ಆಧಾರ್ ಸೇವಾ ಕೇಂದ್ರಕ್ಕೆ ಸಂಸದ ರಮೇಶ್ ಜಿಗಜಿಣಗಿ ಭೇಟಿ

 ಆಧಾರ್ ಸೇವಾ ಕೇಂದ್ರಕ್ಕೆ ಸಂಸದ ರಮೇಶ್ ಜಿಗಜಿಣಗಿ ಭೇಟಿ MP Ramesh Jigajinagi visits Aadhaar Seva Kendra

ಲೋಕದರ್ಶನ ವರದಿ

ವಿಜಯಪುರ, ಆ.೨೪: ನಗರದ ಆಶ್ರಮ ರಸ್ತೆಯಲ್ಲಿರುವ ಆಧಾರ್ ಸೇವಾ ಕೇಂದ್ರಕ್ಕೆ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ್ ಜಿಗಜಿಣಗಿ ಸೋಮವಾರ ಭೇಟಿ ನೀಡಿ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳ ಪರಿಶೀಲನೆ ನಡೆಸಿದರು. 

ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳ ಮಾಹಿತಿ ಪಡೆದ ಸಂಸದರು, ಆಧಾರ್ ಸಂಬAಧಿತ ಕೆಲಸಗಳಿಗೆ ಆಗಮಿಸುವ ನಾಗರಿಕರಿಗೆ ಯಾವುದೇ ತೊಂದರೆಯಾಗದAತೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸಿಬ್ಬಂದಿಗೆ ಸೂಚಿಸಿದರು. 

ಕೇಂದ್ರದಲ್ಲಿ ನೋಂದಣಿ,  ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳನ್ನು ಸುಗಮವಾಗಿ ಒದಗಿಸಲಾಗುತ್ತಿದ್ದು, ಸೌಲಭ್ಯಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಸಂಸದರು ಮಾಹಿತಿ ಪಡೆದರು. 

ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ವಾರದ ಏಳು ದಿನವೂ ಕೇಂದ್ರ ತೆರೆದಿರುತ್ತದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದರು ಹೇಳಿದರು. 

ನಾಗರಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ದೊರೆಯುವಂತೆ ಹಾಗೂ ಅರ್ಜಿದಾರರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಭೀಮಾಶಂಕರ ಹದನೂರು, ಮಹಾನಗರ ಪಾಲಿಕೆ ಸದಸ್ಯ ಮಳನಗೌಡ ಪಾಟೀಲ, ಸಂದೀಪ ಪಾಟೀಲ, ವಿಜಯ ಜೋಶಿ, ಚಿನ್ನು ಚಿನಗುಂಡಿ, ಉದಯ ಕನಹೊಳಿ ಸೇರಿದಂತೆ ವ್ಯವಸ್ಥಾಪಕ ಅರವಿಂದ ಪೂಜಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.