ಸಂಸದರ ಕ್ರೀಡಾ ಮಹೋತ್ಸವದ ಲೋಗೋ, ಸಮವಸ್ತ್ರ ಅನಾವರಣ
Logo and uniforms of the MPs' Sports Festival unveiled
ಶಿಗ್ಗಾವಿ 27 : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಡೆಯುವ ಧಾರವಾಡ ಸಂಸದರ ಕ್ರೀಡಾ ಮಹೋತ್ಸವ ಶಿಗ್ಗಾವಿಯಲ್ಲಿ ಜ.29, 30 ರಂದು ನಡೆಯಲಿದೆ ಎಂದು ಬಿಜೆಪಿ ಮುಖಂಡ ಭರತ ಬೊಮ್ಮಾಯಿ ತಿಳಿಸಿದರು. ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಕ್ರೀಡಾ ಕಾರ್ಯಕ್ರಮದ ವೇದಿಕೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶಿಗ್ಗಾವಿ, ಸವಣೂರ ತಾಲೂಕಿನ 16 ವರ್ಷದಿಂದ 25 ವರ್ಷ ವಯಸ್ಸಿನ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿದೆ ಎಂದರು. ಧಾರವಾಡ ಜಿಲ್ಲೆಯ ವಿಧಾನಸಭಾ ಆಟಗಳು ಮತ್ತು ವೈಯಕ್ತಿಕ ಆಟಗಳನ್ನು ಕ್ಷೇತ್ರದಿಂದ ನಡೆಯಲಿರುವ ಕಬಡ್ಡಿ, ಒಳಗೊಂಡಿದೆ. ಪ್ರತಿ ವಿಧಾನಸಭಾ ಖೋಖೋ, (ಪುರುಷ-ಮಹಿಳಾ), ಮಲ್ಲಕಂಬ, ಪಡೆದ ಕ್ರೀಡಾಪಟುಗಳನ್ನು ಲೋಕಸಭಾ ಲಗೋರಿ, ಕುಸ್ತಿ ಮುಂತಾದ ಗುಂಪು ಅಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಶಿಗ್ಗಾವಿ,ಸವಣೂರ ಕ್ಷೇತ್ರದ ವ್ಯಾಪ್ತಿಯಲ್ಲಿ ಗೆಲ್ಲುವ ಕ್ರೀಡಾಪಟುಗಳಿಗೆ ಟ್ರೋಫಿ, ನಗದು ಬಹುಮಾನ ಕೊಡಲಾಗುತ್ತದೆ. 200ಕ್ಕೂ ಹೆಚ್ಚು ಕ್ರೀಡಾಪಟುಗಳು ಹೆಸರು ನೊಂದಾಯಿಸಿದ್ದಾರೆ. ಕ್ರೀಡಾಪಟು, ಪ್ರೇಕ್ಷಕರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶೋಭಾ ನಿಸ್ಸಿಮಗೌಡ್ರ, ಮುಖಂಡರಾದ ನರಹರಿ ಕಟ್ಟಿ, ಶಿವಾನಂದ ಮ್ಯಾಗೇರಿ, ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಶಿವಪುತ್ರ್ಪ ಪಾಟೀಲ, ಕಲಕೋಟಿ, ಡಾ.ಮಲ್ಲೇಶಪ್ಪ ಹರಿಜನ, ಗಂಗಾಧರ ಬಾಣದ, ರೇಣುಕನಗೌಡ ಪಾಟೀಲ, ಅನಿಲ ಸಾತಣ್ಣವರ, ಪರಶುರಾಮ ಸೊನ್ನದ, ಬಸವರಾಜ ಸವೂರು, ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 