ಪಟೇಲರ ದೂರವಾಣಿ ಸಂಪರ್ಕ ಮೂಲಕದ ಮಸೀದಿ ಕಮಿಟಿ ಮನವಿಗೆ ಸಚಿವ ಜಮೀರ್ ಸ್ಪಂದನೆ
Minister Zamir responds to the Mosque Committee's request via Patel's phone call
ಕೊಪ್ಪಳ 12: ನಗರದ ಫಿರ್ದೋಸ್ ನಗರ ದಲ್ಲಿರುವ ಫಿರ್ ದೋಸ್ ಮಸೀದಿ ಮತ್ತು ಅರಬ್ಬಿ ಶಾಲೆ ಮದರಸಾ ಕಟ್ಟಡಗಳ ಮತ್ತು ವಿವಿಧ ಅಗತ್ಯ ಸೌಲಭ್ಯಗಳ ಈಡೇರಿಕೆಗಾಗಿ ಕೇಳಿದ ಸರ್ಕಾರ ಮತ್ತು ವಕ್ಫ್ ಇಲಾಖೆಯ ಅನುದಾನಕ್ಕೆ ಮಸೀದಿ ಆಡಳಿತ ಮಂಡಳಿ ಕಮಿಟಿಯ ಮನವಿ ಮೇರೆಗೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಹಾಗು ಸಮಾಜದ ಹಿರಿಯ ಮುಖಂಡ ಅಮ್ಜದ್ ಪಟೇಲ್ ರವರು ದೂರವಾಣಿ ಮೂಲಕ ಇಲಾಖೆಯ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ರವರಿಗೆ ತಿಳಿಸಿದಾಗ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಅದಕ್ಕೆ ನೇರ ಸ್ಪಂದನೆ ನೀಡಿದ ಸಚಿವರು ಒಂದು ಕೋಟಿ ರೂ ಅನುದಾನ ಘೋಷಿಸಿದರು, ಮಸೀದಿ ಹಾಗೂ ಅರಬ್ಬಿ ಶಾಲೆಯ ಎಲ್ಲಾ ದಾಖಲೆಗಳನ್ನು ಸರಕಾರದ ಉಮ್ಮಿದ್ ಯೋಜನೆ ಅಡಿಯಲ್ಲಿ ದಾಖಲಿಕರಣ ಮಾಡಿಸಿ ಸರಕಾರದ ಮತ್ತು ಇಲಾಖೆಯ ಅನುಮತಿ ಪ್ರಮಾಣ ಪತ್ರ ವನ್ನು ಶುಕ್ರವಾರ ಮಸೀದಿಯ ಆಡಳಿತ ಮಂಡಳಿಗೆ ಕಾಗದ ಪತ್ರಗಳನ್ನು ಹಸ್ತಾಂತರಿಸಿದ ಬಳಿಕ ಅಮ್ಜದ್ ಪಟೇಲ್ ಅವರನ್ನು ಸಮಾಜದ ಮತ್ತು ಮಸೀದಿಯ ಕಮಿಟಿ ಪರವಾಗಿ ಸನ್ಮಾನಿಸಿ ಅವರನ್ನು ಶುಭ ಕೋರಿದರು,
ಅಮ್ಜದ್ ಪಟೇಲ್ ರವರ ದೂರವಾಣಿ ಮೂಲಕದ ಕೋರಿಕೆ ಮೇರೆಗೆ ಸಚಿವರು ನೇರ ಸ್ಪಂದನೆ ನೀಡಿ ಅಮ್ಜದ್ ಪಟೇಲ್ ರವರೊಂದಿಗೆ ವಿಡಿಯೋ ವಿಡಿಯೋ ಕಾಲ್ ನಲ್ಲಿ ಮಾತನಾಡಿ ಮಸೀದಿಯ ಮತ್ತು ಅರಬ್ಬಿ ಶಾಲೆಯ ಮದರಸಾ ಕಟ್ಟಡ ಮತ್ತು ಅಗತ್ಯ ಸೌಕರ್ಯ ಗಳು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒಂದು ಕೋಟಿ ರೂಪಾಯಿ ಅನುದಾನ ಘೋಷಿಸಿರುವುದಕ್ಕೆ ಎಲ್ಲರೂ ಸೇರಿ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿ ಸರಕಾರಕ್ಕೆ ಸಚಿವರಿಗೆ ಮತ್ತು ಅಮ್ಜದ್ ಪಟೇಲ್ ರವರ ಪ್ರಮಾಣಿಕ ಪ್ರಯತ್ನಕ್ಕೆ ಅಭಿನಂದಿಸಿ ಶುಭ ಕೋರಿದರು, ಈ ಸಂದರ್ಭದಲ್ಲಿ ಫಿರ್ ದೋಸ್ ಮಸೀದಿಯ ಪೇಶ್‌ಇಮಾಮ ಮೌಲಾನ ಸಿರಾಜುದ್ದೀನ್ ರಶಾದಿ, ಆಡಳಿತ ಮಂಡಳಿಯ ಸಂಚಾಲಕ ಬಹದ್ದೂರ್ ಖಾನ್ ಅಲಿಯಾಸ್ ಬಾಬಾ ಖಾನ್, ಶಫೀಕ ಖಾನ್, ಫಾರೂಕ್ ಅಹಮದ್ ಖಾನ್ ತೌಸೀಫ್ ಖಾನ್ ಘ ಗೌಸ ಸಾಬ್ ಸರ್ದಾರ್, ರಶೀದ್ ಸಾಬ್, ಯಾಕೂಬ್ ಸಾಬ್ ಕಮ್ಮಾರ್, ಎಂಡಿ ಜಹೀರ್ ಅಲಿ ,ಮುನೀರ್ ಅಹಮದ್ ಸಿದ್ದಿಕಿ ಬಶೀರ್ ಅಹ್ಮದ್ ಅತ್ತಾರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 