ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 81 ನೇ ಜಯಂತಿ
ಮಹಾಲಿಂಗಪುರ 28: ಜಗದ್ಗುರು ಸಿದ್ದಾರೂಢ ಪರಂಪರೆಯ ಭವ್ಯತೆಯನ್ನು ಉಳಿಸಿ ಬೆಳೆಸುತ್ತಿರುವ ಬಿದರಿನ ಡಾ ಶಿವಕುಮಾರ ಮಹಾಸ್ವಾಮಿಗಳು ಒಬ್ಬರು ಅವರು ಈ ನಾಡಿನಾದಂತ ಸದ್ಗುರು ಸಿದ್ದರೂಢರ ಪರಂಪರೆಯನ್ನು ನಾಡಿಗೆ ಉನಬಡಿಸುತ್ತಿದ್ದಾರೆ ಅಂತಹ ಮಹಾತ್ಮರ ಜಯಂತಿ ಆಚರಿಸುವುದು ನಮ್ನೆಲ್ಲರ ಭಾಗ್ಯ ಎಂದು ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಸಹಜಾನಂದ ಸ್ವಾಮಿಗಳು ಹೇಳಿದರು.
ಸ್ಥಳೀಯ ಶ್ರೀ ಬನಶಂಕರಿ ದೇವಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ನಡೆದ ಡಾ ಶಿವಕುಮಾರ ಸ್ವಾಮಿಗಳು 81 ನೇ ಹುಟ್ಟುಹಬ್ಬದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಆಶೀರ್ವಚನ ನೀಡಿ ಸದ್ಗುರು ಕರುಣಾಮಯಿ ಆಗಿದ್ದಾನೆ. ಆತನ ಚರಣಕ್ಕೆ ಶರಣಾದರೆ ಸಾಕು ಕೃಪೆಯಾಗುತ್ತದೆ. ಸದ್ಗುರುವಿನ ಅನುಗ್ರಹದಿಂದಲೇ ಸುಖ, ಶಾಂತಿ, ಸಮಾಧಾನ ದೊರೆಯುತ್ತದೆ. ನಮ್ಮ ಮನಸ್ಸಿನಲ್ಲಿ ಗುರುವಿದ್ದರೆ ಸಾಲದು ಗುರುವಿನ ಮನಸ್ಸಿನಲ್ಲಿ ನಾವಿರಬೇಕು. ಗುರುಕೃಪೆ ಪುಸ್ತಕದಿಂದ ಆಗುವಂಥದಲ್ಲ. ಅಂತಕರಣದಿಂದ ಆಗುವಂಥದ್ದು. ಸದ್ಗುರು ಸೇವೆಗೆ ಮಾತ್ರ ಒಲಿಯುತ್ತಾನೇ ಎಂದರು
ಪ್ರಾಸ್ತವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳು ಆದ ಶರಣ ಶ್ರೀ ಮಲ್ಲೇಶಪ್ಪಣ್ಣ ಕಟಗಿ ಶ್ರೀಗಳ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ನಿರಂತರ ಕಾರ್ಯಮಗ್ನರಾಗಿರುತ್ತೆವೇ ಅವರು ನಿಸ್ವಾರ್ಥ ಮತ್ತು ಕರುಣೆಯ ನೈಜ ಸಾಕಾರಮೂರ್ತಿ ಅವರು ಅಧ್ಯಾತ್ಮ ಕ್ಷೇತ್ರದ ಮೇರು ಪರ್ವತವಾಗಿದ್ದಾರೆ.ಸಮಾಜ ಸೇವೆಗೆ ಅಪ್ರತಿಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರ ಕೆಲಸ ಲಕ್ಷಾಂತರ ಜನರ ಜೀವನವನ್ನು ಪಾವನಗೋಳಿಸಿದೆ ಎಂದರು.
ಶ್ರೀ ಬಸವಾನಂದ ಬ್ರಹ್ಮ ವಿದ್ಯಾಶ್ರಮ ಟ್ರಸ್ಟಿನ ಅಧ್ಯಕ್ಷರು ವೇದಾಂತ ವಾಗೀಶ ಶಿವಾದ್ವೈತ ಭೂಷಣ, ಗಿತೋತ್ತಮ, ವೇದಾಂತಾಚಾರ್ಯ ಪ ಪೂ ಜಗದ್ಗುರು ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 81ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ ಬಿ ಡಿ ಸೊರಗಾವಿ, ಪೂಜ್ಯರಾದ ತಾಯಿ ಗೀತಮ್ಮ ತಾಯಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಶ್ರೀ ಸಿದ್ಧಾನಂದ ಭಾರತಿ ಸ್ವಾಮಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಮುಖ 5 ಲಕ್ಷಣಗಳನ್ನು ವಿವರಿಸಿ ಮಕ್ಕಳ ಮಾನಸ ಪ್ರಪಂಚವನ್ನು ಜಾಗೃತಗೊಳಿಸಿದರು ಅಂದರೆ ಉತ್ತಮ ವಿದ್ಯಾರ್ಥಿ ಯಾದವರು ಕಾಕಚೇಷ್ಟೆ ಬಕ ಜ್ಞಾನ ಮಿತಹಾರ ಶ್ವಾನನಿದ್ರೆ ಮತ್ತು ಗ್ರಹತ್ಯಾಗ ಇವುಗಳನ್ನು ಸರಿಯಾಗಿ ಪಾಲಿಸಿ ಜೀವನದಲ್ಲಿ ಅನ್ವಯಿಸಿಕೊಂಡು ನಡೆದರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಪೂಜ್ಯರು ಹೇಳಿದ ಈ ಐದು ತತ್ವಗಳು ಮನುಷ್ಯನ ಬದುಕಿನಲ್ಲಿ ಯಶಸ್ವಿಯನ್ನು ತಂದು ಕೊಡುವುದಲ್ಲದೆ ಕೀರ್ತಿಯು ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಗುರುವಿಗೆ ಶರಣಾಗುವುದರ ಲಾಭದ ಕುರಿತು ವಿವರಿಸಿದರು.
ನಂತರ ಮಾತನಾಡಿದ ಶ್ರೀ ಸಿದ್ದರಾಮ ಸದ್ಗುರುಗಳ ಜಯಂತಿ ಉತ್ಸವ ಆಚರಣೆಯ ಬಹಳ ಮಹತ್ವದ ಭಾರತ ದೇಶದ ಪ್ರಾಚೀನ ಸಂಪ್ರದಾಯ ಸಂಸ್ಕೃತಿ ಅನುಸಾರವಾಗಿ ಜಗತ್ತಿಗೆ ಅಧ್ಯಾತ್ಮ ಕ್ಷೇತ್ರದ ಅಧಿಪತಿಯಾಗಿ ಮೆರೆಯುವಂತೆ ಮಾಡಿದೆ. ಸಾಧುಗಳು, ಸಂತರು, ಅವದೂತರು, ಮಹಿಮಾಪುರುಷರು, ಜ್ಞಾನಿಗಳು ಸಿದ್ದಪುರುಷರು, ಸುಫಿ ಸಂತರು, ಋಷಿ ಮುನಿಗಳು ಈ ನಾಡಿನ ಬಹು ದೊಡ್ಡ ಅಸ್ತಿ. ಅಂತಹವರಲ್ಲಿ ವೈಜಯಂತಿ ಮಾಲಿಕೆಯ ಉತ್ತಮರಲ್ಲಿ ಒಬ್ಬರೇನಿಸಿದ ಅದ್ವೈತ ಸಾರ್ವಭೌಮ ಸುಜ್ಞಾನ ಚಕ್ರವರ್ತಿ ಸಕಲ ಮತೋದ್ದಾರಕ ಶ್ರೀ ಸಿದ್ದಾರೂಢರು 18 ಶತಮಾನದಲ್ಲಿ ಬಿದರಿನಲ್ಲಿ ಜನಿಸಿ ಹುಬ್ಬಳ್ಳಿಯಲ್ಲಿ ನೆಲೆಸಿ ನಡೆದಾಡುವ ದೇವರೆಸಿಕೊಂಡರು. ಅದೇ ನಾಡಿನಲ್ಲಿ ಇಪ್ಪತ್ತೊಂದನೆಯ ಜನಿಸಿ ಬಂದವರು ಪ ಪೂ ಶ್ರೀ ಡಾ ಶಿವಕುಮಾರ ಸ್ವಾಮಿಗಳು ಭಾರತದ ಅಧ್ಯಾತ್ಮ ಕ್ಷೇತ್ರದ ಕೀರ್ತಿಯನ್ನು ವಿಶ್ವಕ್ಕೆ ಬೆಳಗುತ್ತಿದ್ದಾರೆ ಎಂದರು.
ಮುತೈದೆಯರು ಶಾಲಾ ಶಿಕ್ಷಕಿಯರು ಭಾಗವಹಿಸಿ ತೊಟ್ಟಿಲು ತೂಗುವ ಕಾರ್ಯಕ್ರಮವನ್ನು ಜೋಗುಳ ಪದಗಳನ್ನು ಹಾಡುವುದರ ಮೂಲಕ ಶ್ರೀಗಳ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ಬಿ ಡಿ ಸೋರಗಾವಿ ಅವರು ಮಹಾ ಮಂಗಳಾರತಿ ನೆರವೇರಿಸಿದರು ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಶ್ರೀ ಬಸವಾನಂದ ಶಾಲೆ ಎಲ್ಲ ಸಿಬ್ಬಂದಿ ವರ್ಗದವರು ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲಾ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಿಸಿದ್ದರು ಶ್ರೀ ಹುಮಾಯಿನ ಸುತಾರ್ ಕಾರ್ಯಕ್ರಮವನ್ನು ನಿರುಪಿಸಿದರು ಶ್ರೀ ಎಸ್ ಕೆ ಗಿಂಡೆ ವಂದಿಸಿದರು.