ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯ: ಶಿವಾನಂದಯ್ಯ ಶಾಸ್ತ್ರಿ

ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯ: ಶಿವಾನಂದಯ್ಯ ಶಾಸ್ತ್ರಿ Mother's role is important in children's development: Shivanandaiah Shastri

ಇಂಡಿ 29: ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯವಾಗಿದೆ ಎಂದು ಖ್ಯಾತ ಪುರಾಣಿಕರಾದ ಶಿವಾನಂದಯ್ಯ ಶಾಸ್ತ್ರಿಗಳು ಹೇಳಿದ್ದಾರೆ. 

ಅವರು ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ಜಾತ್ರೆಯ ನಿಮಿತ್ತವಾಗಿ ಇಪ್ಪತ್ತೊಂದು ದಿನಗಳ ಕಾಲ ನಡೆಯುವುತಿರುವ ಇಟಗಿ ಭೀಮಾಂಬಿಕಾ ಪುರಾಣದಲ್ಲಿ ಹೇಳಿದ ಅವರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಿದರೆ ಆಗ ಮಾತ್ರ ಆ ಮಗು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅದರಂತೆ ಇಟಗಿ ಭೀಮಾಂಬಿಕಾ  ಶಿವಶರಣೆಯಾಗಿ, ಪರಮ ಭಕ್ತರನ್ನು ಗಳಿಸಿ ಅನೇಕರ ಮನೆ ಮನ ಪರಿವರ್ತನೆ ಮಾಡಿದ ಮಹಾಮಾತೆ ಭೀಮಾಂಬಿಕೆ. ಬಾಲ್ಯದಲ್ಲಿ ಇಟಗಿ ಭೀಮಮ್ಮ ಕಲಿತಿರಲಿಲ್ಲ. ಅದಕ್ಕೆ ಆಕೆಯಲ್ಲಿ ಚಿಂತೆಯು ಇರಲಿಲ್ಲ. ಭೀಮವ್ವ ಅವರ ಸಾಧನೆ ಬದುಕಿನುದ್ದಕ್ಕೂ ಆಧ್ಯಾತ್ಮಿಕ ಸಾಧನೆಯಾಗಿತ್ತು.ಭೀಮಮ್ಮ ತನ್ನ ಜನಿಸಿದ ಗ್ರಾಮ ಬಿಟ್ಟು ಯಾವ ಗುರುವಿನ ಅನುಹ ಪಡೆಯಲು ಹೋದವಳಲ್ಲ. ಆಧ್ಯಾತ್ಮ ಧರ್ಮಗಳನ್ನು ಗುರುವೆಂದು ನಂಬಿ ಬಡವರ, ಆಶ್ರಯ ಬಯಸಿ ಬರುವವರ ಸಂಕಷ್ಟಗಳಿಗೆ ಪರಿಹಾರ ಸೂಚಿಸುತ್ತಾ. ಯಾರೇ ಬಂದರೂ ಅವರ ಕಣ್ಣೀರು ಒರಿಸಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಮೆರೆದ ಧೀಮಂತ ಸಾಧ್ವಿಮಣಿ. ಇಟಗಿ ಶ್ರೀ ಭೀಮಾಂಬಿಕಾ ತಾಯಿ ಹಾಲುಮತ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಸಂಸಾರಿಕಾಶ್ರಮ ಸ್ವೀಕರಿಸಿ, ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅನೇಕ ಜನರಿಗೆ ಆಶ್ರಯವಾದರು. ನಿರಂತರ ಅನ್ನದಾಸೋಹವನ್ನಿಟ್ಟು ಮಹಾ ದಾಸೋಹಿಯನಿಸಿದರು.  

ಈ ಮಹಾದೇವತೆಯ ಶ್ರೀ ಭೀಮಾಂಬಿಕೆಯವರ ಜೀವನ ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.