ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ದಿಂದ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ
Massive protest in Koppal by the Agricultural and Rural Workers' Association
ಕೊಪ್ಪಳ 16: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮತ್ತು ಉದ್ಯೋಗ ಖಾತ್ರಿಗೆ ನೀಡಬೇಕಾದ ಕೂಲಿ ಮೊತ್ತವನ್ನು ಕಡಿಮೆ ಮಾಡಿರುವುದನ್ನು ಖಂಡಿಸಿ-100 ದಿನಗಳ ಬದಲಾಗಿ -200 ದಿನಕ್ಕೆ ಕೆಲಸದ ದಿನಗಳನ್ನು ಹೆಚ್ಚಿಸಲು ಕೂಲಿಯನ್ನು -600 ಗಳಿಗೆ ಹೆಚ್ಚಳ ಮಾಡಬೇಕು. ಉದ್ಯೋಗ ಖಾತ್ರಿಯನ್ನು ಕೆವೈಸಿ ಹೆಸರಿನಲ್ಲಿ ದುರ್ಬಲಗೊಳಿಸುವುದನ್ನು ಕೈ ಬಿಡಲು ಒತ್ತಾಯಿಸಿ ಎಂಜಿ ನರೇಗಾ ವನ್ನು ಬಾಪು ಯೋಜನೆ ಎಂದು ಮರುನಾಮಕರಣ ಮಾಡುವುದು ವಂಚನೆ ಯಾಗಿದೆ ಎಂದು ಆರೋಪಿಸಿದೆನಿಜವಾದ ಅಗತ್ಯವೆಂದರೆ ಬಲಪಡಿಸುವುದು. ಎಂದು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ಕೊಪ್ಪಳ. ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣ ಹತ್ತಿರ ಕನಕದಾಸ ವೃತ್ತ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಹೊರಡಿಸಿರುವ ಆದೇಶ ಪ್ರತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಬಸವರಾಜ ಮರಕುಂಬಿ. ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್. ಮುಖಂಡರು. ರಾಮಣ್ಣ ದೊಡ್ಡಮನಿ ಹುಸೇನ್ ಸಾಬ ನದಾಫ್ ಕಾಲೇಸಾಬ ಕರಡಿ ಗಂಗಪ್ಪ ಕೊರ್ವರ್ ಹನುಮಂತ ಪಡಚಿಂತಿ ಫಕೀರಮ್ಮ ಮಿರಗನತಂಡಿ ಶಾಂತಮ್ಮ ಬೆಂಗಳೂರಮನಿ ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 