ಶ್ರೀಆದಿನಾಥ ಪತ್ತಿನ ಸೌಹಾರ್ದ ಸಹಕಾರಿ 72,46549 ರೂ ಲಾಭ

ಶ್ರೀಆದಿನಾಥ ಪತ್ತಿನ ಸೌಹಾರ್ದ ಸಹಕಾರಿ 72,46549 ರೂ ಲಾಭ Mr. Adinath Pattin's friendly cooperative profit of Rs.72,46549

ಉಳ್ಳಾಗಡ್ಡಿ-ಖಾನಾಪೂರ, 24 ; ಒಟ್ಟು 5859 ಸದಸ್ಯರನ್ನು ಹೊಂದಿರುವ ಶ್ರೀ ಆದಿನಾಥ ಪತ್ತಿನ ಸೌಹಾರ್ದ ಸಹಕಾರಿಯು ಪ್ರಸ್ತುತ ವರ್ಷದಲ್ಲಿ 72,46549 ರೂ ಲಾಭದಲ್ಲಿ ಹೊಂದಿದ್ದು ಸದಸ್ಯರಿಗೆ ಶೇ 25 ರಷ್ಟು ಲಾಭಾಂಶ ವಿತರಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷರಾದ ಭರಮಗೌಡಾ ಪಾಟೀಲ ಹೇಳಿದರು,  

ಅವರು ಸಮೀಪದ ಹೆಬ್ಬಾಳ ಗ್ರಾಮದ ಶ್ರೀ ಆದಿನಾಥ ಪತ್ತಿನ ಸಹಕಾರಿ 27 ನೇಯ ವಾರ್ಷಿಕ ಸರ್ವಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿ ಸಹಕಾರಿಯು 138,57,81,376 ರೂ ಗಳಷ್ಟು ವ್ಯವಹಾರ ಹೊಂದಿದ್ದು ಸಹಕಾರಿಯ ಮಸರಗುಪ್ಪಿ ಶಾಖೆಯ ಕಟ್ಟಡ ಪ್ರಾರಂಭಿಸಿದ್ದು ಪ್ರಧಾನ ಕಟ್ಟಡದ ಕಛೇರಿಯನ್ನು ಕಟ್ಟಲು ಒಪ್ಪಿಗೆ ಪಡೆಯಲಾಯ್ತು, ಸಹಕಾರಿಯ ಅಡಿಟ್ ವರ್ಗಿಕರಣ "ಅ" ಆಗಿದ್ದು ಸಹಕಾರಿಯ ಯಶಸ್ಸಿಗೆ ಸದಸ್ಯರ ಹಾಗೂ ಸಿಬ್ಬಂದಿಯವರ ಪರಿಶ್ರಮದ ಫಲವಾಗಿ ಇಂದು ಸಹಕಾರಿಯು ಶ್ರೇಯೋಭಿವೃದ್ದಿ ಕಂಡಿದೆ ಎಂದರು, ವೇದಿಕೆಯಲ್ಲಿ 

ಉಪಾಧ್ಯಕ್ಷರಾದ ದಾದಾಗೌಡಾ ಜಿ ಪಾಟೀಲ, ನಿರ್ದೇಶಕರಾದ ವಿಧ್ಯಾದರ ಹರಾರಿ, ಡಾಽಽವೃಷಭ ಪಾಟೀಲ, ಪ್ರಶಾಂತ ಪಾಟೀಲ, ಜಯಪಾಲ ಹೊನ್ನನ್ನವರ, ವಿಜಯ ಬಾಳಿಕಾಯಿ, ಮಹೇಶ ಸದಲಗಿ, ಸಂದೀಪ ಪಾಟೀಲ, ಬಸ್ತವಾಡ ಶಾಖೆಯ್ಮಧ್ಯಕ್ಷರಾದ ನೇಮಣ್ಣಾ ಮಗದುಮ್ಮ, ಮಸರಗುಪ್ಪಿ ಶಾಖೆಯ ಅಧ್ಯಕ್ಷರಾದ ಶ್ರೀಮಂತ ಚಿಕ್ಕೋಡಿ, ನಾಗೆಮುನ್ನೋಳ್ಳಿ ಶಾಖೆಯ ಮಾರುತಿ ಮರಾಯಿ, ಹಾಗೂ ಹುಕ್ಕೇರಿ ಶಾಖೆಯ ವಿಪುಲ ಬಾಳಿಕಾಯಿ, ಶಾಂತಿನಾಥ ಪಾಟೀಲ, ವೇದಿಕೆಯಲ್ಲಿದ್ದರು, 

ಕಾನೂನು ಸಲಹರಗಾರರಾದ ಪಿ,ವಾಯ್, ಘಸ್ತಿ ಅವರನ್ನು ಸತ್ಕರಿಸಲಾಯ್ತು, ಮುಖ್ಯಶಾಖೆಯ ವ್ಯವಸ್ಥಾಪಕರಾದ ಬಿ,ಟಿ,ಪಾಟೀಲ ಹಾಗೂ ಎಲ್ಲ ಶಾಖೆಗಳ ಸಿಬ್ಬಂದಿಯವರು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು,