ಹ್ಯಾಟಿ ಮುಂಡರಗಿಯ ದುರ್ಗಮ್ಮಳನ್ನು ಭೇಟಿ ಮಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ
Mahila Congress President Jyoti M. Gondabala met Hattie Mundaragi's mother
ಲೋಕದರ್ಶನ ವರದಿ
ಕೊಪ್ಪಳ 31: ತಾಲ್ಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಅನಾಥ ದಲಿತ ಮಹಿಳೆಯನ್ನು ಭೇಟಿ ಮಾಡಿ, ಯಾವುದೇ ಆಧಾರವಿಲ್ಲದನ್ನು ಗಮನಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ದುರ್ಗಮ್ಮಳ ಗ್ರಾಮಕ್ಕೆ ಭೇಟಿ ನೀಡಿ, ಅವರಿಗೆ ಸರಕಾರಿ ಸೌಲಭ್ಯ ಸಿಗುವಂತೆ ಪ್ರಯತ್ನ ಮಾಡಲು ತಹಶೀಲ್ದಾರ ಅವರಿಗೆ ಕರೆ ಮಾಡಿ ಮಾತನಾಡಿದರು. ಈ ವೇಳೆ ಮುಂಡರಗಿ ಗ್ರಾಮದ ಕೇರಿಯ ದುರ್ಗಾದೇವಿ ಗುಡಿಯ ಹತ್ತಿರ ಅನೇಕ ಮಹಿಳೆಯರನ್ನು ಸಹ ಭೇಟಿ ಮಾಡಿ ಮಾತನಾಡಿಸಿದರು. ವಯೋವೃದ್ಧ ದುರ್ಗಮ್ಮಳಿಗೆ ಕನಿಷ್ಠ ದಾಖಲೆಗಳು ಇಲ್ಲದಿರುವುದು ತುಂಬಾ ಬೇಸರದ ಸಂಗತಿ, ಅವರ ಹೆಸರನ್ನು ಮೊದಲು ಮತದಾರ ಪಟ್ಟಿಯಲ್ಲಿ ಸೇರಿಸಿ ನಂತರ ಆಧಾರ್ ಕಾರ್ಡ್ ಮಾಡಿಸಲು ಕಳಿಸಲಾಗಿದೆ ಎಂದು ತಹಶಿಲ್ದಾರ ಬಸವರಾಜ ಅವರು ದೂರವಾಣಿ ಕರೆಯಲ್ಲಿ ತಿಳಿಸಿದ್ದನ್ನು ದುರ್ಗಮ್ಮಳಿಗೆ ತಿಳಿಸಲಾಯಿತು.
ನಂತರ ಅವರ ಆಧಾರ್ ಬಂದ ನಂತರ ಗೃಹಲಕ್ಷ್ಮೀ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಕೇರಿಯ ಅನೇಕ ಮಹಿಳೆಯರ ವಿಧವಾ ಮಾಶಾಸನ, ವೃಧ್ಯಾಪ್ಯ ಮಾಸಾಶನ, ಅಂಗವಿಕಲ ಮಾಸಾಶನ ಸಿಗಬೇಕಿದ್ದು, ಶೀಘ್ರವೇ ಅದಕ್ಕಾಗಿ ಸಂಬಂದಪಟ್ಟ ಅಧಿಕಾರಿ ವರ್ಗದವರ ಮೂಲಕ ಕ್ಯಾಂಪ್ ಮಾಡಿ, ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದರು. ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರ ಮಾರ್ಗದರ್ಶನದಲ್ಲಿ ಪ್ರತಿ ಹಳ್ಳಿಯಲ್ಲಿ ಇಂತಹ ಕ್ಯಾಂಪ್ ಮಾಡುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಕಾಂಗ್ರೆಸ್ ಸದಾ ಸನ್ನದ್ಧವಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 