ಬೆಟಗೇರಿ ಗ್ರಾಮದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ
Maddi Beerasidheshwara God's festival festival program in Betageri village
ಬೆಟಗೇರಿ 18: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮನ್ನಿಕೇರಿ ಹಾದಿಗೆ ಹೊಂದಿಕೊಂಡಿರುವ ಬೆಟಗೇರಿ ತೋಟದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ, ಟಗರಿನ ಕಾಳಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆ.23ರಿಂದ ಆ.24ರವರೆಗೆ ಜರುಗಲಿವೆ.
ಆ.23ರಂದು ಮುಂಜಾನೆ 6 ಗಂಟೆಗೆ ಮಡ್ಡಿ ಬೀರಸಿದ್ಧೇಶ್ವರ ದೇವರ ದೇವಸ್ಥಾನದ ಗದ್ಗುಗೆ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 6 ಗಂಟೆಗೆ ಪುರ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು, ಅದೇ ದಿನ ಪರಸ್ಥಳದಿಂದ ವಾಲಗ ಕೂಡುವುದು. ರಾತ್ರಿ 9ಗಂಟೆಗೆ ನಾಡಿನ ಖ್ಯಾತ ಜಾನಪದ ಕಲಾವಿದ ಮತ್ತು ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಜಾತ್ರಾ ಮಹೋತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ಕಡಕೋಳ ಅಭಿನವ ಸಿದ್ರಾಯ ಅಜ್ಜನವರು, ಮಮದಾಪೂರ ಮೌನಮಲ್ಲಿಕಾರ್ಜುನ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಮುಖ್ಯ ಅತಿಥಿಗಳಾಗಿ, ತಾಪಂ, ಗ್ರಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ರಾಜಕೀಯ ಮುಖಂಡರು, ಗಣ್ಯರು, ಸಂತ-ಶರಣರು ಅತಿಥಿಗಳಾಗಿ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಆ.24ರಂದು ಮುಂಜಾನೆ 8ಗಂಟೆಗೆ ಶ್ರೀ ಬೀರಸಿದ್ಧೇಶ್ವರ ದೇವರ ಗದ್ಗುಗೆ ಅಭಿಷೇಕ, ಮಹಾಪೂಜೆ ನಡೆದ ಬಳಿಕ ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ, ಮಧ್ಯಾಹ್ನ 12 ಗಂಟೆಗೆ ಓಪನ್ ಟಗರಿನ ಕಾಳಗ ಸ್ಪರ್ಧೆ, ಮಾಹಿತಿಗಾಗಿ ಮೊಬೈಲ್ ನಂ-8197488054,9611250446,6366698073, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸಂಜೆ 6ಗಂಟೆಗೆ ಭಂಡಾರ ಒಡೆಯುವ ಕಾರ್ಯಕ್ರಮ ನಡೆದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಸ್ಥಳೀಯ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 