ಉಚಿತ ಶಿಕ್ಷಣ ಕ್ರಾಂತಿಗೆ ಶಾಸಕ ಪಠಾಣರ ದಿಟ್ಟ ಹೆಜ್ಜೆ
MLA Pathana's bold step towards free education revolution
ಉಚಿತ ಶಿಕ್ಷಣ ಕ್ರಾಂತಿಗೆ ಶಾಸಕ ಪಠಾಣರ ದಿಟ್ಟ ಹೆಜ್ಜೆ
ಶಿಗ್ಗಾವಿ 27: ತಾಲೂಕಿಗೆ ಎರಡು ಹೊಸ ಕೆಪಿಎಸ್ ಶಾಲೆಗಳಿಗೆ ಸರ್ಕಾರದಿಂದ ಮೊದಲ ಹಂತದ ಅನುಮೋದನೆ ತರುವ ಮೂಲಕ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಅನುಸರಣೆಗೆ ಮುನ್ನುಡಿ ಬರೆದಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ 6 ವಸತಿ ಶಾಲೆ, 6 ಪೂರ್ವ ಪ್ರಾಥಮಿಕ, 161 ಪ್ರಾಥಮಿಕ, 5 ಪ್ರಾಥಮಿಕ ಆಂಗ್ಲ ಮಾಧ್ಯಮ, 1 ಕೆಪಿಎಸ್ 25 ಕನ್ನಡ ಪ್ರೌಢಶಾಲೆಗಳಿದ್ದು, ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ಸೇರಿದಂತೆ 33,745 ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದವರೆಗೆ ಕಲೆಯುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ 26540 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು ನೀಡುವ ಆವಶ್ಯಕತೆ ಇದೆ. ಮೊದಲ ಅನುಮೋದನೆಯಲ್ಲಿ ಹಂತದ ತಾಲೂಕಿನ ಕೋಣನಕೇರಿ, ಹಿರೇಬೆಂಡಿಗೇರಿಗೆ ಕೆಪಿಎಸ್ ಶಾಲೆಗಳನ್ನು ಉನ್ನತೀಕರಿಸಿದ್ದು, ಇನ್ನು 5ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳನ್ನು ಕ್ಷೇತ್ರಕ್ಕೆ ತರುವ ಭರವಸೆಯನ್ನು ಶಾಸಕ ಯಾಸೀರೆ ಅಹ್ಮದ್ ಖಾನ್ ಪಠಾಣ್ ಅವರು ಕ್ಷೇತ್ರದ ಜನತೆಗೆ ನೀಡಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹೆಚ್ಚಿಸಿ ಗುಣಮಟ್ಟದ ಶಿಕ್ಷಣ ಒದಗಿಸುವ ಭರವಸೆ ಮೂಡಿಸಿದ್ದಾರೆ.
ಭಾಕ್ಸ ಸುದ್ದಿ : ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಮೇಲಿರುವ ಬದ್ಧತೆಯ ಫಲವಾಗಿ ಶಿಗ್ಗಾವಿ ತಾಲೂಕಿನ ಕೋಣನಕೇರಿ, ಹೀರೆಬೆಂಡಿಗೇರಿ ಸರ್ಕಾರಿ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು ಮೊದಲ ಹಂತದ ಅನುಮೋದನೆ ದೊರೆತಿದೆ. ಇನ್ನಷ್ಟು ಕೆಪಿಎಸ್ ಶಾಲೆಗಳನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ.ಶಾಸಕ ಶಿಗ್ಗಾವಿ-ಸವಣೂರ ಯಾಸೀರ್ ಅಹ್ಮದ್‌ಖಾನ್ ಪಠಾಣ್ಷಭಾಕ್ಸ ಸುದ್ದಿ : ಕೆಪಿಎಸ್ ಶಾಲೆಗಳ ಸಂಖ್ಯೆ ಹೆಚ್ಚಿಸುವುದರಿಂದ ಒಂದೇ ಸೂರಿನಡಿ ನರ್ಸರಿಯಿಂದ ಕಾಲೇಜು ಶಿಕ್ಷಣದವರೆಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಹಾಯವಾಗುತ್ತದೆ. ತಾಲೂಕಿನಲ್ಲಿ ಹೊಸದಾಗಿ ಎರಡು ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣಕ್ಕೆ ಅನುಕೂಲವಾಗಲಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ.್ಷ
್ಷಭಾಕ್ಸ ಸುದ್ದಿ : ಕ್ಷೇತ್ರಕ್ಕೆ 8 ವಸತಿ ಶಾಲೆಗಳನ್ನು, 16 ಅಂಗನವಾಡಿ ಕೇಂದ್ರ, 102 ಶಾಲಾ ಕೊಠಡಿಗಳ ನಿರ್ಮಾಣ, 16 ಹೈಟೆಕ್ ಶೌಚಾಲಯ ಸೇರಿದಂತೆ ಐಟಿಐ, ಪಿಯು ಕಾಲೇಜು,ಜಿ.ಟಿ.ಟಿ.ಸಿ, ಜನಪದ ವಿಶ್ವ ವಿದ್ಯಾಲಯ, ವೆಟರ್ನರಿ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ.ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ.ಕೆ.ಪಿ.ಎಸ್ ವ್ಯವಸ್ಥೆಯಲ್ಲಿ 1200ವಿದ್ಯಾರ್ಥಿಗಳಿಂದ 1800 ವಿದ್ಯಾರ್ಥಿಗಳಿಗೆ ನರ್ಸರಿಯಿಂದ ಪಿ.ಯು.ಸಿ ವರೆಗೆ ಕೋಣನಕೇರಿ, ಹಿರೇಬೆಂಡಿಗೇರಿ ಶಾಲೆಗಳಿಗೆ ತಲಾ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಹೊಸ ಕಟ್ಟಡಗಳು, ಉಚಿತ ಸಾರಿಗೆ, ಉತ್ತಮ ಶಿಕ್ಷಣ ನೀಡುವ ಉದ್ದೇಶವನ್ನು ಶಾಸಕರು ಹೊಂದಿದ್ದಾರೆ ಎನ್ನಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 