ಮಲ್ಲಿಕಾರ್ಜುನ ಮದರಿಯವರ ಕಾರ್ಯ ನಿಜಕ್ಕೂ ಶ್ಲಾಘನಿಯ: ವಾಲಿಕಾರ
Mallikarjuna Madari's work is truly commendable: Valikara
ಮುದ್ದೇಬಿಹಾಳ 19: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಕೆಲವನ್ನು ಪಡೆದುಕೊಳ್ಳಬೇಕಾದರೇ ಮೊದಲು ಕೌಖಲ್ಯ ತರಬೇತಿ ಅತಿ ಮುಖ್ಯವಾಗಿದೆ. ಆದರೇ ನಮ್ಮ ಭಾಗದವರು ತರಬೇತಿ ಪಡೆದುಕೊಳ್ಳಲು ದೆಹಲಿ, ಬೆಂಗಳೂರ, ಧಾರವಾಡ ಸೇರಿದಂತೆ ಅನೇಕ ದೂರದ ನಗರಗಳಿಗೆ ಹೋಗಬೇಕಾಗಿತ್ತು. ಸಧ್ಯ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿಯವರು ಸ್ಥಳಿಯವಾಗಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪದವಿಧರ ಯುವಕ ಯುವತಿಯರು ಇಲ್ಲಿಯೇ ಸ್ಪರ್ಧಾತ್ಮಕ ಪರಿಕ್ಷೇಗಳನ್ನು ಎದುರಿಸಲು ಉಚಿತ ತರಬೇತಿ ಶಿಬಿರ ನಡೆಸುವ ಮೂಲಕ ಪದವಿಧರ ಯುವಕ ಯುವತಿಯರಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಧಾರವಾಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ, ಎಚ್ ಬಿ ವಾಲಿಕಾರ ಹೇಳಿದರು.
ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಅಭ್ಯೂದಯ ಪಿಯು ಸಾಯನ್ಸ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕೌಷಲ್ಯ ತರಬೇತಿ ಶೀಬೀರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷವೂ ರೈಲ್ವೆ, ಬ್ಯಾಂಕ್, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್, ಪಿಎಸೈ, ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು 'ಸರಕಾರಿ ಕೆಲಸಗಳು ಸಿಗದೇ ಮನನೊಂದುಕೊಳ್ಳುತ್ತಿರುವುದು ಸಾಮಾನ್ಯದ ಸಂಗತಿ ಆದರೇ ಯಾರೂ ಕೂಡ ದೃತಿಗೆಡಬಾರದು ಸಯಕ್ಕೆ ತಕ್ಕಂತೆ ಸ್ಪಧಾತ್ಮಕ ಪರಿಕ್ಷೇಗಳಿಗೆ ಪೂರ್ವ ಸಿದ್ದತೆ ಜತೆಗೆ ಕೌಷಲ್ಯ ತರಬೇತಿ ಅತ್ಯವಶ್ಯಕವಾಗಿರುತ್ತದೆ.
ಮನುಷ್ಯನಿಗೆ ಸಾಧ್ಯವಾದುದು ಯಾವೂದು ಇಲ್ಲ ಆದರೇ ಸಾಧಿಸುವ ಛಲವೊಂದಿರಬೇಕು ಎಂಬ ತತ್ವದಡಿಯಲ್ಲಿ ಯುವಕ ಯುವತಿಯರು ಮುಂದಾಗಬೇಕು. ಇತ್ತಿಚಿಗೆ ಸರಕಾರಿ ಉದ್ಯೋಗ ಪಡೆದುಕೊಳ್ಳುವುದು ಸುಲಭದ ಮಾತಲ್ಲ ಕೆಲವೇ ಹುದ್ದೇಗೆ ಲಕ್ಷಾಂತರ ಜನ ಅರ್ಜಿ ಸಲ್ಲಿಸುತ್ತಾರೆ ಯಾಕೇಂದರೆ ಸರಕಾರಿ ನೌಕರಿಗಿರುವ ಸೆಳೆತವೇ ಅಂತಹದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗಗಳನ್ನು ಹೇಗೆಬೇಕುಹಾಗೇಲ್ಲ ನೀವು ಪಡೆಯಬಹುದಾಗಿದೆ ಆದರೇ ತಮ್ಮ ಶ್ರಮದ ಮೇಲೆ ನಿಂತಿರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.
ಧಾರವಾಡದ ಸ್ಪರ್ಧಾ ಜೀನಿಯಸ್ ಆಕಾಡೆಮಿಯ ಉಪನ್ಯಾಸಕ ಸಿದ್ದಣ್ಣ ದಳವಾಯಿಯವರು ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು.ಕೌಶಲ್ಯ ತರಬೇತಿ ಪಡೆದವರು ನಿರುದ್ಯೋಗಿಯಾಗಿರಲು ಸಾಧ್ಯವಿಲ್ಲ ಇಂದು ಯುವಕ ಯುವತಿಯರು ಮನರಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಳಿಯುತ್ತಾ ವ್ಯರ್ಥ ತಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಆದರೇ ಅದೇ ಮೊಬೈಲ ಮೂಲಕ ಕೌಶಲ್ಯ ತರಬೇತಿ ಪಡೆಯುವುದು ಹೇಗೆ, ಯಾವೇಲ್ಲ ಪಠ್ಯಗಳನ್ನು ಓದಿದರೆ ಜಾನಾರ್ಜನೆಗೆ ಅನುಕೂಲವಾಗಲಿದೆ ಎಂಬುದನ್ನು ಅರಿತು ಮುನ್ನಡೆಯಬೇಕು. ಸರಕಾರಿ ನೌಕರಿ ಬಗ್ಗೆ ಪ್ರಥಮ ಆಧ್ಯತೆ ಇರಬೇಕು ಆದರೇ ಅದಾಗಿಲ್ಲ ಅಂದಾಗ ಇತರೇ ಕೌಶಲ್ಯದ ಬಗ್ಗೆ ಅರಿತುಕೊಳ್ಳುವುದರ ಜತೆಗೆ ಸದಾ ಪ್ರಯತ್ನದ ಹಾದಿಯಲ್ಲಿರಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ,
ಅಭ್ಯರ್ಥಿಗಳು ಇತ್ತಿಚಿನ ಮತ್ತು ಪರಿಷ್ಕೃತ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಿ ತಯಾರಿ ನಡೆಸಬೇಕು. ಅಂದರೆ, ಅಧ್ಯಯನ ನಡೆಸುವ ಮಾಹಿತಿಗಳು ಈಗಿನ ಪರೀಕ್ಷಾ ರೀತಿ ಮತ್ತು ಸಿಲೆಬಸ್‌ಗೆ ಹೊಂದಿಕೊಳ್ಳುವಂತೆ ಇರಬೇಕು. ಆಯಾ ಅಧಿಸೂಚನೆಗಳಲ್ಲಿ ಸಿಲೆಬಸ್ ಮಾಹಿತಿ ಇರುತ್ತದೆ. ಯಾವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದ ಮಾಹಿತಿ ಇರುತ್ತದೆ. ಇದೆಲ್ಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಅಧ್ಯಯನ ನಡೆಸುವಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಮುನ್ನಡೆಯಬೇಕು ಆಗ ಒಂದಲ್ಲ ಒಂದು ದಿನ ತಮ್ಮ ಶ್ರಮಕ್ಕೆ ಪ್ರತಿಫಲ ಕಂಡುಕೊಳ್ಳಲು ಯಶಸ್ವಿಯಾಗುತ್ತಿರಿ ಎಂದರು.
ಇದೇ ಸಂದರ್ಭದಲ್ಲಿ 2024-25 ಸಾಲಿನ ದ್ವೀತಿಯ ಪಿಯುಸಿ ಪರಿಕ್ಷೇಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದ ಶರಣಬಸು ವನಕಿಹಾಳ, ಐಶ್ವರ್ಯ ಪೂಜಾರಿ, ಕಾವ್ಯಶ್ರೀ ಬಿರಾದಾರ, ಮಾಣಿಕ್ಯ ಲಮಾಣಿ, ರತಿಕಾಂತಿ ಅಳಕವಾಡಿ, ಮಹಾದೇವಿ ಢವಳಗಿ, ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್ ಮದರಿ, ಬಸವರಾಜ ಬಿಜ್ಜುರ, ಆಡಳಿತಾಧಿಕಾರಿ ಬಿ ಜಿ ಬಿರಾದಾರ, ಪ್ರಾಂಶುಪಾಲ ಆರ್ ಎಸ್ ಜಡಗಿ, ಪ್ರಾಚಾರ್ಯ ಎಂ ಎಂ ಧನೂರ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ ಬಿರಾದಾರ, ರಂಗಸ್ವಾಮಿ ಎಸ್, ವಿರೇಶ ಹುಲಿಕೇರಿ, ರವಿ ಛಲವಾದಿ, ಬಸವರಾಜ ಗುದಲಮನಿ, ರವಿ ಜಗಲಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 