ಶಾಸಕ ರಾಜು ಕಾಗೆ ಜನ್ಮ ದಿನ, ಅಥಣಿಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ

ಶಾಸಕ ರಾಜು ಕಾಗೆ ಜನ್ಮ ದಿನ, ಅಥಣಿಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ MLA Raju Kage's birthday, fruits distributed to patients in Athani

ಲೋಕದರ್ಶನ ವರದಿ 

ಅಥಣಿ. 21: ಕಾಗವಾಡ ಶಾಸಕ, ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಮತ್ತು ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ರಾಜು ಕಾಗೆಯವರ 68 ನೇ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ತಾಲೂಕಾ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸುವ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಶಾಸಕ ರಾಜು ಕಾಗೆಯವರ ರಾಜಕೀಯ ಭವಿಷ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತರೊತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದ ಅವರು ರಾಜು ಕಾಗೆ ಸಾಕಷ್ಟು ವರ್ಷಗಳಿಂದ ರಾಜಕೀಯ, ಸಾಮಾಜಿಕ, ಸಹಕಾರ ಕ್ಷೇತ್ರಗಳ ಮೂಲಕ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು, ಮುಂದೆಯೂ ಸಹ ಇದೇ ರೀತಿ ಸೇವೆ ಒದಗಿಸಲಿ ಎಂದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕಿ ಸುನೀತಾ ಐಹೊಳೆ, ಕಾಂಗ್ರೆಸ್ ಮುಖಂಡರಾದ ಸಿದ್ಧಾರ್ಥ ಸಿಂಗೆ, ರಾವಸಾಹೇಬ ಐಹೊಳೆ, ಸೈಯ್ಯದ ಗಡ್ಡೇಕರ, ಸಲಾಂ ಕಲ್ಲಿ,  ರಾಜು ಬಿಳ್ಳೂರ, ನಗರ ಸಭಾ ಸದಸ್ಯರಾದ ವೀಲೀನರಾಜ ಯಳಮೇಲಿ, ಸೈಯ್ಯದಮೀನ್ ಗದ್ಯಾಳ ರಮೇಶ ಪವಾರ, ಉದಯ ಸೋಳಸಿ, ರಿಯಾಜ ಸನದಿ, ಬಾಬು ಖೆಮಲಾಪುರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರಾಜು ಕಾಗೆ ಅಭಿಮಾನಿಗಳು ಪಾಲ್ಗೊಂಡಿದ್ದರು.