ಸಂಗಮೇಶ್ವರ ಪ್ರೌಢಶಾಲೆಗೆ ಬಿಸಿಯೂಟದ ಅಧಿಕಾರಿ ಭೇಟಿ

ಸಂಗಮೇಶ್ವರ ಪ್ರೌಢಶಾಲೆಗೆ ಬಿಸಿಯೂಟದ ಅಧಿಕಾರಿ ಭೇಟಿ  Mid-day meal official visits Sangameshwara High School


ತಾಳಿಕೋಟಿ 01: ಪಟ್ಟಣದ ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗೆ ವಿಜಯಪುರ ಜಿಲ್ಲಾ ಪಂಚಾಯತಿಯ ಇಓ ಮಧ್ಯಾಹ್ನ ಬಿಸಿಯೂಟದ ಅಧಿಕಾರಿ ಶಿವಚಂದ್ರ ಕತ್ನಳ್ಳಿಯವರು ಸೋಮವಾರ ಭೇಟಿ ನೀಡಿದರು.  ಅವರು ಅಡುಗೆ ಸಹಾಯಕರಿಗೆ ರುಚಿ ಮತ್ತು ಶುಚಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಅಡುಗೆ ಕಾರ್ಯ ಮಾಡುವ ಸಮಯದಲ್ಲಿ ನೆಪ್ರಾನ ಕಡ್ಡಾಯವಾಗಿ ದರಿಸಬೇಕು ಎಂದು ಸಲಹೆ ನೀಡಿದರು. ಹಾಗೂ ಪ್ರೌಢಶಾಲೆಯ ಕಾರ್ಯಾಲಯಕ್ಕೆ ಆಗಮಿಸಿ ಸಿಬ್ಬಂದಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಮಯದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜೆ.ಎಮ್‌.ಕೊಣ್ಣೂರ, ಪ್ರೌಢಶಾಲೆ ಹಿರಿಯ ಶಿಕ್ಷಕ ಬಿ.ಆಯ್‌. ಹಿರೇಹೊಳಿ, ಎಸ್‌.ಸಿ.ಗುಡಗುಂಟಿ, ದೈಹಿಕ ಶಿಕ್ಷಕ ಎಮ್‌.ಎಸ್‌. ರಾಯಗೊಂಡ, ಚಿತ್ರಕಲಾ ಶಿಕ್ಷಕ ಯು.ಎಚ್‌.ಗಟನೂರ ಉಪಸ್ಥಿತರಿದ್ದರು.