ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಅಭಾಜಿ ಅಭಿಮಾನಿ ಬಳಗದಿಂದ ಬೃಹತ್ತ ಪ್ರತಿಭಟನೆ
Massive protest by Abhaji's fan group condemning false case filing
ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಅಭಾಜಿ ಅಭಿಮಾನಿ ಬಳಗದಿಂದ ಬೃಹತ್ತ ಪ್ರತಿಭಟನೆ
ರಾಯಬಾಗ, 17 ; ಜೆ.ಡಿ.ಎಸ್. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಅವರ ಸುಪುತ್ರ ಶಿವರಾಜ ಪಾಟೀಲ ಅವರ ಮೇಲೆ ಹಾರೂಗೇರಿ ಪೊಲೀಸ ಠಾಣೆಯ ಪಿ.ಎಸ್.ಐ ಮಾಳಪ್ಪ ಪೂಜಾರಿ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಅಭಾಜಿ ಅಭಿಮಾನಿ ಬಳಗದಿಂದ ಬೃಹತ್ತ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ ವೃತ್ತದಿಂದ ಮಹಾವೀರ ಭವನದವರೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿ.ಎಲ್.ಪಾಟೀಲ (ಅಭಾಜಿ) ಅಭಿಮಾನ ಬಳಗದವರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಹಾವೀರ ಭವನದಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಅವರು, ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಮಾಳಪ್ಪ ಪೂಜೇರಿ ಅವರು, ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಮಾತು ಕೇಳಿ ನನ್ನ ಪುತ್ರ ಶಿವರಾಜ ಪಾಟೀಲ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. “ನನ್ನ ಪುತ್ರನ ರಾಜಕೀಯ ಬೆಳವಣಿಗೆ ಸಹಿಸದೇ ದುರುದ್ದೇಶದಿಂದ ಪಿಎಸ್‌ಐ ಮಾಳಪ್ಪ ಪೂಜೇರಿ, ಕುಡಚಿ ಶಾಸಕನ ಮಾತು ಕೇಳಿ ಸುಳ್ಳು ಪ್ರಕರಣವನ್ನು ದಾಖಲಿಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿದರು.
ಇತ್ತೀಚಿಗೆ ಇಟ್ನಾಳ ಗ್ರಾಮದಲ್ಲಿ ನಡೆದ ಘಟನೆ ದಿನದಂದು ತಮ್ಮ ಪುತ್ರ ಶಿವರಾಜ ಪಾಟೀಲ ಅವರು ರಾಯಬಾಗ ಮತಕ್ಷೇತ್ರದ ಬ್ಯಾಕೂಡ ಗ್ರಾಮದ ತಮ್ಮ ಮನೆಗೆ ಆಗಮಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಮಾಜಿ ಚೇರಮನ್ ರಮೇಶ ಕತ್ತಿ, ನಾನು ಹಾಗೂ 50ಕ್ಕೂ ಹೆಚ್ಚು ಜನರು ಸೇರಿ ಮಾತುಕತೆಯಲ್ಲಿ ಭಾಗವಹಿಸಿದ್ದರು. ಆದರೆ ಹಾರೂಗೇರಿಯ ಪಿ.ಎಸ್.ಐ ಅವರು ಶಿವರಾಜ ಪಾಟೀಲ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಬೆಳಗಾವಿ ಎಸ್ ಪಿ ಯವರು ಈ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಕುಡಚಿ ಮತಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷವನ್ನು ಬಲವಾಗಿ ಕಟ್ಟುತ್ತಿರುವ ಶಿವರಾಜ ಪಾಟೀಲರ ಮಾನನಷ್ಟ ಮತ್ತು ತೇಜೋವಧೇ ಮಾಡಲು ಹೊರಟಿರುವ ಹಾರೂಗೇರಿ ಪೊಲೀಸರ ವಿರುದ್ಧ ವಿ.ಎಲ್.ಪಾಟೀಲ (ಅಭಾಜಿ) ಯವರ ಅಭಿಮಾನಿಗಳಿಂದ ವ್ಯಾಪಕ ಪ್ರತಿಭಟನೆ ನಡೆಯಿತು. ನಮ್ಮ ನೆಚ್ಚಿನ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕುಡಚಿ ಪಿಎಸ್‌ಐ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಎಸ್ ಪಿ ಯವರು ಈ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು. ಬೆಳಗಾವಿ ಎಸ್.ಪಿ.ರವರು ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ಶಿವರಾಜ ಪಾಟೀಲ ಅವರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ವಿ.ಎಲ್.ಪಾಟೀಲ (ಅಭಾಜಿ) ಅಭಿಮಾನಿ ಬಳಗದಿಂದ ತಹಶೀಲ್ದಾರ ಮಹಾದೇವ ಸನಮುರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜೆ.ಡಿ.ಎಸ್. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ, ಸದಲಗಾ ಪಟ್ಟಣದ ಧರಿಕಾನ ಅಜ್ಜಾನವರು, ವೇದಮೂರ್ತಿ ಕಾಡಯ್ಯ ಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ ಅಂಗಡಿ, ಅಂಬೂಪ್ರಸಾದ ನರೋಟೆ, ಪ್ರಕಾಶ ಹುಕ್ಕೇರಿ, ವಕೀಲರಾದ ಪಿ.ಎಂ.ಪಾಟೀಲ, ಶಿವಪುತ್ರ ಹಾಡಕರ, ಮಹಾದೇವ ವಡಗಾಂವೆ, ರಾಮಚಂದ್ರ ಹೆಗಡೆ, ಮುರಾರಿ ಶಿಂಗಾಡೆ, ಬಸು ಪೂಜೇರಿ, ಹಾಲಪ್ಪ ನಿಲಜಗಿ,ಸಿದ್ದಪ್ಪ ಹುಕ್ಕೇರಿ, ಲಕ್ಷ್ಮಿಕಾಂತ ದೇಸಾಯಿ, ಭೀಮಪ್ಪ ಬನಶಂಕರಿ, ಹಾಲಪ್ಪ ಪೂಜೇರಿ, ಪ್ರವೀನ ಗಡ್ಡೆ, ರವಿ ತರಾಳ, ರಸೀದ ತಾಂಬೊಳೆ, ಜ್ಯೋತಿ ಮಾನೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 