ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನ ಅಂಗವಾಗಿ ಅಂಕಲಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಪದ್ಮಶ್ರೀ ಸನ್ಮಾನ

ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನ ಅಂಗವಾಗಿ ಅಂಕಲಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಪದ್ಮಶ್ರೀ ಸನ್ಮಾನ Massive blood donation camp and Padma Shri felicitation in Ankali on the occasion of Dr. Prabhakar K

ಲೋಕದರ್ಶನ ವರದಿ

 ಮಾಂಜರಿ  28 : ಆರೋಗ್ಯ ಶಿಕ್ಷಣ ಸಾಮಾಜಿಕ ಮತ್ತು ರಾಜಕೀಯ ರಂಗದ ಜೊತೆಗೆ ಸಹಕಾರಿ ಸಂಘದಲ್ಲಿ ತನ್ನದೇ ಆದ ಸ್ಥಾನಮಾನ ನಿರ್ಮಿಸಿದೆ ಹಾಗೂ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಧೀಮಂತ ನಾಯಕ ಹಾಗೂ ಕೆ ಎಲ್ ಈ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾಗಿರುವ ಡಾಕ್ಟರ್ ಪ್ರಭಾಕರ್ ಕೋರೆ ಇವರ 79ನೆಯ ಹುಟ್ಟುಹಬ್ಬ ಅಂಗವಾಗಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಬೃಹತ್ ಉಚಿತ ರಕ್ತದಾನ ಶಿಬಿರ.  ಪದ್ಮಶ್ರೀ ಪ್ರಶಸ್ತಿ ಪಡೆದ ಸನ್ಮಾನ ಸಮಾರಂಭ. ವನಮಹೋತ್ಸವ. ರಾಷ್ಟ್ರಮಟ್ಟದ ಪುರುಷರ  ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು  ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಗಸ್ಟ್‌ ಒಂದರಂದು ಆಯೋಜಿಸಲಾಗಿದೆ ಎಂದು ಡಾ. ಪ್ರಭಾಕರ್ ಕೋರೆ ಹುಟ್ಟುಹಬ್ಬದ ಆಚಾರ್ಯ ಸಮಿತಿಯ ಅಧ್ಯಕ್ಷ ಮತ್ತು ಕೆಎ ಸಂಸ್ಥೆಯ ನಿರ್ದೇಶಕರಾದ ಬಿ ಆರ್ ಪಾಟೀಲ್ ಹಾಗೂ ಹುಟ್ಟುಹಬ್ಬ ಆಚರಣೆ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಭರತೇಶ್ ಬಣವನೆ ಮತ್ತು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ  ಮಲ್ಲಿಕಾರ್ಜುನ್ ಕೋರೆ ಇವರು ಹೇಳಿದರು  ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು ಚಿದಾನಂದ ಬಸ ಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ.  ಶಿವಶಕ್ತಿ ಶುಗರ್ ಲಿಮಿಟೆಡ್ ಸೌದತ್ತಿ.  ಹೆರ್ಮ್ಸ್‌ ಡಿಸ್ಟಲರಿ  ಪ್ರೈವೇಟ್ ಲಿಮಿಟೆಡ್ ಯಡ್ರಾವ್‌. ಡಾ ಪ್ರಭಾಕರ್ ಕೋರೆ ಕೋಪ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಅಂಕಲಿ. ಮೇ ಇನಾಮದಾರ್ ಶುಗರ್ಸ್‌ ಲಿಮಿಟೆಡ್ ಮೂರುಕಂಬಿ.