ಮಲ್ಲಿಕಾರ್ಜುನನ ಐದೇಶಿ ಜಾತ್ರಾ ಮಹೋತ್ಸವ : ಕಬಡ್ಡಿ ಪಂದ್ಯಾವಳಿ
Mallikarjuna's International Festival: Kabaddi Tournament
ದೇವರಹಿಪ್ಪರಗಿ 05: ದೇಶಿಯ ಕ್ರೀಡೆಯಾಗಿರುವ ಕಬಡ್ಡಿಯ ಬೆಳವಣಿಗೆಯ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದು ಧಾರವಾಡದ ಕೆ.ಇ.ಬೋರ್ಡ್ ಶಾಲೆಯ ಶಿಕ್ಷಕ ಬಸನಗೌಡ ಆರ್ ಪಾಟೀಲ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನನ ಐದೇಶಿ ಜಾತ್ರಾ ಮಹೋತ್ಸವದ ಅಂಗವಾಗಿ ಶಂಕರಲಿಂಗ ಯುವಕ ಮಂಡಳಿಯ ಸಹಯೋಗದಲ್ಲಿ ಗ್ರಾಮದ ಕೆಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾದ ಕಬಡ್ಡಿ ಪಂದ್ಯಾವಳಿಯ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಣ ಸಂಯೋಜಕ ಕೆ.ಎಲ್.ಜಾಧವ,ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ,ಕೆಜಿಎಸ್ ಶಾಲಾ ಮುಖ್ಯಗುರು ಶರಣಗೌಡ ಪಾಟೀಲ,ಮಾಜಿ ಗ್ರಾಪಂ ಸದಸ್ಯ ಸಾಯಬಣ್ಣ ಸೊನ್ನಳ್ಳಿ,ಪ್ರೌಢಶಾಲಾ ಶಿಕ್ಷಕರಾದ ಎಸ್.ಬಿ.ಬಿರಾದಾರ,ಜಿ.ಪಿ.ಬಿರಾದಾರ ಮಾತನಾಡಿದರು.ಪ್ರಥಮ ಬಹುಮಾನ ಪ್ರಾಯೋಜಕರಾದ ದೇವರಹಿಪ್ಪರಗಿ ಮತಕ್ಷೇತ್ರದ ಹಿರಿಯ ಭಾಜಪಾ ಧುರೀಣರಾದ ಬಸನಗೌಡ ಪಾಟೀಲ ಯಾಡಿಯಾಪುರ ಅವರ ಅನುಪಸ್ಥಿತಿಯಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪ್ರಾಯೋಜಕರಾದ ರಾಯನಗೌಡ ಬಿರಾದಾರ ಹಾಗೂ ನಬಿರಸೂಲ್ ಕೊರಬು ಪಂದ್ಯಾವಳಿಯನ್ನು ಉದ್ಘಾಟಿಸಿದರು.ಹಿರಿಯ ವೈದ್ಯರಾದ ಡಾ.ಬಿ.ಎಸ್.ನಾಯ್ಕೋಡಿ ಜ್ಯೋತಿ ಬೆಳಗಿಸಿದರು.ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ ತಳವಾರ ಮೈದಾನದ ಪೂಜೆಯನ್ನು ನೆರವೇರಿಸಿದರು.
ಅನ್ನದಾನೇಶ್ವರ ಹಿರೇಮಠ ಹಾಗೂ ಶರಣಯ್ಯ ಮಂಗಲಗಿ, ಬಿ.ಎಸ್.ಪೊಲೇಶಿ, ಶಂಕರಗೌಡ ಬಿರಾದಾರ,ಶ್ರೀಮಂತ ಚವ್ಹಾಣ, ಪರಮಾನಂದ ಬಿರಾದಾರ,ಮಲಕನಗೌಡ ಹೊನ್ನಳ್ಳಿ,ಶಾಂತಗೌಡ ಬಿರಾದಾರ,ಶಿವಶಂಕರ ಬಿರಾದಾರ,ಅರವಿಂದ ನಾಯ್ಕೋಡಿ,ಸಿದ್ದು ಹದರಿ,ಶಿವಾನಂದ ಬಿರಾದಾರ, ಕಾಶೀಲಿಂಗ ರೋಡಗಿ,ಮನೋಹರ ಪೂಜಾರಿ,ಸೋಮಣ್ಣ ಹುಗ್ಗೇನವರ,ಶಿವಾನಂದ ಹೊನ್ನಳ್ಳಿ,ಸುರೇಶ ಉಕುಮನಾಳ,ಭೀಮರಾಯ ಬಸರಕೋಡ, ಗೊಲ್ಲಾಳ ರೋಡಗಿ,ಬಸವರಾಜ ಸುರಗಿಹಳ್ಳಿ, ಉಮೇಶ ಮೂಲಿಮನಿ,ಸೋಮು ಹದರಿ,ಮಾಂತು ಬಮ್ಮನಳ್ಳಿ,ಸಲ್ಮಾನ ಮುಲ್ಲಾ,ಪ್ರದೀಪ ಹದರಿ, ಸಿಂಧೂರ ನಾಯ್ಕೋಡಿ,ನಿತಿನ ಉಕುಮನಾಳ, ಸಂದೀಪ ಬಿರಾದಾರ ಸೇರಿದಂತೆ ಗ್ರಾಮಸ್ಥರು, ವಿವಿಧ ಗ್ರಾಮಗಳ ಕ್ರೀಡಾಪಟುಗಳು ಉಪಸ್ಥಿತರಿದ್ದರು.ಪ್ರೌಢಶಾಲಾ ಶಿಕ್ಷಕ ಅರ್ಜುನ ವಾಲೀಕಾರ ಕಾರ್ಯಕ್ರಮವನ್ನು ನಿರೂಪಿಸಿದರು,
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 