ಜೋಶಿ ನಾಯಕತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಮಹಾಪೂರ ಹರಿದು ಬರಲಿ: ನಾಗರಾಜ
May a flood of more development flow under Joshi's leadership: Nagaraja
ಜೋಶಿ ನಾಯಕತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಮಹಾಪೂರ ಹರಿದು ಬರಲಿ: ನಾಗರಾಜ
ಶಿಗ್ಗಾವಿ 17: ಪ್ರಹ್ಲಾದ ಜೋಶಿ ಅವರ ಸಹಕಾರದಿಂದ ಹುನಗುಂದದಲ್ಲಿ ವಿಠ್ಠಲ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು ನಮ್ಮ ಧಾರ್ಮಿಕ ಆಸ್ತಿಯ ಬಲವನ್ನು ಹೆಚ್ಚಿಸುವ ಮಹತ್ತರ ಕ್ಷಣವಾಗಿದೆ. ಅವರ ನಾಯಕತ್ವದಲ್ಲಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯ ಮಹಾಪೂರ ಹರಿದು ಬರಲಿ ಎಂದು ಗ್ರಾ.ಪಂ. ಸದಸ್ಯ ನಾಗರಾಜ ಮೂಲಿಮನಿ ಹೇಳಿದರು. ತಾಲೂಕಿನ ಹುನಗುಂದ ಗ್ರಾಮದ ಭಕ್ತರ ದೀರ್ಘಕಾಲದ ಆಶಯವಾಗಿದ್ದ ವಿಠ್ಠಲ ಹರಿಮಂದಿರ ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನುನಿಕಟಪೂರ್ವ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ನೆರವೇರಿಸಿ ಮಾತನಾಡಿ ಗ್ರಾಮದ ಧಾರ್ಮಿಕಹಿಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಉಜ್ವಲ ಅಧ್ಯಾಯ ಆರಂಭಿಸುವ ಈ ಮಂದಿರ ನಿರ್ಮಾಣಕ್ಕೆ ಕೇಂದ್ರಸಚಿವ ಪ್ರಹ್ಲಾದ ಜೋಶಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ 10 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ ಅಲ್ಲದೇ ಈ ಮಂದಿರ ನಿರ್ಮಾಣದ ಮೂಲಕ ಹುನಗುಂದ ಗ್ರಾಮವು ಧರ್ಮ, ಸಂಸ್ಕೃತಿ ಹಾಗೂ ಭಕ್ತಿಯ ಪಾವನ ಕೇಂದ್ರವಾಗಿ ಬೆಳೆಯಲಿದೆ. ಗ್ರಾಮದಲ್ಲಿ ನಡೆಯುವ ಭಜನೆಹೀಕೀರ್ತನೆ, ಸತ್ಸಂಗ, ಸಾಂಸ್ಕೃತಿಕ ಉತ್ಸವಗಳು ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಈ ಮಂದಿರ ಶಾಶ್ವತ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ಯುವ ಮುಖಂಡ ನರಹರಿ ಕಟ್ಟಿ, ಬಾಬಣ್ಣ ಫಿರೋಜಿ,ಗಣೇಶ ಚನ್ನಾಪೂರ, ಪ್ರಭು ಇಂಗಳಗಿ,ವೆಂಕಪ್ಪ ತಳವಾರ, ಗ್ರಾಮಸ್ಥರು,ಯುವಕರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 