ಮುಂಡಗೋಡ ಮಾರಿಕಾಂಬಾ ದೇವಿಯ ದಶಮಾನೋತ್ಸವ
Mundagoda Marikamba Devi's festival
ಮುಂಡಗೋಡ 09: ಪಟ್ಟಣದ ಹಳೂರಿನ ಗ್ರಾಮ ದೇವಿ ಮಾರಿಕಾಂಬಾ ದೇವಿಯ ದೇಗುಲದಲ್ಲಿ ನೂತನ ದೇವಾಲಯ ನವೀಕರಣಗೊಂಡು 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಾರಿಕಾಂಬಾ ದೇವಿ ಹಾಗೂ ನಾಗಚೌಡಿ ಮೂರ್ತಿಗಳ ಪ್ರತಿಷ್ಠಾಪನಾ ದಶಮಾನೋತ್ಸವು ಅದ್ದೂರಿಯಾಗಿ ನಡೆಯಿತು.
ವೇದ ಮೂರ್ತಿ ಲಕ್ಷ್ಮಿ ನಾರಾಯಣ ಭಟ್ ಹಾಗೂ ಉಳಿದ ವೈದಿಕರ ನೇತೃತ್ವದಲ್ಲಿ ಶ್ರೀ ಮಾರಿಕಾಂಬಾ ದೇವಾಸ್ಥಾನದಲ್ಲಿ ಸುಬ್ರಮಣ್ಯ ಶಾಂತಿ ಗಣಹವನ, ದುರ್ಗಾ ಶಾಂತಿ,ಮಾರಿಕಾಂಬಾ ಮೂಲ ಮಂತ್ರ ಹೋಮ, ಚೌಡೇಶ್ವರಿ ಮೂಲ ಮಂತ್ರ, ಹೊಮ ಹಾಗೂ ಚಡಿ ಹವನ ಪೂರ್ಣಾಹುತಿ ಮಹಾ ಪೂಜೆ ವಿಧಿ ವಿಧಾನಗಳನ್ನು ನಡೆಸಲಾಯಿತು. ದೇವಿಗೆ ವಿಶೇಷ ಪುಷ್ಪಾಲಂಕಾರದ ಪೂಜೆ ಮಾಡಲಾಯಿತು ಹಾಗೆಯೇ ರಜತ ಕವಚದ ಅಲಂಕಾರ ಮಾಡಲಾಗಿತ್ತು. ಹಾಗೂ ಮದ್ಯಾಹ್ನ ಅನ್ನಸಂತರೆ್ಣಯನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯು ದರ್ಶನ ಪಡೆದುಕೊಂಡರು.
ನಂತರ ಸಾಯಂಕಾಲ ಜಾಗೃತ ಜಾನಪದ ಸಿ ವಾಯ ಸಿ ಡಿ ಕಲಾತಂಡ ಹರ್ಲಾಪುರ ಇವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 