ಮಲ್ಲಮ್ಮನ ತತ್ವಗಳು ಯುವಜನತೆಗೆ ದಾರೀದೀಪ: ಡಾ. ಕಾಂತೇಶರೆಡ್ಡಿ ಗೋಡಿಹಾಳ
Mallamma's principles are a beacon of light for the youth: Dr. Kanteshareddy Godihala
ರಾಣೆಬೆನ್ನೂರು 15 : ಮಲ್ಲಮ್ಮನ ತತ್ವ ಆದರ್ಶಗಳು ಕೇವಲ ಪುರಾಣಕ್ಕೆ ಸೀಮಿತವಾಗಬಾರದು. ನಿತ್ಯದ ಬದುಕಿನಲ್ಲಿ ರೂಢಿಯಲ್ಲಿರಬೇಕು ಎಂದು ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಮಾತನಾಡಿದರು. ನಗರದ ಆರ್ ಟಿಇಎಸ್ ಮಹಾವಿದ್ಯಾಲಯದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ 604ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ಶ್ರೀಶೈಲ ಸಮೀಪ ರಾಮಪುರ ಗ್ರಾಮದಲ್ಲಿ ನಾಗರಡ್ಡಿ ಮತ್ತು ಗೌರಮ್ಮ ದಂಪತಿಗಳ ಮಗಳಾಗಿ ಜನಿಸಿ ಬಾಲ್ಯದಲ್ಲಿ ಚನ್ನಾಮಲ್ಲಿಕಾರ್ಜುನನ್ನು ತನ್ನಆರಾಧ್ಯ ದೈವವೆಂದು ನಂಬಿ ಸದಾ ಅವನ ಧ್ಯಾನದಲ್ಲಿ ಇರುತಿದ್ದಳು. ಸಿದ್ದಾಪುರದ ಹೇಮರಡ್ಡಿ ಅವರ ಮಗ ಬರಮರಡ್ಡಿಯನ್ನು ಮದುವೆಯಾಗಿ ಬಂದ ನಂತರ ದುಕಿನಲ್ಲಿಬಹಳ ಕಷ್ಟಗಳು ಬಂದವು ಎಲ್ಲವನ್ನು ಚನ್ನಮ್ಮಲ್ಲಿಕಾರ್ಜುನನಿಗೆ ಅರ್ಿಸುವ ಮೂಲಕವಾಗಿ ಬದುಕಿನಲ್ಲಿ ಕಷ್ಟಗಳನ್ನು ಸಹಿಸಿಕೊಂಡು ಕಾಡಿಗೆ ಹೋಗಿ ದನ ಕಾಯುವಕೆಲಸ ಮಾಡಿ ಅದರಲ್ಲೂ ದೈವಿಭಕ್ತಿ ಮೆರೆದು ಕಾಯಕದಲ್ಲಿ ಕೈಲಾಸ ಕಂಡಳು ಯಂದು ನುಡಿದರು.
ಕಾಲೇಜಿನ ಅಧ್ಯಕ್ಷರಾದ ಡಾಟಟ ಸಂಜಯ್ ಸಾವುಕಾರ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಅವರು ಭಕ್ತಿ, ತ್ಯಾಗ, ಸಹನೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದರು. ಅವರು ಶಿವಭಕ್ತಿಯ ಮೂಲಕ ಜನರಲ್ಲಿ ಸತ್ಯ, ಪ್ರೀತಿ ಮತ್ತು ಭಕ್ತಿಯ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಆದರ್ಶವಾಗಿದರು.ಅವರು ಕೇವಲ ಭಕ್ತೆಯಷ್ಟೇ ಅಲ್ಲ, ಮಹಿಳೆಯ ಶಕ್ತಿ ಮತ್ತು ಆತ್ಮವಿಶ್ವಾಸದ ಸಂಕೇತವೂ ಆಗಿದ್ದರು. ಶಿವನ ಮೇಲಿನ ಅಪಾರ ನಂಬಿಕೆ ಮತ್ತು ಸೇವಾಭಾವದಿಂದ ಅವರು ಜನಮನಗಳಲ್ಲಿ ಇದ್ದಾರೆ, ಇಂದಿನ ಯುವಜನತೆ ಅವರ ಆದರ್ಶಗಳನ್ನು ಅನುಸರಿಸಿ ನೈತಿಕ ಮೌಲ್ಯಗಳೊಂದಿಗೆ ಬದುಕಬೇಕು. ಮಲ್ಲಮ್ಮನ ಆದರ್ಶ ಗುಣಗಳು ಇಂದಿನ ಜನರಿಗೆ ದಾರೀದೀಪವಾಗಿವೆ ಎಂದರು. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ರಾಮರಡ್ಡಿ ಎಸ್.ರಡ್ಡೆರವರುವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹೆಚ್. ಜಿ, ಬಸವರಜ..ಡಾ ರಮೇಶ್ ಎನ್ ಜಿ, ಡಾ. ಸರಸ್ವತಿ ಬೊಮ್ಮನಾಳ,ಡಾ. ಪಿ.ಬಿ.ಕೊಪ್ಪದ, ಮುನವರ ಅಲ್ಲಿ ಖಾನ್, ಡಾ. ಆನಂದ ಖಾನಪೇಟೆ, ಸಿ ಎನ್ .ಪೂಜಾರ್, ಶಿವಕುಮಾರ್ ಬೆಣ್ಣಿ ಉಪಸ್ಥಿತರಿದ್ದರು. ಕು. ಕವನ ಸ್ವಾಗತಿಸಿದರು ಕು. ಹುಸೇನಬಿ ನಿರೋಪಿಸಿದರು ಕು.ಶ್ರೀಗಂಧ ಅವರು ವಂದಿಸಿದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 