ಬಗರನಾಳದಲ್ಲಿ ಮಹಾ ಪರಿನಿರ್ವಾಣೋತ್ಸವ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮ

ಬಗರನಾಳದಲ್ಲಿ ಮಹಾ ಪರಿನಿರ್ವಾಣೋತ್ಸವ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮ  Mahaparinirvana Utsava and Guru Purnima Program at Bagaranala

ಲೋಕದರ್ಶನ ವರದಿ 

  ಬೆಟಗೇರಿ 27 : ಗೋಕಾಕ ತಾಲೂಕಿನ ಬಗರನಾಳ ಗ್ರಾಮದ ಬಸವ ಪಿರಾಮಿಡ್ ಹಿಲ್ಸ್‌ ಧ್ಯಾನ ಕೇಂದ್ರದಲ್ಲಿ ಬುಧವಾರ ಜು.29ರಂದು ಸಾಯಂಕಾಲ 6ಗಂಟೆಗೆ ಬಗರನಾಳ ಬಸವ ಪಿರಮಿಡ್ ಹಾಗೂ ಮನಸಾಕ್ಷಿ ಫೌಂಡೇಶನ್ ಇಂಟರ್ನ್ಯಾಷನಲ್ ಸಹಭಾಗಿತ್ವದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ 4ನೇ ವರ್ಷದ ಮಹಾ ಪರಿನಿರ್ವಾಣೋತ್ಸವ ಮತ್ತು ಗುರು ಪೂರ್ಣಿಮೆಯ ವಿಶೇಷ ಧ್ಯಾನ ಹಾಗೂ ಸತ್ಸಂಗ ಕಾರ್ಯಕ್ರಮ ನಡೆಯಲಿದೆ.  

  ಬೆಳಗಾವಿ ಮೃತ್ಯುಂಜಯಸ್ವಾಮಿ ಹಿರೇಮಠ ದಿವ್ಯ ಸಾನಿಧ್ಯ, ಬಗರನಾಳ ಬಸವ ಪಿರಾಮಿಡ್ ಸಂಸ್ಥಾಪಕ ಗುರೂಜಿ ಡಾ. ಮಲ್ಲಿಕಾರ್ಜುನ ಕರಜಗಿಮಠ ಸಾನಿಧ್ಯ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿಪ್ಪಾಣಿಯ ಮಂಜುನಾಥ ದುರ್ಗನ್ನವರ, ಹುಬ್ಬಳ್ಳಿಯ ಸೋಮನಾಥ ಶ್ರೇಷ್ಠಿ, ಬೆಳಗಾವಿ ಎಮಿನೆಂಟ್ ಕೋಚಿಂಗ್ ಸಂಸ್ಥಾಪಕ ಮಂಜುನಾಥ ಕೌಲಗಿ, ಗೋಕಾಕ ಪೂರ್ವಿ ಸ್ಪೋಟ್ಸ್‌ನ ಕಿಶೋರ ಭಟ್, ಗೋಕಾಕ ದಂತ ವೈದ್ಯೆ ಡಾ.ಅಂಜನಾ ಬಡಗನ್ನವರ, ಗೋಕಾಕದ ಬಸವಂತಪ್ಪ ಉಳ್ಳಾಗಡ್ಡಿ, ಗೋಕಾಕ ಪಿರಾಮಿಡ್ ಇಂಜಿನಿಯರ್ ಸುಬೋಧ ಹುಂಡೇಕರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

  ಡಾ. ಪಿ.ಎಸ್‌.ಖಾನನ್ನವರ ನೀರಿನ ಮಹತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ. ಹುಲಕುಂದದ ಹನುಮಂತ ಬೂದಿ, ಕೊಡ್ಲಿವಾಡದ ಹನುಮಂತ ಕುರಿ ಅನ್ನಪ್ರಸಾದ ಸೇವೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿತ ಹರ, ಗುರು, ಚರಮೂರ್ತಿಗಳು, ಶ್ರೀಗಳು, ಗಣ್ಯರು, ಅತಿಥಿಮಹೋದೆಯರನ್ನು ಬಗರನಾಳ ಬಸವ ಪಿರಮಿಡ್ ಹಾಗೂ ಮನಸಾಕ್ಷಿ ಫೌಂಡೇಶನ್ ಇಂಟರ್ನ್ಯಾಷನಲ್ ವತಿಯಿಂದ ಸತ್ಕರಿಸಲಿದ್ದಾರೆ. 

  ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಮಕ್ಕಳು, ಸಂತರು, ಶರಣರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಬಗರನಾಳ ಬಸವ ಪಿರಮಿಡ್ ಹಾಗೂ ಮನಸಾಕ್ಷಿ ಫೌಂಡೇಶನ್ ಇಂಟರ್ನ್ಯಾಷನಲ್ ಸಹಭಾಗಿತ್ವದ ಈ ಕಾರ್ಯಕ್ರಮ ಆಯೋಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.