ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯರಿಂದ ಶ್ರಮದಾನಕ್ಕೆ ಚಾಲನೆ.

ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯರಿಂದ ಶ್ರಮದಾನಕ್ಕೆ ಚಾಲನೆ. Members of the Athani Brahmin Samaj Trust's governing body launch a voluntary labour initiative

ಅಥಣಿ 12 : ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯರು ವಿನೂತನವಾಗಿ ಅಧ್ಯಕ್ಷ ನ್ಯಾಯವಾದಿ ಎನ್ ಕೆ ಪಾಟೀಲ್ ನೇತೃತ್ವದಲ್ಲಿ  ಅಥಣಿ ನಗರದ ಕೆಲ ದೇವಸ್ಥಾನಗಳನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮೊಟ್ಟ ಮೊದಲಿಗೆ ನಗರದ ಸ್ವಾಮಿ ಪ್ಲಾಟ್ ಬಡಾವಣೆಯ ಲಕ್ಷ್ಮಿ ಸಹಿತ ಸತ್ಯನಾರಾಯಣ ದೇವಸ್ಥಾನದ 15ನೇ ವರ್ಧಂತಿ ಉತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ಕೆ ದೇವಸ್ಥಾನದ ಕಾರ್ಯದರ್ಶಿ ವಾಸು ಕುಲಕರ್ಣಿ ಮತ್ತು ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌  ಅಧ್ಯಕ್ಷ ನ್ಯಾಯವಾದಿ ಎನ್ ಕೆ ಪಾಟೀಲ್ ಶ್ರಮದಾನ ಮಾಡುವ ಮೂಲಕ ಚಾಲನೆ ನೀಡಿದರು.

ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ  ಪಾಕ ಶಾಲೆ, ಭೋಜನ ಶಾಲೆ, ಹೊರಾಂಗಣ, ಒಳಾಂಗಣ ಉಗ್ರಾಣ ಸೇರಿದಂತೆ ಇಡೀ ದೇವಸ್ಥಾನವನ್ನು ನೀರಿನಿಂದ ತೊಳೆದು, ಕಸ ಗುಡಿಸಿ ಸ್ವಚ್ಛಗೊಳಿಸಲಾಯಿತು. ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯರ ಈ ಶ್ರಮದಾನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಸತ್ಯನಾರಾಯಣ ದೇವಸ್ಥಾನದ ಕಾರ್ಯದರ್ಶಿ ವಾಸು ಕುಲಕರ್ಣಿ, ಇದೇ ಮೊದಲ ಬಾರಿಗೆ ಅಥಣಿ ನಗರದ ದೇವಸ್ಥಾನಗಳ ಸ್ವಚ್ಛತಾ ಕಾರ್ಯಗಳಿಗೆ ಸಮಾಜದ ಬಂಧುಗಳು ಮುಂದಾಗಿರುವುದು ಸಂತೋಷದ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದವರು ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಸದಸ್ಯರು ಕೈಗೊಳ್ಳುತ್ತಿರುವ ಈ ಕಾರ್ಯಕ್ಕೆ ನಾವೆಲ್ಲ ಸಹಕಾರ ನೀಡೋಣ ಎಂದರು.

ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಆದಿತ್ಯ ಮಾಶಾಳ್ ಮಾತನಾಡಿ, ಬ್ರಾಹ್ಮಣ ಸಮಾಜ ಟ್ರಸ್ಟ್‌ ವತಿಯಿಂದ ಕಾರ್ಯಕ್ರಮಗಳ ಜೊತೆಗೆ ಇಂತಹ ಶ್ರಮದಾನದ ಕಾರ್ಯಗಳಿಗೂ ನಾವು ಇದೇ ಮೊದಲ ಬಾರಿಗೆ ಮುಂದಾಗಿದ್ದು ಮುಂದೆಯೂ ಸಹ ತಿಂಗಳಿಗೆ ಒಂದರಂತೆ ದೇವಸ್ಥಾನಗಳ ಸ್ವಚ್ಛತಾ ಕಾರ್ಯವನ್ನು ಕಾರ್ಯವನ್ನು ಹಮ್ಮಿಕೊಳ್ಳುವವರಿದ್ದು ಸಮಾಜದ ಬಂಧುಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಶ್ರಮದಾನದ ಈ ಕಾರ್ಯದಲ್ಲಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ಆಡಳಿತ ಮಂಡಳಿಯ ಕೇಶವ ಕುಲಕರ್ಣಿ, ಪ್ರಸಾದ್ ಕುಲಕರ್ಣಿ, ಸೌರಭ ಮಾಶಾಳ, ಗೀರೀಶ್ ಬಿಜಾಪುರೆ, ಗೀರೀಶ್ ಕುಲಕರ್ಣಿ, ಹರ್ಷ ದೇಶಪಾಂಡೆ, ಗೀರೀಶ್ ಕುಲಕರ್ಣಿ, ವಸುಧನ್ಮ ಜೋಶಿ, ವೆಂಕಟೇಶ್ ದೇಶಪಾಂಡೆ, ಪ್ರವೀಣ್ ಗೋಠೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.