ಹಾರೂಗೇರಿಯಲ್ಲಿ ಶಾಸಕ ತಮ್ಮಣ್ಣವರ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ

ಹಾರೂಗೇರಿಯಲ್ಲಿ ಶಾಸಕ ತಮ್ಮಣ್ಣವರ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ MLA Thammannavar's Pulse Polio Program launched in Harugeri


  ಹಾರೂಗೇರಿ, 22 : ಪೋಲಿಯೋ ಒಂದು ಮಾರಕ ರೋಗವಾಗಿದ್ದು, 5 ವರ್ಷದೊಳಗಿನ ಯಾವುದೇ ಮಗು ಈ ಲಸಿಕೆಯಿಂದ ವಂಚಿತವಾಗದಂತೆ ಪ್ರತಿಯೊಬ್ಬ ಮಗುವಿನ ತಂದೆ-ತಾಯಿ, ಪೋಷಕರು ನೋಡಿಕೊಳ್ಳಬೇಕು ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

  ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರವಿವಾರ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರೋಗ್ಯ ಇಲಾಖೆ ನಾಲ್ಕು ದಿನಗಳ ಕಾಲ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಹೇಳಿದರು. 

  ವೈದ್ಯಾಧಿಕಾರಿ ಡಾ.ಸುಮಿತ ಪಾಟೀಲ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿ 24 ಬೂತಗಳನ್ನು ತೆರೆಯಲಾಗಿದ್ದು, 5 ವರ್ಷದೊಳಿಗ 6487 ಮಕ್ಕಳಿದ್ದಾರೆ. ಒಂದೇ ದಿನದಲ್ಲಿ 6162 ಮಕ್ಕಳಿಗೆ ಲಸಿಕೆ ಹಾಕಿಸಲಾಗಿದೆ. ಉಳಿದ ಮಕ್ಕಳಿಗೆ 3 ದಿನಗಳವರೆಗೆ  ಮನೆಮನೆಗೆ ತೆರಳಿ ಮತ್ತು ಕಬ್ಬು ಕಡಿಯುವ ಗ್ಯಾಂಗ್ ಮತ್ತು ಇಟ್ಟಂಗಿ ಭಟ್ಟಿಯಲ್ಲಿನ ಮಕ್ಕಳೂ ಸಹ ಲಸಿಕೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು 

  ತಾಲೂಕು ವೈದ್ಯಾಧಿಕಾರಿ ಡಾ.ಸೋಮನಗೌಡರ ಪಾಟೀಲ, ಡಾ.ಮಲ್ಲಿಕಾರ್ಜುನ ಆಸಂಗಿ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶಕಿ ಭಾರತಿ ಕಾಂಬಳೆ, ವಸಂತ ಪಾಟೀಲ, ಸುಹಾಸಿನಿ ಹತ್ತಿ, ಸಿದ್ರಾಮ ಕಾಂಬಳೆ, ಹಣಮಂತ ಅಥಣಿ, ದಾವೂದ ನದಾಫ್, ಶರಾವತಿ ನಿಡಸೋಸಿ, ರೂಪಾ ಹಾಲಬಾಂವಿ, ಪ್ರಭಾವತಿ ಗವಾಣಿ, ಸೀಮಾ ಪಾಟೀಲ, ವಿಜಯಾ ಬೊಮ್ಮನಾಳ, ಉಷಾ ಟೋಪಗಿ, ಮೀನಾಕ್ಷಿ ಕಿರಣಗಿ ಮೊದಲಾದವರು ಉಪಸ್ಥಿತರಿದ್ದರು.