ಆಗಸ್ಟ್‌ 01 ರಂದು ಮಹಾಂತ ಶಿವಯೋಗಿ ಜನ್ಮದಿನಾಚರಣೆ: ವ್ಯಸನ ಮುಕ್ತ ದಿನಾಚರಣೆ

ಆಗಸ್ಟ್‌ 01 ರಂದು ಮಹಾಂತ ಶಿವಯೋಗಿ ಜನ್ಮದಿನಾಚರಣೆ: ವ್ಯಸನ ಮುಕ್ತ ದಿನಾಚರಣೆ Mahant Shivayogi's birthday celebration on August 01: Addiction-Free Day

ಆಗಸ್ಟ್‌ 01 ರಂದು ಮಹಾಂತ ಶಿವಯೋಗಿ ಜನ್ಮದಿನಾಚರಣೆ: ವ್ಯಸನ ಮುಕ್ತ ದಿನಾಚರಣೆ 

ಬಳ್ಳಾರಿ 31: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನುಆಗಸ್ಟ್‌ 01 ರಂದು ಬೆಳಿಗ್ಗೆ 10.30 ಗಂಟೆಗೆ ನಗರದಡಾ.ರಾಜ್‌ಕುಮಾರ್‌ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣ ಹೊಂಗಿರಣದಲ್ಲಿ ಆಯೋಜಿಸಲಾಗಿದೆ. 

ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್‌.ಜಮೀರ್‌ಅಹ್ಮದ್‌ಖಾನ್‌ಅವರುಕಾರ್ಯಕ್ರಮಉದ್ಘಾಟಿಸುವರು.ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿಅವರುಅಧ್ಯಕ್ಷತೆ ವಹಿಸುವರು. 

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಜೆ.ಎನ್‌ಗಣೇಶ್, ಸಂಸದರಾದಈ.ತುಕಾರಾಮ್, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕ ಬಿ.ನಾಗೇಂದ್ರ, ವಿಧಾನಪರಿಷತ್ ಶಾಸಕ ಡಾ.ಚಂದ್ರಶೇಖರ್ ಬಿ.ಪಾಟೀಲ, ಶಾಸಕರಾದ ಬಿ.ಎಂ.ನಾಗರಾಜ, ಈ.ಅನ್ನಪೂರ್ಣ, ವಿಧಾನಪರಿಷತ್ ಶಾಸಕರಾದ ಶಶೀಲ್ ನಮೋಶಿ, ವೈ.ಎಂ.ಸತೀಶ್, ಡಾ.ಬಾಬು ಜಗಜೀವನ್‌ರಾಮ್‌ಚರ್ಮಕೈಗಾರಿಕಾಅಭಿವೃದ್ಧಿ ನಿಗಮದಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷಜೆ.ಎಸ್‌.ಆಂಜನೇಯಲು, ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಅಧ್ಯಕ್ಷಕೆ.ಇ.ಚಿದಾನಂದಪ್ಪ ಸೇರಿದಂತೆಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 

ಸತ್ಯಂ ಶಿಕ್ಷಕರ ಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷ ಅವರುಕಾರ್ಯಕ್ರಮಕುರಿತು ವಿಶೇಷಉಪನ್ಯಾಸ ನೀಡುವರು.ಕಾರ್ಯಕ್ರಮದಲ್ಲಿ ಬಳ್ಳಾರಿ ಹಿಂದೂಸ್ತಾನಿ ಗಾಯಕ ನಾಗಭೂಷಣ ಬಾಪುರೆಅವರಿಂದ ವಚನ ಸಂಗೀತ ಪ್ರಸ್ತುತಪಡಿಸುವರು.ಬಳ್ಳಾರಿಯ ಅಮಾತಿ ಬಸವರಾಜ್‌ಕಾರ್ಯಕ್ರಮ ನಿರೂಪಿಸುವರು. 

ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ಶೋಭಾರಾಣಿ.ವಿ.ಜೆ.,ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಅಪರಜಿಲ್ಲಾಧಿಕಾರಿ ಮಹಮ್ಮದ್‌ಎನ್‌.ಝುಬೇರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂರಾವ್ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.