ರೈತರ ಮಾಗಾಣಿ ಬನವಾಸಿ ಸಿಸಿ ರಸ್ತೆ ಅಭಿವೃದ್ಧಿಗೆ ಶಾಸಕ ಗಣೇಶ ಶಂಕುಸ್ಥಾಪನೆ

ರೈತರ ಮಾಗಾಣಿ ಬನವಾಸಿ ಸಿಸಿ ರಸ್ತೆ ಅಭಿವೃದ್ಧಿಗೆ ಶಾಸಕ ಗಣೇಶ ಶಂಕುಸ್ಥಾಪನೆ MLA Ganesh lays foundation stone for development of Banavasi CC road, farmers' market

ಕಂಪ್ಲಿ  14:  ಪಟ್ಟಣದ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಬಳಿಯಲ್ಲಿ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಸುಮಾರು 509.9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಕೋಟೆಯಿಂದ ರಾಮಸಾಗರವರೆಗಿನ ಬನವಾಸಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಶನಿವಾರ ಭೂಮಿ ಪೂಜೆ ಸಲ್ಲಿಸಿದರು.

ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕಂಪ್ಲಿ-ಕೋಟೆ ಪ್ರದೇಶದಿಂದ ರಾಮಸಾಗರವರೆಗೆ ಸಿಸಿ ರಸ್ತೆ ಮಾಡಲಾಗುತ್ತಿದ್ದು, ಇಲ್ಲಿನ ರೈತರು ಸಹಕಾರದಿಂದ ಒಳ್ಳೆಯ ರಸ್ತೆ ಮಾಡಿಸಿಕೊಳ್ಳಬೇಕು. ಉಳಿದ ಬನವಾಸಿ ರಸ್ತೆಯನ್ನು ಕೆಕೆಆರ್‌ಡಿಬಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಅತಿ ಶೀಘ್ರದಲ್ಲೇ ಜವುಕು-ದೇವಸಮುದ್ರ, ಸೋಮಸಮುದ್ರ-ಮದುರೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇಡಿ ಅಧಿಕಾರಿಗಳು ಮನೆಗೆ ದಾಳಿ ಮಾಡಿದಾಗ ಮಹಜರು ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಕೆಲವೊಂದು ಪತ್ರಿಕೆಯಲ್ಲಿ 5 ಕೆಜಿ ಬಂಗಾರ, 200 ಎಕರೆ ಭೂಮಿ ದಾಖಲೆಗಳು ಸಿಕ್ಕಿವೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ್ದು, ಇಂತಹವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಮಾಧ್ಯಮದ ಮೇಲೆ ನಂಬಿಕೆ ಇದೆ. ಆದರೆ, ಸುಳ್ಳು ವರದಿ ಮಾಡಿದರೆ ನಂಬಿಕೆ ಉಳಿಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲೊಡ್ಡು ಹೊನ್ನೂರವಲಿ, ಸಿ.ಆರ್‌.ಹನುಮಂತ, ರೈತ ಸಂಘದ ಅಧ್ಯಕ್ಷ ನವೀನ್ ಮಣ್ಣೂರು, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಕೆ.ಚಂದ್ರಶೇಖರ, ಹೊನ್ನೂರವಲಿ, ವಾಬುಸಾಬ್, ಕೆ.ಮಂಜು, ಎ.ಪರಶಪ್ಪ, ಶಂಕರ್, ಕೆ.ಷಣ್ಮುಕಪ್ಪ, ಕರಿಬಸವನಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.