ಭಾವೈಕ್ಯತೆಯ ನಾಡಿನಲ್ಲಿ ಇಂದಿನಿಂದ ಮೆಹಬೂಬ್ ಸುಭಾನಿ ಉರುಸು ಆರಂಭ

ಭಾವೈಕ್ಯತೆಯ ನಾಡಿನಲ್ಲಿ ಇಂದಿನಿಂದ ಮೆಹಬೂಬ್ ಸುಭಾನಿ ಉರುಸು ಆರಂಭ Mehboob Subhani Urs begins today in the land of communal harmony


ಶಿರಹಟ್ಟಿ: ಭಾವೈಕ್ಯತೆಯ ಪ್ರತೀಕವಾಗಿರುವ ಶ್ರೀ ಹಜರತ್ ಮೆಹಬೂಬ್ ಸುಭಾನಿ (ರಹಾ) ದರ್ಗಾದ ಉರುಸು ಮುಬಾರಕ್ ಇಂದಿನಿಂದ ಆರಂಭವಾಗಲಿದೆ ಎಂದು ದರ್ಗಾದ ಮುಜಾವರ ಮೊಹಮ್ಮದ್ ಖುರೇಶ್ ಮನಿಯಾರ ತಿಳಿಸಿದರು.  

ಸೆ.21ರಂದು ಸೋಮವಾರ ಗಂಧ (ಸಂದಲ್), ಸೆ.22ರಂದು ಮಂಗಳವಾರ ಉರುಸು ಹಾಗೂ ಸೆ.23ರಂದು ಬುಧವಾರ ತವಾಫ್ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಣ್ಯಕ್ಷೇತ್ರದ ದರ್ಶನ ಪಡೆದು ಹಜರತ್ ಮೆಹಬೂಬ್ ಸುಭಾನಿ ಅವರ ಕೃಪೆಗೆ ಪಾತ್ರರಾಗುವಂತೆ ಅವರು ಮನವಿ ಮಾಡಿದರು.  

ದರ್ಗಾದ ಸದ್ಭಕ್ತ ನಜೀರ ಅಹಮದ್ ಡಂಬಳ ಮಾತನಾಡಿ, ಮೆಹಬೂಬ್ ಸುಭಾನಿ ಉರುಸು ಭಾವೈಕ್ಯತೆಯ ಸಂಕೇತವಾಗಿದೆ. ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲ ಧರ್ಮದವರು ಒಗ್ಗೂಡಿ ಉರುಸನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮುಸ್ಲಿಂ ಬಾಂಧವರಷ್ಟೇ ಅಲ್ಲದೆ ಹಿಂದೂ ಬಾಂಧವರು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ ಆಗಮಿಸುತ್ತಾರೆ ಎಂದರು.  

ಈ ಸಂದರ್ಭದಲ್ಲಿ ದರ್ಗಾದ ಮುಜಾವರಾದ ಅಸಗರಅಲಿ ಮನಿಯಾರ, ಅಬ್ರು ಮನಿಯಾರ, ಹಜರತಲಿ ಮನಿಯಾರ ಹಾಗೂ ಭಕ್ತರಾದ ಮಾಬುಸಾಬ ಕುಬಸದ, ರೀಯಾಜ್ ತಹಶೀಲ್ದಾರ, ಸಾದಿಕ್ ಮುಳಗುಂದ, ರೀಯಾಜ್ ಲಕ್ಷ್ಮೇಶ್ವರ, ಬಶೀರ್ ಪಟಾವೇಗಾರ, ಜಾಫರ್ ಅತ್ತಾರ, ಹಸನ್ ತಹಶೀಲ್ದಾರ್, ದಾದಾಪೀರ ಪರೀಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.