ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಸರ್ವಕಾಲಕ್ಕೂ ಮಾದರಿ: ಕುದುರಿಸಾಲವಾಡಗಿ
Maharishi Valmiki's thoughts are a model for all times: Kudurisalavadagi
ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಸರ್ವಕಾಲಕ್ಕೂ ಮಾದರಿ: ಕುದುರಿಸಾಲವಾಡಗಿ
ದೇವರಹಿಪ್ಪರಗಿ 07: 24000 ಶ್ಲೋಕಗಳ ಮೂಲಕ ರಾಮಾಯಣವನ್ನು ರಚಿಸಿ ಇಡೀ ನಾಡಿಗೆ ಶ್ರೀರಾಮನ ಆದರ್ಶ ಗುಣಗಳನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಸರ್ವಕಾಲಕ್ಕೂ ಮಾದರಿಯಾಗಿವೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಹೇಳಿದರು.ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ತಹಶೀಲ್ದಾರ ಪ್ರಕಾಶ ಸಿಂದಗಿ ಅವರು ಮಾತನಾಡುತ್ತಾ ಮನಪರಿವರ್ತನೆ ಹೊಂದಿ ಸತ್ಸಂಗದ ಮಾರ್ಗವನ್ನು ಅನುಸರಿಸಿ,ಸೀತಾಮಾತೆ ಹಾಗೂ ಲವಕುಶರಿಗೆ ಆಶ್ರಯದಾತರಾಗಿದ್ದ ವಾಲ್ಮೀಕಿಯವರು ಒಬ್ಬ ಶ್ರೇಷ್ಠ ಸಂತ ಹಾಗೂ ಕವಿ ಎನಿಸಿಕೊಂಡಿದ್ದರು ಎಂದು ಹೇಳಿದರು. ಶಿರಸ್ತೇದಾರ ಸುರೇಶ ಮ್ಯಾಗೇರಿ ಹಾಗೂ ಶಿಕ್ಷಕ ಜಿ ಪಿ ಬಿರಾದಾರ ಮಾತನಾಡಿದರು.ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಭಾರತಿ. ಚಲುವಯ್ಯ, ಪಿಎಸ್‌ಐ ಸಚಿನ ಆಲಮೇಲಕರ, ಪಟ್ಟಣ ಪಂಚಾಯತ ಅಧ್ಯಕ್ಷರ ಪ್ರತಿನಿಧಿ ಬಸು ದೇವಣಗಾಂವ, ಪಟ್ಟಣ ಪಂಚಾಯತ ಸದಸ್ಯ ಕಾಸುಗೌಡ ಬಿರಾದಾರ,ಕಾಸು ಜಮಾದಾರ,ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ ಯಲಗಾರ, ಸರ್ವೇಶ ಆಲಮೇಲ, ನಾನಾಗೌಡ ಸಿದರೆಡ್ಡಿ, ಅಪ್ಪಾಜಿ ದೇಸಾಯಿ, ವಿರೇಶ ಕುದರಿ,ಸುನೀಲ ಮಾಗಿ, ಚನ್ನಬಸು ಹೊಸಮನಿ, ರಾಜು ಕಂಠಿ,ಗೊಲ್ಲಾಳ ರೋಡಗಿ, ರಮಾನಂದ ಚಕ್ಕಡಿ, ಸದ್ದಾಂ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಾಲ್ಮೀಕಿಯ ಮಹರ್ಷಿಗಳ ಅಭಿಮಾನಿಗಳು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 