ಹರ್ಷವರ್ಧನ್ ನಿಧನಕ್ಕೆ ಶಾಸಕ ಎಂ.ಎಲ್.ಎ. ನೇಮಿರಾಜ್ ನಾಯಕ್ ಸಂತಾಪ
MLA Nemiraj Naik condoles the demise of Harshavardhan
ಕೊಟ್ಟೂರು 10: ಕೊಟ್ಟೂರು ಭಾಗದ ಜನಪ್ರಿಯ ರಾಜಕೀಯ ಶಕ್ತಿಯಾಗಿದ್ದ ಎಂ.ಎಂ.ಜಿ. ಹರ್ಷವರ್ಧನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಶಾಸಕ ಎಂ.ಎಲ್.ಎ. ನೇಮಿರಾಜ್ ನಾಯಕ್ ಸಂತಾಪ ವ್ಯಕ್ತಪಡಿಸಿದರು.
ಕೊಟ್ಟೂರು ಭಾಗಕ್ಕೆ ಯಾವಾಗ ಬಂದರೂ, ಊರಿನ ಹೊರಗಡೆ ನಿಂತು ಜನರು ಅಪಾರ ಪ್ರೀತಿ ಹಾಗೂ ಆತ್ಮೀಯತೆಯಿಂದ ಸ್ವಾಗತಿಸುತ್ತಿದ್ದರು. ನನ್ನ ಗೆಲುವಿನಲ್ಲಿ ಹರ್ಷವರ್ಧನ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು.
ಕೊಟ್ಟೂರು ಅಭಿವೃದ್ಧಿ ವಿಚಾರಗಳಲ್ಲಿ ಸದಾ ನನ್ನೊಂದಿಗೆ ಚರ್ಚಿಸಿ, ಎಲ್ಲ ವಾರ್ಡ್ಗಳಲ್ಲಿಯೂ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು.
ಬಡವರು ಹಾಗೂ ದೀನದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಹರ್ಷವರ್ಧನ್ ಅವರು ಮಠಮಾನ್ಯಗಳ ಬಗ್ಗೆಯೂ ಸದಾ ಗೌರವ ಹಾಗೂ ಚಿಂತನೆ ಹೊಂದಿದ್ದರು. ಅವರು ಉತ್ತಮ ಓದುಗರಾಗಿದ್ದು, ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದರು. ಸದಾ ನೇರ, ನಿಷ್ಠುರ ಹಾಗೂ ನ್ಯಾಯಪರ ನಿಲುವು ಹೊಂದಿದ್ದ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.
ಹರ್ಷವರ್ಧನ್ ಅವರ ಮನೆ ಸದಾ ಅಭಿಮಾನಿಗಳಿಂದ ತುಂಬಿರುತ್ತಿತ್ತು. ಅನೇಕ ಬಡ ಕುಟುಂಬಗಳಿಗೆ ನ್ಯಾಯ ದೊರಕಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಕೊಟ್ಟೂರು ಸೇರಿದಂತೆ ಸುತ್ತಮುತ್ತಲಿನ 40-50 ಗ್ರಾಮಗಳಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದ ಅವರ ಅಗಲಿಕೆ ಮನಸ್ಸಿಗೆ ತೀವ್ರ ನೋವು ತಂದಿದೆ ಎಂದು ತಿಳಿಸಿದರು.
ಹರ್ಷವರ್ಧನ್ ಅವರನ್ನು ಕಳೆದುಕೊಂಡಿರುವುದು ನನಗೆ ಅನಾಥ ಭಾವನೆ ಮೂಡಿಸಿದೆ. ಇಂತಹ ದೊಡ್ಡ ರಾಜಕೀಯ ವ್ಯಕ್ತಿತ್ವ ಮತ್ತೆ ಹುಟ್ಟಿ ಬರುವುದು ಕಷ್ಟ. ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಅಂತಿಮ ಯಾತ್ರೆಯಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿರುವುದನ್ನು ಕಂಡು ಭಾವುಕರಾದೆ. ಹರ್ಷವರ್ಧನ್ ಅವರ ಜನಪ್ರೀತಿ ಮತ್ತು ಸೇವೆಯ ಪ್ರತೀಕ ಇದಾಗಿದೆ ಎಂದು ಶಾಸಕ ನೇಮಿರಾಜ್ ನಾಯಕ್ ಹೇಳಿದರು.
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ 