ಮಡಿವಾಳ ಮಾಚಿದೇವರ ಅದ್ದೂರಿ ರಥೋತ್ಸವ ಸಂಪನ್ನ
Madiwala Machideva's grand chariot festival completes
ದೇವರ ಹಿಪ್ಪರಗಿ 26 : 12ನೇ ಶತಮಾನದ ಶರಣ ಶ್ರೇಷ್ಠ, ಕಾಯಕನಿಷ್ಠ, ವಚನ ಸಾಹಿತ್ಯ ಭಂಡಾರ ರಕ್ಷಕ ಶರಣ ಮಡಿವಾಳ ಮಾಚಿದೇವರ ಜಾತ್ರಾ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಸಾವಿರಾರು ಭಕ್ತವೃಂದದೊಂದಿಗೆ ವಿಜೃಂಭಣೆಯಿಂದ ಜರುಗಿತು.ಪಟ್ಟಣದಲ್ಲಿ ಮಾಚಿದೇವರ ರಥೋತ್ಸವದ ಅಂಗವಾಗಿ ಶನಿವಾರ ಗದ್ದುಗೆಮಠದಲ್ಲಿ ಸಾಂಪ್ರದಾಯಿಕವಾಗಿ ನಡೆದು ಬಂದ ಪೂಜಾ ವಿಧಿವಿಧಾನಗಳು ಬೆಳಿಗ್ಗೆ ಹೋಮ ಹವನದೊಂದಿಗೆ ಆರಂಭಗೊಂಡವು.
ನಂತರ ಆರಾ ಎಂದೇ ಕರೆಯಲಾಗುವ ಪ್ರಕೃತಿಗೆ ಆಹಾರ ನೀಡುವುದು ಜರುಗಿತು.ಸಾಯಂಕಾಲ ಗದ್ದುಗೆ ಮಠದ ಮ.ನಿ.ಪ್ರ ಮಡಿವಾಳೇಶ್ವರ ಮಹಾಸ್ವಾಮಿಗಳು, ಕಿರಿಯ ಸ್ವಾಮಿಗಳು ಹಾಗೂ ಪಟ್ಟಣದ ಪ್ರಮುಖರ ನೇತೃತ್ವದಲ್ಲಿ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಗದ್ದುಗೆಮಠದಿಂದ ಹೊರಟು ಮೇನ್ ಬಜಾರಿನಲ್ಲಿರುವ ತೇರಿನವರೆಗೆ ಸಾಗಿ 5 ಸುತ್ತು ಪ್ರದಕ್ಷಿಣೆ ಹಾಕಿ ನೈವೇದ್ಯ (ಬಡ್ಯಾಣ) ಅರ್ಿಸಲಾಯಿತು.
ತದನಂತರ ಬೆಳಿಗ್ಗೆಯಿಂದಲೇ ಹೂವಿನ ಹಾರ, ತಳಿರು ತೋರಣಗಳಿಂದ ಶೃಂಗಾರಗೊಂಡ ರಥ (ತೇರ) ಕ್ಕೆ ನೆರೆದ ಸಾವಿರಾರು ಜನ ಭಕ್ತರ ಜಯಕಾರ, ಉದ್ಘೋಶಗಳ ಮೂಲಕ ಕಳಸಾರೋಹಣ ನೆರವೇರಿಸಿ ಚಾಲನೆ ನೀಡಲಾಯಿತು. ರಥೋತ್ಸವಕ್ಕೆ ಈ ಬಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದ ಕಾರಣ ಯುವಭಕ್ತ ಸಮೂಹ ಉತ್ಸಾಹದಿಂದ ರಥವನ್ನು ಸರಾಗವಾಗಿ ಎಳೆದು ತಮ್ಮ ಭಕ್ತಿ, ಭಾವ ತೋರಿದರು.
ಈ ಸಮಯದಲ್ಲಿ ಮಹಿಳೆಯರು, ಮಕ್ಕಳು, ಯುವಕರು ತಾವು ತಂದ ಉತ್ತತ್ತಿ, ಬಾಳೆಹಣ್ಣುಗಳನ್ನು ರಥೋತ್ಸವ ಸಾಗುವಾಗ ಅದರ ಮೇಲೆ ಎರೆಚಿ ಸಂತಸಪಟ್ಟರು. ನಂತರ ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಉತ್ಸವ ಹೊರವಲಯದ ಮಡಿವಾಳ ಮಾಚಿದೇವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ತೆರಳಿ ಪುನಃ ಮರಳಿ ಗದ್ದಿಗೆಮಠಕ್ಕೆ ಬಂದು ಸೇರಿತು.ಬೆಳಿಗ್ಗೆಯಿಂದ ಆರಂಭವಾದ ಈ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತಸಮೂಹ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಮಾಚಿದೇವರ ಕೃಪೆಗೆ ಪಾತ್ರವಾಯಿತು. ಇನ್ನೂ ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮ ವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 