ಚಾಂಪಿಯಿನ್‌ಷಿಪ್ ಮುಡಿಗೇರಿಸಿಕೊಂಡ ‘ಎಸ್‌ಬಿಇ ತಂಡ’

ಎಂಪಿಎಲ್‌-202  ಕ್ರಿಕೆಟ್ ಟೂರ್ನಿ:  

ಮೂಡಲಗಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂಡಲಗಿಯಲ್ಲಿ ಮಾರ್ನಿಂಗ ಸ್ಟಾರ​‍್ಸ‌ ಕ್ರಿಕೆಟ್ ಮತ್ತು ಮೂಡಲಗಿ ಲಯನ್ಸ್‌ ಕ್ಲಬ್ ಪರಿವಾರ ಸಹಯೋಗದಲ್ಲಿ ಆಯೋಜಿಸಿದ್ದ ‘ಎಂಪಿಎಲ್‌-2024’ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿಯ ಎಸ್‌ಬಿಇ ತಂಡವು ಚಾಂಪಿಯಿನಷಿಪದೊಂದಿಗೆ ರೂ.50,001 ಮತ್ತು ಟ್ರೋಪಿಯನ್ನು ಪಡೆದುಕೊಂಡಿತು. ಮೂಡಲಗಿ ರಾಯಲ್ ಚಾಲೇಂಜರ​‍್ಸ‌ ತಂಡವು ರನ್ನರ ಅಪ್ ಸ್ಥಾನದೊಂದಿಗೆ ರೂ30,001 ಹಾಗೂ ಟ್ರೋಪಿ ಮತ್ತು ಮೂಡಲಗಿ ಅಡ್ವೋಕೆಟರ​‍್ಸ‌ ತಂಡವು ರೂ.20,001 ಹಾಗೂ ಟ್ರೋಪಿಯನ್ನು ಪಡೆದುಕೊಂಡವು.  

36 ಬಾಲ್‌ಗಳಲ್ಲಿ 103 ರನ್ ಪಡೆದು ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಪಡೆದುಕೊಂಡಿರುವ ದರ್ಶನ ಪಾಟೀಲ ಸರಣಿ ಪುರುಷೋತ್ತಮ ಮತ್ತು ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾದರು. ರಂಜೀತ ಉತ್ತಮ ಬಾಲರ್ ಪ್ರಶಸ್ತಿಯನ್ನ ಪಡೆದುಕೊಂಡರು.  

ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಎನ್‌.ಟಿ. ಪಿರೋಜಿ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ಲಯನ್ಸ್‌ ಕ್ಲಬ್ ಪರಿವಾರ ಅಧ್ಯಕ್ಷ ಸಂಜಯ ಮೋಕಾಶಿ, ಬಹುಮಾನ ಪ್ರಾಯೋಜಕರಾದ ಕಿರಣ ಪ್ರಕಾಶ ಸೋನವಾಲಕರ, ಸಂದೀಪ ಮಲ್ಲಪ್ಪ ಸೋನವಾಲಕರ, ಡಾ. ಮಹೇಶ ಶಿವರಾಯಪ್ಪ ಕಂಕಣವಾಡಿ ಇವರು ವಿಜೇತ ತಂಡಗಳಿಗೆ ಬಹುಮಾನಗಳನ್ನು ನೀಡಿದರು.  

ಅತಿಥಿಗಳಾಗಿ ಪ್ರೊ. ಎಸ್‌.ಬಿ. ಖೋತ, ಬಾಲಶೇಖರ ಬಂದಿ, ಪುರಸಭೆ ಸದಸ್ಯ ಶಿವು ಚಂಡಕಿ, ಪಿಕೆಪಿಎಸ್ ಸೊಸೈಟಿ ಅಧ್ಯಕ್ಷ ಪ್ರಶಾಂತ ನಿಡಗುಂದಿ, ಈರಣ್ಣ ಜಕಾತಿ, ವೀರೇಶ ಢವಳೇಶ್ವರ, ಗೀರೀಶ ಆಸಂಗಿ, ಭೀಮಶಿ ಬಡಗಣ್ಣವರ, ಭುಜನ್ನವರ ಇದ್ದರು.  

ಸಂಘಟಕರಾದ ಮಾರ್ನಿಂಗ್ ಸ್ಟಾರ್ ಕ್ರಿಕೆಟರ​‍್ಸ‌ನ ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ, ಸನಿತ ಸೋನವಾಲಕರ, ಗೀರೀಶ ಮೇತ್ರಿ,  ಸೋಮು ಮಠಪತಿ, ಸನೀತ ಸೋನವಾಲಕರ, ಪ್ರವೀಣ ಕುರಬಗಟ್ಟಿ, ಲಕ್ಕಪ್ಪ ತಳವಾರ, ಶಂಕರಯ್ಯ ಹಿರೇಮಠ, ರವಿ ಪತ್ತಾರ, ಎಂ.ಜಿ. ಗೌಡರ, ದೇವೆಂದ್ರ ಕಲಾಲ, ಉಸ್ಮಾನ ಮುಲ್ಲಾ ಇದ್ದರು.