ಹಿಂದೂಹಿಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮಾಣೂರ ಜಾತ್ರೆ:ಡಾ. ಪ್ರಭುಗೌಡ

ಹಿಂದೂಹಿಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮಾಣೂರ ಜಾತ್ರೆ:ಡಾ. ಪ್ರಭುಗೌಡ  Manur Fair: A Symbol of Hindu-Muslim Harmony – Dr. Prabhugouda

ಲೋಕದರ್ಶನ ವರದಿ 

ದೇವರಹಿಪ್ಪರಗಿ 28 : ಹಿಂದೂಹಿಮುಸ್ಲಿಂ ಭಾವೈಕ್ಯತೆ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಮಣೂರ ಗ್ರಾಮದ ಅಬುಸಾಹೇಬ ಮುತ್ಯಾನ ವಿಶಿಷ್ಟ ಜಾತ್ರೆಯಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು  ತಾಲೂಕಿನ ಮಣೂರ ಗ್ರಾಮದ ಶ್ರೀ ಅಬುಸಾಹೇಬ ಮುತ್ಯಾನ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು,ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಪುಣ್ಯ ಸ್ಥಳ. ಭಾವೈಕ್ಯತೆಯನ್ನು ನಾಡಿಗೆ ಸಾರಿದ ಬಸವ ನಾಡಿನ ಪುಣ್ಯ ಭೂಮಿ.

ಅಂಥ ಸ್ಥಳದಲ್ಲಿಂದು ಜಾತ್ರೆಯನ್ನು ಸರ್ವ ಸಮುದಾಯದವರೆಲ್ಲಾ ಸೇರಿ ಬಲು ಸಂಭ್ರಮದಿಂದ ನಡೆಸುವ ಈ ಜಾತ್ರೆಯಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಧಾರ್ಮಿಕ ಕ್ಷೇತ್ರಗಳು ನೆಮ್ಮದಿಯ ತಾಣಗಳಾಗಿವೆ ನಾವೆಲ್ಲರೂ ಪ್ರೀತಿಹಿವಿಶ್ವಾಸವನ್ನು ಬಲಪಡಿಸುತ್ತಾ,ಜಾತಿಹಿಧರ್ಮದ ಭೇದ ಮರೆತು ಒಂದಾಗಿ ಆಚರಿಸುವ ಮಾಣೂರ ಜಾತ್ರೆ ನಮ್ಮ ನಾಡಿನ ಸೌಹಾರ್ದ ಪರಂಪರೆಯ ಪ್ರತೀಕವಾಗಿದೆ.

ಇಂತಹ ಆಚರಣೆಗಳು ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿ. ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ದಂತಹ ಮಹಾನ್ ತತ್ವಗಳನ್ನು ಸಾರಿರುವ ಅಣ್ಣ ಬಸವಣ್ಣನವರ ನಾಡಿನಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಧಾರ್ಮಿಕ ಸಾಮರಸ್ಯದ ಸಂಕೇತವಾದ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಯುತ್ತಿದೆ.

ಭೇದ-ಭಾವ ಮರೆತು ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಿರಿ. ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಗ್ರಾಮದ ಐತಿಹಾಸಿಕ ಅಬುಸಾಬ್ ಮುತ್ಯಾನ ವಿಶಿಷ್ಟ ಜಾತ್ರೆ ಮಾಡುವ ಮೂಲಕ ಭಾವೈಕ್ಯತೆಗೆ ಮಣೂರ ಗ್ರಾಮ ಸಾಕ್ಷಿಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮೋಹನ ಸಜ್ಜನ, ಸುಭಾಸ ಆನೆಗುಂದಿ,ಸುರೇಶ ಪ್ಯಾಟಿ, ನಿಂಗಪ್ಪ ಹರವಾಳ, ಪ್ರಕಾಶ ಹಿರ್ಲಾಕೊಂಡ, ವಸಂತ ರಾಠೋಡ, ಶಿವಾಜಿ ಮಾನೆ ಸೇರಿದಂತೆ ಸರ್ವ ಸಮುದಾಯದ ಜನರು ಉಪಸ್ಥಿತರಿದ್ದರು.