ಮೋದಿ ಜನ್ಮದಿನಾಚರಣೆ: 300ಕ್ಕೂ ಅಧಿಕ ಮಂದಿಗೆ ಉಚಿತ ಆರೋಗ್ಯ ತಪಾಸಣೆ

ಮೋದಿ ಜನ್ಮದಿನಾಚರಣೆ: 300ಕ್ಕೂ ಅಧಿಕ ಮಂದಿಗೆ ಉಚಿತ ಆರೋಗ್ಯ ತಪಾಸಣೆ  Modi's Birthday Celebration: Free Health Check-up for Over 300 People


ಸವದತ್ತಿ  17:   ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಶ್ರೀ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಮೂಳೆ ಮತ್ತು ಕೀಲು ಸಾಂದ್ರತೆ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.  ಶಿಬಿರದಲ್ಲಿ ಸವದತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ 300ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.  

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ನಯನಾ ಭಸ್ಮೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ದೊರೆಯುತ್ತಿವೆ. ಬಡವರು ಹಾಗೂ ಸಾಮಾನ್ಯ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಇಂತಹ ಜನಪರ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಂತ ಅಗತ್ಯವೆಂದು ಹೇಳಿದರು.  

ಶಿಬಿರದಲ್ಲಿ ನುರಿತ ವೈದ್ಯರ ತಂಡದಿಂದ ಸಾರ್ವಜನಿಕರಿಗೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ವಿಶೇಷವಾಗಿ ಮೂಳೆ ಹಾಗೂ ಕೀಲುಗಳಿಗೆ ಸಂಬಂಧಿಸಿದ ಸಾಂದ್ರತೆ ತಪಾಸಣೆಯನ್ನೂ ಕೈಗೊಳ್ಳಲಾಯಿತು. ತಪಾಸಣೆಯಲ್ಲಿ ಅಗತ್ಯವಿರುವ ರೋಗಿಗಳಿಗೆ ತಜ್ಞ ವೈದ್ಯರಿಂದ ಉಚಿತ ಸಲಹೆ ಹಾಗೂ ಉಚಿತ ಓಷಧೋಪಚಾರಗಳನ್ನು ವಿತರಿಸಲಾಯಿತು.  

ಈ ಸಂದರ್ಭದಲ್ಲಿ ಡಾ. ಹೇಮಂತ್ ಭಸ್ಮೆ, ಶ್ರೇಯಸ್ ಮಾಮನಿ, ನಾರಾಯಣ ಧನ್ಯಾಯಳ, ಎಂ.ಎಂ. ಯಲಿಗಾರ, ಪಾರ್ವತಿ ಕಾಂತಿಮಠ, ಸುಮಿತ್ರ ಕಾರದಗಿ, ನಾಗವೇಣಿ ಕುಲಕರ್ಣಿ, ಪಲ್ಲವಿ ಪದಕಿ, ಸೀಮಾ ವನಕಿ ಹಾಗೂ ಸುಮಿತ್ರ ಶಿಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.