ಸಂಸದ ಪಿ ಸಿ ಗದ್ದಿಗೌಡರ ಶಾಸಕ ಸಿದ್ದು ಸವದಿಯಿಂದ ಮನ್ ಕಿ ಬಾತ್ ವೀಕ್ಷಣೆ
MP P.C. Gaddigowdar's MLA Sidhu Savadi watches Mann Ki Baat
ಮಹಾಲಿಂಗಪುರ 31: ನಗರದ ಬಿಜೆಪಿ ಮುಖಂಡ ಶಿವಾನಂದ ಅಂಗಡಿ,ಅವರ ಕಾರ್ಯಾಲಯದಲ್ಲಿ ಅ.31ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಸಂಸದ ಪಿ ಸಿ ಗದ್ದಿಗೌಡ,ಶಾಸಕ ಸಿದ್ದು ಸವದಿಯವರು ಭಾನುವಾರ ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಬೇಕೆಂಬ ಸದಾಶಯದೊಂದಿಗೆ ಕೆಲಸ ಮಾಡುತ್ತಿದ್ದು,ದೇಶದ ನಾಗರಿಕರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಪ್ರತಿ ತಿಂಗಳು ‘ಮನ್ ಕಿ ಬಾತ್’ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.ಕಾರ್ಯಕ್ರಮ ಯಶಸ್ವಿಯಾಗಿ 125 ಸಂಚಿಕೆ ಪೂರೈಸಿದೆ ಎಂದು ಸಂಸದ ಪಿ ಸಿ ಗದ್ದಿಗೌಡರ ಹೇಳಿದರು.
ನಂತರ ಶಾಸಕ ಸಿದ್ದು ಸವದಿ ಮಾತನಾಡಿ ಪ್ರತಿ ತಿಂಗಳು ಹೊಸ ವಿಚಾರಗಳ ಬಗ್ಗೆ ಪ್ರಸ್ತಾಪಿಸುವ ಪ್ರಧಾನಿಯವರು ಸಕಾರಾತ್ಮಕ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ಜನತೆಗೆ ಕಾರ್ಯಕ್ರಮ ಬಹಳಷ್ಟು ಇಷ್ಟವಾಗಿದೆ.ರೇಡಿಯೋ,ದೂರದರ್ಶನ ಮತ್ತು ಯುಟ್ಯೂಬ್ ಮೂಲಕ ಕೋಟ್ಯಾಂತರ ಜನ ವೀಕ್ಷಿಸುತ್ತಿದ್ದಾರೆ.ದಿನೇ ದಿನೇ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ ಮತ್ತು ದೊಡ್ಡ ಸಂಖ್ಯೆಯಲ್ಲಿ ಯುವಜನತೆ ಪ್ರಧಾನಿ ಮೋದಿ ಅವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಕಾರ್ಯಕ್ರಮ ಎಲ್ಲರಿಗೂ ಇಷ್ಟವಾಗುತ್ತಿದೆ. ಆದ್ದರಿಂದಲೇ ‘ಮನ್ ಕೀ ಬಾತ್’ ಕಾರ್ಯಕ್ರಮ ದಿನದಿಂದ ದಿನಕ್ಕೆ ಜನಮನ ಸೆಳೆಯುತ್ತಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಬಿಜೆಪಿ ಮುಖಂಡರಾದ ಜಿ ಎಸ್ ಗೊಂಬಿ, ಮಹಾಲಿಂಗಪ್ಪ ಕುಳ್ಳೋಳಿ, ಗುರುಪಾದ ಅಂಬಿ, ಹನಮಂತ ಬರುಡ, ಶಂಕರಗೌಡ ಪಾಟೀಲ, ಪುಡಲಿಕ್ ಗಡೆಕರ, ಮಲ್ಲಪ್ಪ ದಲಾಲ, ತಿಪ್ಪಣ್ಣ ಬಂಡಿವಡ್ಡರ, ಚೇತನ ಬಂಡಿವಡ್ಡರ, ಸಿದ್ದಪ್ಪ ಸಗರಿ, ಮಹೇಶ ಜಿಡ್ಡಿಮನಿ, ವಿಜಯಕುಮಾರ ಕುಳಲಿ, ಜಗದೀಶ ಜಕ್ಕನ್ನವರ, ಮಹಾಲಿಂಗಪ್ಪ ಬುದ್ನಿ, ಬಸವರಾಜ ಮಡಿವಾಳ, ಸೇರಿದಂತೆ ಇತರರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 