ಎನ್ಎಂಎಂಎಸ್ ಫಲಿತಾಂಶ
NMMS Result
ಲೋಕದರ್ಶನ ವರದಿ
ಧಾರವಾಡ 10: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಣಕಾಸು ಪುರಸ್ಕಾರ ಒದಗಿಸುವ ರಾಷ್ಟ್ರಮಟ್ಟದಲ್ಲಿ ಏಕ ರೂಪದಲ್ಲಿ ನಡೆಯುವ ಕೇಂದ್ರ ಸರ್ಕಾರದ ಎನ್ಎಂಎಂಎಸ್ ‘ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನ’ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಇತ್ತೀಚಿಗೆ ಪ್ರಕಟಿಸಲಾಗಿದೆ. ಜಿಲ್ಲೆಯಿಂದ ಒಟ್ಟು 5965 ವಿದ್ಯಾರ್ಥಿಗಳಲ್ಲಿ 199 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಧಾರವಾಡ ಗ್ರಾಮೀಣ 1145 ವಿದ್ಯಾರ್ಥಿಗಳಲ್ಲಿ 87, ಧಾರವಾಡ ಶಹರ 685ರಲ್ಲಿ 27, ಹುಬ್ಬಳ್ಳಿ ಗ್ರಾಮೀಣ 930ರಲ್ಲಿ 23, ಹುಬ್ಬಳ್ಳಿ ಶಹರ 1092ರಲ್ಲಿ 24, ನವಲಗುಂದ 582ರಲ್ಲಿ 07, ಕುಂದಗೋಳ 614ರಲ್ಲಿ 13, ಕಲಘಟಗಿ 917ರಲ್ಲಿ 18 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಶಿಷ್ಯವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಉಪನಿರ್ದೇಶಕರು(ಅ) ಹಾಗೂ ಪ್ರಾಚಾರ್ಯರು ಡಯಟ್ ಬಸವರಾಜ ಎಂ. ನಾಲತವಾಡ ಹಾಗೂ ಜಿಲ್ಲಾ ಎನ್ಎಂಎಂಎಸ್ ನೋಡಲ್ ಅಧಿಕಾರಿ ಮೇನಕಾ ಮಠದ ಅವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 