ರಾಣೆಬೆನ್ನೂರಲ್ಲಿ ಸಂಸದರ ಕ್ರಿಡೋತ್ಸವ: ಕುಸ್ತಿಪಟುಗಳ ತವರೂರಲ್ಲಿ ಪ್ರತಿಬಿಂಸಿದ ಕಬಡ್ಡಿ: ಕಿಕ್ಕಿರುದು ತುಂಬಿದ ಕ್ರೀಡಾಂಗಣ, ಸಂಭ್ರಮಿಸಿದ ಅಭಿಮಾನಿಗಳು
MPs' sports festival in Ranebennur: Kabaddi reflected in the wrestlers' hometown: Crowded stadium, j
ರಾಣೆಬೆನ್ನೂರು 01 : ನಾಡಿನ ಜನರ ಪ್ರೀತಿ, ವಿಶ್ವಾಸ,ಅಭಿಮಾನಕ್ಕೆ ನಾನು ತುಂಬಾ ಮೂಕ ವಿಸ್ಮಿತನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇತ್ತೀಚೆಗೆ ನಗರಸಭಾ ಕ್ರೀಡಾಂಗಣದಲ್ಲಿ, ಅವರ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಸಂಸದರ ಕ್ರೀಡಾ ಮಹೋತ್ಸವ 2025-26 ಸಮಾರೋಪ ಸಮಾರಂಭದಲ್ಲಿ ಅಭಿಮಾನಿಗಳ ಅಭಿನಂದನಾ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಭಾರತೀಯರು ಎಂದೆಂದಿಗೂ ಸ್ವಾಭಿಮಾನಿಗಳು, ಸ್ವಾಭಿಮಾನಿಯ ಬದುಕೆ ಅವರ ಜೀವನ ಮತ್ತು ಸಾಧನೆ. ಅಂತಹ ಸಾಧಕ ನಾಗರಿಕರು ಒಂದೇ ವೇದಿಕೆಯಲ್ಲಿ ಸಮ್ಮಿಲನ ಗೊಂಡಿರುವುದು ಭಾರತೀಯ ಸಂಸ್ಕೃತಿ ಭಾವೈಕ್ಯತೆಯ ಪ್ರತೀಕವಾಗಿದೆ ಎಂದರು. ರಾಣೆಬೆನ್ನೂರು ವಾಣಿಜ್ಯ ನಗರ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ವಾಣಿಜ್ಯ ಕೇಂದ್ರ, ಸಂಸ್ಕೃತಿ ಮತ್ತು ಕಬಡ್ಡಿ ಕ್ರೀಡಾಪಟುಗಳ, ಹಾಗೂ ಕಲಾವಿದರ ತವರೂರು ಇಂತಹ ಪುಣ್ಯ ಭೂಮಿಯಲ್ಲಿ ಜನ್ಮ ತಾಳಿರುವ ನಾವೆಲ್ಲರೂ ಧನ್ಯರು.
ರಾಜ್ಯದ ಭೂಪಟದಲ್ಲಿ ವಾಣಿಜ್ಯ ನಗರ ಕಂಗೊಳಿಸುತ್ತಲ್ಲಿದೆ, ಬೀಜೋದ್ಪಾದನೆಯ ಮೂಲಕ ವಾಣಿಜ್ಯ ವ್ಯವಹಾರದ ಕೇಂದ್ರ ಒಂದು ದಿನದಿಂದ ದಿನಕ್ಕೆ ಪ್ರವರ್ಧಮಾನದಲ್ಲಿ ಬೆಳೆಯುತ್ತಿರುವುದು ಜಿಲ್ಲೆಗೆ ಸಂತೋಷದ ಸಂಗತಿಯಾಗಿದೆ ಎಂದರು. ಕಬಡ್ಡಿ,ವಾಲಿಬಾಲ್, ಕೋಕೋ ಮತ್ತು ವೈಯುಕ್ತಕ ಆಟಗಳ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಬೆಳೆಗಿ, ನಗರದ ಜೊತೆಗೆ ಜಿಲ್ಲೆಗೆ ಕ್ರೀಡಾ ಸಂಸ್ಕೃತಿಯ ಗರಿ ಮೂಡಿಸಿದ್ದಾರೆ ಎಂದು ಹೇಳಿದ ಬೊಮ್ಮಾಯಿ ಅವರು ಮುಂದಿನ ದಿನಮಾನಗಳಲ್ಲಿ ಕುಸ್ತಿಪಟುಗಳ ತವರೂರಲ್ಲಿ ರಾಜ್ಯ ಮಟ್ಟದ ಕುಸ್ತಿ ಆಯೋಜಿಸಲಾಗುವುದು ಎಂದು ಘೋಷಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ, ಮಾಜಿ ಶಾಸಕ ಅರುಣಕುಮಾರ ಪೂಜಾರ ಪ್ರತಿ ವರ್ಷವೂ, ನಾ ಭೂತೋ ನಾ ಭವಿಷ್ಯತೋ ಎನ್ನುವ ರೀತಿಯಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಜನವರಿ 28ರ ಹುಟ್ಟು ಹಬ್ಬದಂದು, ತಮ್ಮ ಜೀವಿತಾವಧಿವರೆಗೂ ಇಂತಹದೇ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು, ಭಾರಿ ಜನ ಸಮುದಾಯದ ಮಧ್ಯ, ಅವರು ಘೋಷಿಸಿ, ಚಪ್ಪಾಳೆಯ ಮೂಲಕ ಸಾವಿರಾರು ನಾಗರಿಕರ ಅನುಮತಿ ಪಡೆದರು.
ಇದೇ ಸಂದರ್ಭದಲ್ಲಿ ಬೊಮ್ಮಾಯಿ ಅವರ 64ನೇ ಹುಟ್ಟುಹಬ್ಬವನ್ನು ಭಾರಿ ಗಾತ್ರದ ಕೇಕ್ ಕತ್ತರಿಸುವುದರ ಮೂಲಕ ಆಚರಿಸುವ ಮೂಲಕ ಸಂಭ್ರಮಿಸಿದರು. ಕ್ರೀಡಾಸ್ಪರ್ಧ ನೂರಾರು ವಿಜೇತರಿಗೆ, ಸಾರ್ವಜನಿಕವಾಗಿ ನಗದು ಮೊತ್ತ, ಆಕರ್ಷಕ ಪಾರಿತೋಷಕ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ಎರಡು ದಿವಸಗಳ ಕಾಲ ನಡೆದ ಕ್ರೀಡಾ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ 500ಕ್ಕೂ ಹೆಚ್ಚು ಸ್ಪರ್ದಾಳುಗಳು ಪಾಲ್ಗೊಂಡು, ತಮ್ಮ ಕ್ರೀಡಾ ಪ್ರತಿಭೆ ಮೆರೆದರು.ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ,ಕರ್ನಾಟಕ ಕೇಸರಿ ಕುಸ್ತಿಪಟು ಕಾರ್ತಿಕ ಕಾಟಿ, ಅಂತರಾಷ್ಟ್ರೀಯ ಕ್ರೀಡಾಪಟು ಅರುಹ ಖಾನ್ ನಿಂಗರಾಜ ಕೋಡಿಹಳ್ಳಿ, ಮಂಜುನಾಥ ಕಾಟಿ, ಸುಭಾಸ ಸಿರಿಗೇರಿ, ಸಂತೋಷ್ ಪಾಟೀಲ, ಪವನ್ ಕುಮಾರ್ ಮಲ್ಲಾಡದ, ಪರಮೇಶಪ್ಪ ಗೂಳಣ್ಣನವರ, ಹುಚ್ಚಪ್ಪ ಮೇಡ್ಲೇರಿ, ಶಿವಕುಮಾರ್ ಮುದ್ದಪ್ಪಳ್ಳವರ, ಮಲ್ಲಣ್ಣ ಅಂಗಡಿ, ಅಮೋಘ ಬದಾಮಿ, ರಮೇಶ ಕರಡೆಣ್ಣನವರ, ಮಣಿ ಪವಾರ, ಬಸವರಾಜ ಹುಲ್ಲತ್ತಿ, ಚೋಳಪ್ಪ ಕಸವಾಳ, ಪ್ರಕಾಶ ಪೂಜಾರ, ಜಿ.ಜಿ. ಹೊಟ್ಟಿ ಗೌಡ್ರ, ಮಂಗಳಗೌರಿ ಪೂಜಾರ, ಭಾರತಿ ಜಂಬಿಗಿ, ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 