ಸಾಧಕರ ಹಿಂದೆ ತಾಯಿ ಪಾತ್ರ ಬಹುಮುಖ್ಯ

ಸಾಧಕರ ಹಿಂದೆ ತಾಯಿ ಪಾತ್ರ ಬಹುಮುಖ್ಯ  Mother's role is very important behind the achievements

            ಹಾವೇರಿ   17: ಸಾಧಕರ ಹಿಂದೆ ತಾಯಿ ಪಾತ್ರ ಬಹುಮುಖ್ಯವಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ಅವರ ಜೀವನ ಮಹಿಳೆಯರಿಗೆ ಪ್ರೇರಣೆಯಾಗಲಿದೆ  ಎಂದು ಹಾವೇರಿ ಮರಾಠ ಸಮಾಜದ ತಾಲ್ಲೂಕ ಅಧ್ಯಕ್ಷರಾದ ಉಮೇಶ ವಾಘ ಹೇಳಿದರು.     ಇಲ್ಲಿನ ಶಿವಾಜಿ ನಗರದ ಒಂದನೆಯ ಕ್ರಾಸಿನಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸಭಾಭವನದಲ್ಲಿ    ಛತ್ರಪತಿ ಶಿವಾಜಿ ಮಹಿಳಾ ಸ್ವ- ಸಹಾಯ ಸಂಘ ಹಾಗೂ ಮರಾಠ ಸಮಾಜದ ವತಿಯಿಂದ ಆಯೋಜಿಸಿದ ಮಾತಾ ಜೀಜಾಬಾಯಿ ಅವರು 428 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.      

            ಮಾತಾ ಜೀಜಾಬಾಯಿ ಅವರು ಮಗ ಛತ್ರಪತಿ ಶಿವಾಜಿ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದಳು. ಜೀಜಾಬಾಯಿ ಧೈರ್ಯ,ಶೌರ್ಯ,ಸಾಹಸ ಹಾಗೂ ಮೌಲ್ಯಗಳನ್ನು ಛತ್ರಪತಿ ಶಿವಾಜಿಗೆ ಕಲಿಸುವ ಮೂಲಕ ಶಿವಾಜಿ ಉತ್ತಮ ನಾಯಕ ಮಹಾರಾಜ ಆಗಲು ಸಹಕಾರಿಯಾಯಿತು.ಮಹಿಳೆಯರೆಲ್ಲರೂ ಸೇರಿ ಅವರ ಜಯಂತಿ ಆಚರಣೆ ಮಾಡುತ್ತಿದ್ದು, ಅವರ ಗುಣಗಳನ್ನು ಅಳವಡಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕಿದೆ ಎಂದರು. ಸ್ವಸಹಾಯ ಸಂಘದ ಅಧ್ಯಕ್ಷರಾದ   ಶಶಿರೇಖಾ ರಮೇಶ ಮುಂಜೋಜಿ ಮಾತನಾಡಿ  ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾಳೆ.ನಮಗೆ ಸಾಧನೆ ಮಾಡಿದ ಮಹಿಳೆಯರ ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗೋಣ.

           ಮಾತಾ ಜೀಜಾಬಾಯಿ ಜೀವನದ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಬೇಕಾಗಿದೆ, ನಾವು ಸಂಘದ ಮೂಲಕ ಸಮಾಜ ಸೇವಾ ಕೆಲಸ ಮಾಡುತ್ತಿದ್ದೇವೆ.ಸಂಘದ ಎಲ್ಲಾ ಸದಸ್ಯರು ಸಹಾಯ ಸಹಕಾರ ನೀಡುತ್ತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು.ಅಮ್ಮಾ ಸಂಸ್ಥೆಯ ಸಂಸ್ಥಾಪಕರಾದ ನಿಂಗಪ್ಪ ಎಂ ಆರೇರ ಅವರು  ಮಾತಾ ಜೀಜಾಬಾಯಿ ಅವರ ಜೀವನದ ಬಗ್ಗೆ ಉಪನ್ಯಾಸ ನೀಡಿದರು.ಇದೇ ಅವಧಿಯಲ್ಲಿ ಮಾತಾ ಜೀಜಾಬಾಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಮಹಿಳೆಯರು ದೇಶಭಕ್ತಿ ಗೀತೆ,ಭಾವಗೀತೆಗಳನ್ನು ಹೇಳಿದರು.ಈ ಸಂದರ್ಭದಲ್ಲಿ ಹಿರಿಯರಾದ   ಇಂದುಮತಿ ಘಾಟಗೆ,   ಲಕ್ಷ್ಮಿಬಾಯಿ ಕಲಾಟೆ, ಕಾರ್ಯದರ್ಶಿ   ಅನಿತಾ ಜಾಧವ ಸೇರಿದಂತೆ,   ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘ(ರಿ)ದ ಸರ್ವ ಸದಸ್ಯರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.