ಮಹರ್ಷಿ ವಾಲ್ಮೀಕಿಯ ಭವ್ಯ ಮೆರವಣಿಗೆ
Maharishi Valmiki's grand procession
ಲೋಕದರ್ಶನ ವರದಿ
ಮಹರ್ಷಿ ವಾಲ್ಮೀಕಿಯ ಭವ್ಯ ಮೆರವಣಿಗೆ
ಕಂಪ್ಲಿ 13 : ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು. ಇಲ್ಲಿನ ಎದುರು ಬಸವಣ್ಣದಿಂದ ಆರಂಭಗೊಂಡ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ದ್ಯಾವಮ್ಮ ಗುಡಿವರೆಗೆ ತೆರಳಿ, ತದನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳ್ಳದ ಬಳಿಯಲ್ಲಿರುವ ವಾಲ್ಮೀಕಿ ಪುತ್ಥಳಿಯಲ್ಲಿ ಸಮಾವೇಶಗೊಂಡಿತು. ಸುಮಂಗಲಿಯರ ಕುಂಭ, ಕಳಸ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಸೋಮಲಾಪುರ ಹಗಲುವೇಷಧಾರಿಗಳ ತಂಡದ ಪ್ರದರ್ಶನ ಮೆರವಣಿಗೆ ಮೆರಗು ನೀಡುವ ಜೊತೆಗೆ ಜನರ ಆಕರ್ಷಣೆಗೆ ಪಾತ್ರರಾದರು. ಮೆರವಣಿಗೆಯದ್ದಕ್ಕೂ ಯುವಕರು ಕುಣಿದು ಸಂಭ್ರಮಿಸಿದರು. ತದನಂತರ ಗ್ರಾಪಂ ಸದಸ್ಯ ನಾಯಕರ ವೆಂಕೋಬ ಮಾತನಾಡಿ, ರಾಮಾಯಣ ಮಹಾಕಾವ್ಯದ ಮೂಲಕ ವಾಲ್ಮೀಕಿ ಮಹಾಕವಿಯು ಇಡೀ ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯ ಸಂದೇಶ ನೀಡಿದ್ದಾರೆ. ವಾಲ್ಮೀಕಿ ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿಯ ಹಾದಿಯಲ್ಲಿ ಹಾಗೂ ಅರಿವಿನ ಮಾರ್ಗದಲ್ಲಿ ಸಾಗಿದೆ’. ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಾಯಮ್ಮ, ಮುಖಂಡರಾದ ಹೊನ್ನೂರ್ಪ, ಯಂಕೋಬಣ್ಣ, ನಾಗಪ್ಪ, ಗಾದಿಲಿಂಗಪ್ಪ, ತಿಪ್ಪಯ್ಯ, ದುರುಗಯ್ಯ, ವಿರುಪಣ್ಣ, ಮುದಿಯಪ್ಪ, ದೊಡ್ಡನಾಯಕ, ಹೇಮಯ್ಯ, ವಡ್ಡಿನ ಪಕ್ಕೀರ್ಪ, ದೇವರಮನೆ ಕರಿಯಪ್ಪ, ಕಮಲಪುರ ಹೊನ್ನೂರ್ಪ, ತಿಮ್ಮಲಾಪುರ ಶಿವಣ್ಣ, ಮರಿಯಪ್ಪ, ಕೆಂಪು ವೆಂಕೋಬ, ನೆಲ್ಲುಡಿ ಬಸಪ್ಪ ಸೇರಿದಂತೆ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 