ಮಹಾವೀರ ಮಲ್ಟಿಪರ್ಪಸ ಸೌಹಾರ್ದ ಸಹಕಾರಿ ರಾಜ್ಯಮಟ್ಟಕ್ಕೆ ವಿಸ್ತರಣೆ
Mahaveera Multipurpose Souharda Cooperative expands to the state level
ಲೋಕದರ್ಶನ ವರದಿ
ಹುಕ್ಕೇರಿ 07: ಸ್ಥಳೀಯ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಧರವಾಡ ಜಿಲ್ಲೆಯ ಹುಬ್ಬಳ್ಳಿ ಪಟ್ಟಣದಲ್ಲಿ ಶಾಖೆ ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ. ಈ ಮೂಲಕ ಸಹಕಾರಿಯು ತನ್ನ ಕಾರ್ಯವ್ಯಾಪ್ತಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲು ಅಣಿಯಾಗಿದೆ ಎಂದು ಸಹಕಾರಿ ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದರು. ಶುಕ್ರವಾರದಂದು ಮಹಾವೀರ ಶಿಕ್ಷಣ ಸಂಸ್ಥೆ ಶಾಲಾ ಆವರಣದಲ್ಲಿ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘದ 26 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಪ್ರತಿ ವರ್ಷ ಕೋಟ್ಯಾಂತರ ರೂ ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕ ಸದೃಢತೆ ಸಾಧಿಸಿದೆ.
ಸಂಘ ಆರ್ಥಿಕ ಲಾಭದ ಜತೆಗೆ ಸಮಾಜಮುಖಿಯಾಗಿ ಹಲವಾರು ಕಾರ್ಯ ನಿರ್ವಹಿಸಿದೆ ಎಂದರು. ಈಗಾಗಲೇ ಪಟ್ಟಣ ಹೊರವಲಯದಲ್ಲಿ ಮಹಾವೀರ ಸುಪರ್ ಮಾರ್ಕೆಟ್ ಪ್ರಾರಂಭಿಸುವ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸಂಘ ಪ್ರಾರಂಭದಿಂದ ಇಲ್ಲಿಯವರೆಗೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಆಗುತ್ತಾ ಬಂದಿರುವುದು ಗ್ರಾಹಕರ ಹಾಗೂ ಸದಸ್ಯರ ವಿಶ್ವಾಸರ್ಹತೆಗೆ ನಿದರ್ಶನವೆಂದರು. ಜಿನ್ನಪ್ಪಾ ಸಪ್ತಸಾಗರ, ಬಸವರಾಜ ಪ್ಯಾಟಿ ಮತ್ತಿತರರು ಮಾತನಾಡಿ ಅಭಿಪ್ರಾಯ ತಿಳಿಸಿದರು. ಸಹಕಾರಿ ನಿರ್ದೇಶಕ ಪ್ರಜ್ವಲ ನಿಲಜಗಿ ವಾರ್ಷಿಕ ವರದಿ ಮಂಡಿಸಿದರು. ಗೀರೀಶ ಕುಲಕರ್ಣಿ ಆರ್ಥಿಕ ಪ್ರಗತಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಸುಕುಮಾರ ಖತಗಲ್ಲಿ, ಬಾಹುಬಲಿ ಸೊಲ್ಲಾಪೂರೆ, ಭರಮಪ್ಪಾ ಲಠ್ಠಿ, ಸುಕುಮಾರ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪೂರೆ, ಅಕ್ಕಪ್ಪಾ ಖತಗಲ್ಲಿ, ಅಶೋಕ ಪಾಟೀಲ, ಪಾರೇಶ ಗದ್ದಿ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಸಿದ್ದಪ್ಪಾ ಕಂಠಿಕಾರ, ಅಶೋಕ ನಾಯಿಕ ಮುಖಂಡರಾದ ಎ.ಕೆ.ಪಾಟೀಲ, ನೇಮಿನಾಥ ಖೇಮಲಾಪೂರೆ, ಶಿವಾನಂದ ಪಟ್ಟಣಶೆಟ್ಟಿ, ಅನೀಲ ಶೆಟ್ಟಿ ಮತ್ತಿತರರಿದ್ದರು. ಸಿ.ಇ.ಒ ರಾಜೇಂದ್ರ ಪಾಟೀಲ ಸ್ವಾಗತಿಸಿ, ವಂದಿಸಿದರು.
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ 