ಮನ್ ಕಿ ಬಾತ್ ವೀಕ್ಷಿಸಿದ ಶಾಸಕ- ಡಾ. ಚಂದ್ರು ಲಮಾಣಿ

ಮನ್ ಕಿ ಬಾತ್ ವೀಕ್ಷಿಸಿದ  ಶಾಸಕ- ಡಾ. ಚಂದ್ರು ಲಮಾಣಿ   MLA Dr. Chandru Lamani watched 'Mann Ki Baat'

ಲಕ್ಮೇಶ್ವರ" 26 :  ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರ ಮನ್ ಕೀ ಬಾತ್"136ನೇ ಸಂಚಿಕೆಯನ್ನು ವಿಧಾನ ಪರಿಷತ ಸದಸ್ಯರಾದ ಲಿಂಗರಾಜ್ ಪಾಟೀಲ್ ಅವರು ಶಾಸಕ ಡಾ ಚಂದ್ರು .ಕೆ .ಲಮಾಣಿ ಅವರು ಸ್ಥಳೀಯ ಮುಖಂಡರು, ಪದಾಧಿಕಾರಿಗಳೊಂದಿಗೆ ವೀಕ್ಷಿಸಲಾಯಿತು.  ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಅವರು,ಏಕ್ ಪೇಡ್ ಮಾ ಕೆ ನಾಮ್‌’* ಅಭಿಯಾನ, ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಮರಾಠಾ ಕೋಟೆಗಳು, ಭಾರತದ ಬಾಹ್ಯಾಕಾಶ ಸಾಧನೆಗಳು ಹಾಗೂ ಯುವಶಕ್ತಿಯ ಪಾತ್ರದ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು.  ವಿಕಸಿತ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ ಎಂಬ ಸಂದೇಶವನ್ನು ಕಾರ್ಗಿಲ್ ವಿಜಯೋತ್ಸವ ಕುರಿತು ಪ್ರಧಾನಿ ಅವರು ಮಾತನಾಡಿರುವುದನ್ನು ವೀಕ್ಷಿಸಿದರು.