ಮಹಾಂತೇಶ ಹಿಟ್ಟಿನಮಠಗೆ ಪಿತೃ ವಿಯೋಗ
Mahantesh Hittinmath's father passes away
ಮಹಾಲಿಂಗಪುರ 27: ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಪ್ರಭಾರಿ ಅಧ್ಯಕ್ಷರಾದ ಮಹಾಂತೇಶ ಹಿಟ್ಟಿನಮಠ ಅವರ ತಂದೆ (ಮಲ್ಲಯ್ಯ ಅಪ್ಪಯ್ಯ ಹಿಟ್ಟಿನಮಠ ಅವರು ತಮ್ಮ 86ನೇಯ) ವಯಸ್ಸಿನಲ್ಲಿ ವಯೋ ಸಹಜತೆಯಿಂದ ಅಸುನೀಗಿದರು, ಅವರಿಗೆ 3 ಗಂಡು ಮಕ್ಕಳು,3 ಹೆಣ್ಣು ಮಕ್ಕಳು, ಪತ್ನಿ, ಸೊಸೆಯಂದರು, ಮೊಮ್ಮಕ್ಕಳು, ಅಳಿಯಂದರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದಿವಂಗತ ಮಲ್ಲಯ್ಯ ಅವರ ಅಂತ್ಯಕ್ರಿಯ ಗುರುವಾರ ಸಂಜೆ 4 ಘಂಟೆಗೆ ಸುಮಾರು 10, ಸಾವಿರಕ್ಕೂ ಹೆಚ್ಚು ಜನರೊಂದಿಗೆ ಜರುಗಿತು. ಹೆಸರಾಂತ ವ್ಯಾಪಾರಸ್ಥರಾಗಿದ್ದ ಇವರ ಗೌರವಾರ್ಥ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದವು. ಬಾಗಲಕೋಟ ಜಿಲ್ಲೆಯ ಮಹಾಂತೇಶ ಹಿಟ್ಟಿನಮಠ ಅಭಿಮಾನಿ ಬಳಗ, ಸ್ನೇಹಿತರು, ರಾಜಕೀಯ ನಾಯಕರಾದ ಜಮಖಂಡಿ ಶಾಸಕರಾದ ಜಗದೀಶ ಗುಡಗುಂಟಿ, ಸನದಿ ಶಿಕ್ಷಣ ಸಂಸ್ಥೆಯ ನಾಗಪ್ಪ ಸನದಿ, ಅಜಯ ಕಡಪಟ್ಟಿ, ನ್ಯಾಯವಾದಿ ಪ್ರಕಾಶ ವಸ್ತ್ರದ, ಯಲ್ಲನಗೌಡ ಪಾಟೀಲ, ಬಸನಗೌಡ ಪಾಟೀಲ, ಶೇಖರ ಅಂಗಡಿ, ಡಾ ಅಜೀತ ಕನಕರಡ್ಡಿ, ಡಾ ವಿಜಯ ಹಂಚಿನಾಳ, ಅಶೋಕ ಅಂಗಡಿ, ರಮೇಶ ಪಂಚಕಟ್ಟಿಮಠ, ನಾರಾಯಣ ಬರಮನಿ, ಆನಂದ ಕನಕರಡ್ಡಿ ಮುಂತಾದ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ವ್ಯಾಪಕ ಕಂಬನಿ: ಮಲ್ಲಯ್ಯ ಅವರ ನಿಧಾನಕ್ಕೆ ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ, ಬಾಗಲಕೋಟ ಸಂಸದರಾದ ಪಿ ಸಿ ಗದ್ದಿಗೌಡರ, ತೇರದಾಳ ಶಾಸಕರಾದ ಸಿದ್ದು ಸವದಿ,ಮಾಜಿ ಸಚಿವರಾದ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪಿ ಎಚ ಪೂಜಾರ, ಶ್ರೀಕಾಂತ ಕುಲಕರ್ಣಿ, ಅರುಣ ಶಹಾಪುರ, ಶಾಂತಗೌಡ ಪಾಟೀಲ ಸೇರಿದಂತೆ ಇನ್ನು ಅನೇಕ ನಾಯಕರು ಕಂಬನಿ ಮಿಡಿದಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 