ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರಿಗೆ ಸನ್ಮಾನ
Members of the Craftsmen's Grievance Redressal Committee honored
ಹಾವೇರಿ 27 : ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರುಗಳಾಗಿ ಆಯ್ಕೆಯಾದ ಗುತ್ತೆಪ್ಪ ಫಕ್ಕೀರ್ಪ ಹರಿಜನ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ವತಿಯಿಂದ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಮಾತನಾಡಿ ಜಿಲ್ಲೆಯಲ್ಲಿ ಚರ್ಮ ಕುಶಲಕರ್ಮಿಗಳ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಿತಿಯಲ್ಲಿ ಗುತ್ತೆಪ್ಪ ಹರಿಜನ,ಸುನಿಲ್ ಬೆಟಗೇರಿ,ಮಾರುತಿ ಹಂಜಗಿ,ಪೃಥ್ವಿರಾಜ ಬೆಟಗೇರಿ,ಹೆಚ್.ಡಿ.ಹೊನ್ನಕ್ಕಳವರ ಸದಸ್ಯರಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲು ಅವಕಾಶ ದೊರೆಕಿದ್ದು ಸಂತೋಷಕರವಾಗಿದೆ.
ಈ ಎಲ್ಲಾ ಸದಸ್ಯರುಗಳಿಗೆ ಉತ್ತಮ ಕೆಲಸ ನಿರ್ವಹಣೆ ಮಾಡಲು ಸಹಕಾರ ನೀಡಲಾಗುವುದು. ಎಲ್ಲಾ ಸದಸ್ಯರಿಗೂ ಶುಭ ಕೋರಿ ನೂತನ ಸದಸ್ಯರನ್ನಾಗಿ ಮಾಡಲು ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಮುಖಂಡರಿಗೂ ಧನ್ಯವಾದಗಳನ್ನು ಉಡಚಪ್ಪ ಮಾಳಗಿ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗುತ್ತೆಪ್ಪ ಫಕ್ಕೀರ್ಪ ಹರಿಜನ ಮಾತನಾಡಿ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರನ್ನಾಗಿ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು. ಉತ್ತಮವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾಲತೇಶ ಯಲ್ಲಾಪುರ,ಮಂಜಪ್ಪ ಮರೋಳ,ಭೀಮಣ್ಣ ಯಲ್ಲಾಪುರ,ಜಗದೀಶ ಹರಿಜನ,ಸಣ್ಣಪ್ಪ ಮೇಲ್ಮರಿ,ಗುಡ್ಡಪ್ಪ ಚಿಕ್ಕಪ್ಪನವರ,ಸಿಎಂ ಪಠಾಣ,ಹೊನ್ನಪ್ಪ ಮಾಳಗಿ,ಗುಡ್ಡಪ್ಪ ಮಾಳಗಿ,ಹನುಮಂತಪ್ಪ ಹೌಂಶಿ,ಮೇಘರಾಜ ಹರಿಜನ,ನವೀನ ಸಿದ್ದಣ್ಣನವರ ಸೇರಿದಂತೆ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 