ಮಣಿಪಾಲ್ ಆರೋಗ್ಯ ನೋಂದಣಿ ಆರಂಭ; ಆಗಸ್ಟ್‌ 31 ಕೊನೆಯ ದಿನ

ಮಣಿಪಾಲ್ ಆರೋಗ್ಯ  ನೋಂದಣಿ ಆರಂಭ; ಆಗಸ್ಟ್‌ 31 ಕೊನೆಯ ದಿನ  Manipal health registration begins; August 31 is the last day

ರಾಣೆಬೆನ್ನೂರು, ಜು.30: ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯು ಮಣಿಪಾಲ್ ಆರೋಗ್ಯ ಯೋಜನೆಗೆ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ನೋಂದಣಿಗೆ ಆಗಸ್ಟ್‌ 31, 2026 ಕೊನೆಯ ದಿನವಾಗಿದ್ದು, ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಆಸ್ಪತ್ರೆ ಮನವಿ ಮಾಡಿದೆ.  

ಕಳೆದ 26 ವರ್ಷಗಳಿಂದ ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. 2000ರಲ್ಲಿ ಕೇವಲ 3,200 ಕುಟುಂಬಗಳಿಂದ ಆರಂಭವಾದ ಯೋಜನೆ, ಕಳೆದ ವರ್ಷ ಸುಮಾರು 2 ಲಕ್ಷ ಕುಟುಂಬಗಳನ್ನು ಒಳಗೊಂಡಿದ್ದು, ಪ್ರಸ್ತುತ ಸುಮಾರು 6.5 ಲಕ್ಷ ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.  

ಆಸ್ಪತ್ರೆಯ ಪ್ರತಿನಿಧಿಗಳ ಮಾಹಿತಿ ಪ್ರಕಾರ, ಮಣಿಪಾಲ್ ಆರೋಗ್ಯ ಕಾರ್ಡ್‌ ಒಂದು ವರ್ಷದ ಸದಸ್ಯತ್ವ ಯೋಜನೆಯಾಗಿದ್ದು, "ಸಂಪೂರ್ಣ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ" ಎಂಬ ಧ್ಯೇಯದಡಿ ವಿವಿಧ ಆರೋಗ್ಯ ಸೇವೆಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಒದಗಿಸುತ್ತದೆ. ನೋಂದಣಿಯ 15 ದಿನಗಳ ನಂತರ ಕಾರ್ಡ್‌ ಜಾರಿಯಾಗಲಿದ್ದು, ಆಗಸ್ಟ್‌ 15, 2027ರವರೆಗೆ ಮಾನ್ಯವಾಗಿರುತ್ತದೆ.