ಬೆಳಗಾವಿ, 16: ಅಪಘಾತದಲ್ಲಿ ಮೃತಪಟ್ಟಿದ್ದ ಖಾನಾಪುರ ತಾಲ್ಲೂಕಿನ ಬೋಗೂರ ಗ್ರಾಮದ ಆರು ಜನರ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಸಕರ್ಾರದ ವತಿಯಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರಧನವನ್ನು ಭಾನುವಾರ(ಫೆ.16) ವಿತರಿಸಿದರು.
ಬೋಗೂರ ಗ್ರಾಮದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರು ಜನರ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಲಾಯಿತು.
ಖಾನಾಪುರ ತಾಲ್ಲೂಕಿನ ಬೋಗೂರ ಗ್ರಾಮದ ಬಳಿಯ ತಟ್ಟಿಹಳ್ಳ ಸೇತುವೆ ಮೇಲೆ ಫೆ8 ರಂದು ಸಂಭವಿಸಿದ್ದ ಟ್ರಾಕ್ಟರ್ ಅಪಘಾತದಲ್ಲಿ ಆರು ಜನರು ಮೃತಪಟ್ಟು, 18 ಜನರು ಗಾಯಗೊಂಡಿದ್ದರು. ಅಪಘಾತದಲ್ಲಿ ಮೃತಪಟ್ಟಿರುವ ಅಶೋಕ ಫಕ್ಕೀರಪ್ಪ ಕೇದಾರಿ; ಶಾಂತವ್ವ ಹನಮಂತ ಅಳಗೋಡಿ; ಸಾವಿತ್ರಿ ಹುಣಶೀಕಟ್ಟಿ; ನಾಗವ್ವ ಮಾಟೊಳ್ಳೆ; ಚಂದ್ರಮ್ಮ ಹುಣಶೀಕಟ್ಟಿ ಹಾಗ ಶಾಂತವ್ವ ಜುಂಜೂರಿ ಇವರುಗಳ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂಪಾಯಿ ಪರಿಹಾರಧನದ ಚೆಕ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ವಿತರಿಸಿದರು.
ಹೊಸ ಸೇತುವೆ ನಿಮರ್ಾಣದ ಭರವಸೆ:
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ಬೋಗೂರ ಗ್ರಾಮದ ತಟ್ಟಿಹಳ್ಳಕ್ಕೆ 49 ವರ್ಷಗಳ ಹಿಂದೆ ನಿಮರ್ಿಸಲಾದ ಹಳೆಯ ಬಾಂದಾರ ಮತ್ತು ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿಮರ್ಾಣಕ್ಕೆ 4 ಕೋಟಿ ರೂಪಾಯಿ ಅಂದಾಜು ವೆಚ್ವದ ಯೋಜನೆ ಸಿದ್ಧಪಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ನೀರಾವರಿ ಇಲಾಖೆಯ ಸಚಿವರ ಜತೆ ಚಚರ್ಿಸಿ ಆದಷ್ಟು ಬೇಗನೇ ಹೊಸ ಸೇತುವೆ ನಿಮರ್ಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೂಲಿಗೆ ತೆರಳುತ್ತಿರುವವರು ಸಾವನ್ನಪ್ಪಿದ್ದು, ದುಃಖಕರ ಸಂಗತಿ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಅದೇ ದಿನ ಸೂಚನೆ ನೀಡಲಾಗಿತ್ತು. ಅದೇ ಪ್ರಕಾರ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲರೂ ಕೂಲಿಕಾರ ಕುಟುಂಬದವರಾಗಿ ರುವುದರಿಂದ ಎಲ್ಲ ಕುಟುಂಬಕ್ಕೂ ಐದು ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ ಅವರು ತಕ್ಷಣವೇ ಪರಿಹಾರ ನೀಡಿದ್ದಾರೆ. ವಾಹನ ಸವಾರರು ಜಾಗೃತಿ ವಹಿಸಿದರೆ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಆದ್ದರಿಂದ ಚಾಲಕರು ಮತ್ತು ಮಾಲೀಕರು ಎಚ್ಚರಿಕೆ ವಹಿಸಬೇಕು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಅಪಘಾತ ಸಂದರ್ಭದಲ್ಲಿ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದರೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. 18 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿಗಳು ಮೃತರ ಪ್ರತಿ ಕುಟುಂಬಕ್ಕೂ ಐದು ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.
ಆಸ್ಪತ್ರೆಯಲ್ಲಿ ಇರುವ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕೂಡ ಶೀಘ್ರ ಗುಣಮುಖರಾಗಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಹಲಗೇಕರ ಸಂಸ್ಥೆಯ ವತಿಯಿಂದ ಪ್ರತಿ ಕುಟುಂಬಕ್ಕೂ ತಲಾ ಹತ್ತು ಸಾವಿರ ರೂಪಾಯಿ ನೆರವು ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಇದಕ್ಕೂ ಮುಂಚೆ ಬೋಗೂರ ಗ್ರಾಮದ ಸಮೀಪ ಅಪಘಾತ ಸಂಭವಿಸಿದ ತಟ್ಟಿಹಳ್ಳ ಬ್ರಿಡ್ಜ್ ಕಂ ಬಾಂದಾರವನ್ನು ಪರಿಶೀಲಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮದ ಆರಂಭದಲ್ಲಿ ಎರಡು ನಿಮಿಷ ಮೌನ ಆಚರಿಸಲಾಯಿತು.