ಹೆಸರು ಬೆಳೆ ರೋಗ ಹತೋಟಿಗೆ ಕೃಷಿ ಅಧಿಕಾರಿಗಳ ಸಲಹೆ
Name: Agricultural officials' advice for crop disease control
ಲೋಕದರ್ಶನ ವರದಿ
ಲಕ್ಷ್ಮೇಶ್ವರ 12: ಪ್ರಸ್ತುತ ವರ್ಷದ ಮುಂಗಾರು ಮಳೆ ತಾಲೂಕಿನಲ್ಲಿ ಉತ್ತಮವಾಗಿದ್ದು ರೈತರು ಮುಂಗಾರು ಬೆಳೆಗಳಾದ ಹೆಸರು ಶೇಂಗಾ ಬಿಟಿ ಹತ್ತಿ ಗೋವಿನ ಜೋಳ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ ಬೆಳೆ ಉತ್ತಮವಾಗಿ ಬೆಳೆಯುವ ಸಂದರ್ಭದಲ್ಲಿ ಬೆಳೆಗಳಿಗೆ ರೋಗಗಳು ಕಂಡುಬರುವುದು ಸಹಜ ಅಂತ ಸಮಯದಲ್ಲಿ ಅವುಗಳನ್ನು ಹತೋಟಿಗೆ ತರಲು ಪ್ರಥಮ ಹಂತದಲ್ಲಿಯೇ ರೋಗ ನಿರ್ಮೂಲನೆ ಮಾಡಿದರೆ ಉತ್ತಮ ಬೆಳೆ ತೆಗೆಯಲು ಸಾಧ್ಯ ಆ ದೆಸೆಯಲ್ಲಿ ತಾಲೂಕಿನ ಗೊಜನೂರು ಗ್ರಾಮದಲ್ಲಿ ರೈತರು ಕಳೆದ 20 ದಿನಗಳ ಹಿಂದೆ ಬಿತ್ತಿನೆ ಮಾಡಿದ ಹೆಸರು ಬೆಳೆ ಉತ್ತಮವಾಗಿ ಬೆಳೆದಿದ್ದು ಪ್ರಥಮ ಅಂತದಲ್ಲಿ ಬೆಳೆಗಳಿಗೆ ಯಾವುದೇ ರೋಗಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಮಗೆ ಮಾಹಿತಿ ನೀಡಬೇಕು ಎಂದು ತಾಲೂಕಿನ ಕೃಷಿ ಅಧಿಕಾರಿಗಳಿಗೆ ರೈತರು ತಿಳಿಸಿದರ ಹಿನ್ನೆಲೆ ಶುಕ್ರವಾರ ಮಲ್ಲಪ್ಪ ಸೊರಟೂರು ಎಂಬ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಯನ್ನು ರೈತರ ಜಮೀನಿಗೆತಾಲೂಕಿನ ಕೃಷಿ ಸಹಾಯಕ ನಿರ್ದೇಶಕರಾದ ಶಿವಕುಮಾರ್ ಕಾಶಪ್ಪನವರು ಅವರು ಭೇಟಿ ನೀಡಿದರು.
ಚಿ ಕಳೆದ 20 ದಿನಗಳಿಂದ ಹಿಂದೆ ಭಿತ್ತನೆಗೊಂಡು ಹೆಸರು ಬೆಳೆಯನ್ನು ವೀಕ್ಷಿಸಿದ ಅವರು ಪ್ರಥಮ ಹಂತದಲ್ಲಿ ಹೆಸರು ಬೆಳೆಗೆ ಹರಡಿರುವ ನಂಜಾನು ರೋಗವನ್ನು ಹೇಗೆ ತಡೆಗಟ್ಟಬೇಕು ಹಾಗೂ ಯಾವ ಯಾವ ಕ್ರಿಮಿನಾಶಕವನ್ನು ಬಳಕೆ ಮಾಡಿ ರೋಗದಿಂದ ಬೆಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ರೈತರಿಗೆ ಮಾಹಿತಿ ನೀಡಿದರು ಈ ಸಮಯದಲ್ಲಿ ಗೊಜನೂರು ಗ್ರಾಮದ ರೈತ ಮುಖಂಡರು ಹಾಗೂ ಕೃಷಿಕ ಸಮಾಜ ನವದೆಹಲಿ ತಾಲೂಕು ಅಧ್ಯಕ್ಷರಾದ ಚನ್ನಪ್ಪ ಷಣ್ಮುಖಿ ದ್ಯಾಮಣ್ಣ ಮೋಡಿ ಮಲ್ಲಪ್ಪ ಕಲ್ಲೂರು ಮಲ್ಲಪ್ಪ ಸೊರಟೂರು ಸೇರಿದಂತೆ ಇನ್ನು ಹಲವಾರು ರೈತರು ಇದ್ದರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 