸಹಕಾರಿ ರಂಗಕ್ಕೆ ಮುನ್ನುಡಿ ಬರೆಯಲಾಗಿದ್ದದು. ಅವಿಸ್ಮರಣೀಯವಾಗಿರುತ್ತದೆ. ್ರ್ರಥಮವಾಗಿ ಗದಗ ಜಿಲ್ಲೆಯಿಂದಲೇ ಕೃಷಿ, ಹೈನುಗಾರಿಕೆ, ಸ್ವ ಸಹಾಯ ಸಂಘಗಳಿಗೆ ಸಹಕಾರ ಚಳವಳಿಯನ್ನು ರಾಜ್ಯದೆಲ್ಲೆಡೆ ವಿಸ್ತರಿಸುವಂತಾಗಲು ಕೆ ಎಚ್ ಪಾಟೀಲರ ಕೊಡುಗೆ ವೈವಿಧ್ಯಮಯವಾಗಿರುತ್ತದೆ,
ಬಡ ಶ್ರಮಿಕರ ಆರ್ಥಿಕ ಸ್ಥಿತಿಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು , ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿಯನ್ನು ನೈಜವಾದ ಅರ್ಥದಲ್ಲಿ ರೈತಪರ ಸಂಸ್ಥೆಯನ್ನಾಗಿ ಮಾಡಿದವರು. ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ರೈತರಿಗಾಗುತ್ತಿದ್ದ ಶೋಷಣೆ ತಡೆಯಲು ಹಲವು ಅನುಕರಣೀಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರ ಸ್ನೇಹಿಯಾಗಿರುವರು. ಅಂತೆಯೇ ಸಮಸ್ತ ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಂದು ಹಳ್ಳಿಗಳಿಗೆ ರೈತರ ಶ್ರೇಯೋಭಿವೃದ್ಧಿಗಾಗಿ ಉಗ್ರಾಣ ಕೇಂದ್ರವನ್ನು ಕಟ್ಟಿಸಿದ್ದರು. ಅದರಂತೆ ಹುಲಕೋಟಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾವಯವ ಕೃಷಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಕೃಷಿಕರಿಗೆ ತರಬೇತಿಯಂತಹ ಕಾರ್ಯಕ್ರಮಗಳು, ಪಾಟೀಲರ ರೈತಪರ ಕಾಳಜಿಗೆ ಕನ್ನಡಿ ಹಿಡಿದಿವೆ’
‘1970ರ ದಶಕದಲ್ಲಿ ದೇವರಾಜ ಅರಸು ನೇತೃತ್ವದ ಸಂಪುಟದಲ್ಲಿ ಕೆ.ಎಚ್. ಪಾಟೀಲರು ಅರಣ್ಯ ಸಚಿವರಾಗಿದ್ದರು.ಪರಿಸರ ಸ್ನೇಹಿಯಾಗಿದ್ದ ಶ್ರೀಯುತರು ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಜನರಿಂದ ಅವ್ಯಾಹತವಾಗಿ ಅರಣ್ಯ ನಾಶವನ್ನು ಕಂಡ ಪಾಟೀಲರು ಮರ ಕಡಿಯುವುದನ್ನು ನಿಷೇಧಿಸಲು ಆ ಸಂದರ್ಭದಲ್ಲಿ ಬಿಗಿ ಕಾನೂನುಗಳನ್ನು ತಂದರು. ಅಂದಿನ ಕಾಲದಲ್ಲಿ ಕಾಡು ಭೂಮಿಯ ಮೇಲೆ ಅರಣ್ಯ ಸಚಿವರಾಗಿದ್ದವರಿಗಿದ್ದ ವ್ಯಕ್ತಿಗತ ಅಧಿಕಾರವನ್ನು ಶಾಸನಸಭೆಗೆ ಹಸ್ತಾಂತರಿಸುವ ಮಹತ್ತರ ಕಾನೂನನ್ನು ಜಾರಿಗೆ ಮಾಡಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾಟೀಲರು ಕಾರಣರಾದರು. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಪಾರ ಕಾಳಜಿ ವಹಿಸಿದ್ದ ಕೆ.ಎಚ್.ಪಾಟೀಲರ ದಿಟ್ಟತನದಿಂದ ರಾಜ್ಯದ ಕಾಡುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ’ ಅದುವೇ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆಯಾಗಿರುತ್ತದೆ.
ಇಂತಹ ಒಬ್ಬ ಜನಸ್ಪಂಧನೆಯ ಜನಾಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಮಹಾ ನಾಯಕರನ್ನು ಕಂಡ ಗದಗ ಜಿಲ್ಲೆಯ ಸಮಸ್ತ ನಾಗರಿಕರೇ ಧನ್ಯರು. ಇದೇ ದಿನಾಂಕ 16/03/2025 ರಂದು ದಿವಂಗತ ಕೆ ಎಚ್ ಪಾಟೀಲರ ಜನ್ಮ ಶತಮಾನೋತ್ಸವವನ್ನು ಸಮಸ್ತ ಜಿಲ್ಲೆಯ ಹಾಗೂ ನಾಡಿನ ಸಮಸ್ತ ಜನತೆಯ ಅಪಾರ ಪ್ರೀತಿ ವಿಶ್ವಾಸದ ದ್ಯೋತಕವಾಗಿ ಅತೀ ವಿಜೃಂಭಣೆಯೊಂದಿಗೆ ಶ್ರೀಯುತರ ಜನ್ಮ ದಿನಾಚರಣೆಯನ್ನು ಸನ್ಮಾನ್ಯ ಕೆ ಪಿ ಸಿ ಸಿ ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಹಾಗೂ ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರ ನೇತೃತ್ವದಲ್ಲಿ ಹಾಗೂ ಸನ್ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯೆವಹಾರಗಳ ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಎಚ್ ಕೆ ಪಾಟೀಲ್ ಮತ್ತು ಮಾಜೀ ಶಾಸಕರಾದ ಸನ್ಮಾನ್ಯ ಡಿ ಆರ್ ಪಾಟೀಲ್ ಮತ್ತು ಗದಗ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕುಮಾರ ಕೃಷ್ಣಗೌಡ ಎಚ್ ಪಾಟೀಲರ ಮುಂದಾಳತ್ವದಲ್ಲಿ ಅತೀ ವಿಜೃಂಭಣೆಯಿಂದ ಜನ್ಮ ಶತಮಾನೋತ್ಸವವನ್ನು ಆಚರಣೆ ಮಾಡಲಾಗಿರುತ್ತದೆ.
ಅದರಂತೆ ಅವರ ಕೊಡುಗೆಯ ಪ್ರತೀಕವಾಗಿ ಗದಗ ಜಿಲ್ಲೆಯ ಸಮಸ್ತ ನಾಗರಿಕರ ನೆಚ್ಚಿನ ಜನನಾಯಕ ದಿವಂಗತ ಕೆ ಎಚ್ ಪಾಟೀಲ್ ರ ಹೆಸರನ್ನು ಗದಗ ನ ಪ್ರತಿಷ್ಠಿತ ಗದಗ ಜಿಮ್ಸ್ ಆಸ್ಪತ್ರೆಗೆ ನಾಮಕರಣ ಮಾಡಲಾಗುತ್ತಿರುವದು ಸಮಸ್ತ ನಾಗರಿಕರಿಗೆ ಸಂತಸದ ಸಂಗತಿಯಾಗಿರುತ್ತದೆ. ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಸ್ಪಂಧನೆಯನ್ನು ವ್ಯಕ್ತಪಡಿಸಿರುತ್ತಾರೆ.